»   » ಒಂದೊಳ್ಳೆ ಕೆಲಸಕ್ಕಾಗಿ ಒಂದಾಗ್ತಾರ ದರ್ಶನ್ ಮತ್ತು ಯಶ್.!

ಒಂದೊಳ್ಳೆ ಕೆಲಸಕ್ಕಾಗಿ ಒಂದಾಗ್ತಾರ ದರ್ಶನ್ ಮತ್ತು ಯಶ್.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್......ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ರೆ ಹೇಗಿರುತ್ತೆ ಅಲ್ವಾ.! ಅಂತಹದೊಂದು ಸುದ್ದಿ ದರ್ಶನ್ ಅವರ 'ಚಕ್ರವರ್ತಿ' ಸಿನಿಮಾದ ಸಮಯದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.

'ಚಕ್ರವರ್ತಿ' ಚಿತ್ರದಲ್ಲಿ ಯಶ್ ಅಭಿನಯಿಸ್ತಾರೆ ಎಂಬ ಸುದ್ದಿ ಕೇಳಿ ಇಡೀ ಸ್ಯಾಂಡಲ್ ವುಡ್ ಫುಲ್ ಖುಷಿ ಆಗಿತ್ತು. ಆದ್ರೆ, ಆಮೇಲೆ ಅದು ಸುಳ್ಳು ಎಂದು ಗೊತ್ತಾದಾಗ, ಈ ಸುಳ್ಳು ಯಾವಾಗ ನಿಜಾ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಈಗ, ಈ ಇಬ್ಬರು ಒಟ್ಟಾಗುತ್ತಿರುವ ಸುದ್ದಿಯೊಂದು ಮೈಸೂರಿನಿಂದ ಕೇಳಿ ಬರುತ್ತಿದೆ. ಆದ್ರೆ, ಚಿತ್ರದಲ್ಲಿ ಅಭಿನಯಿಸುವ ವಿಚಾರಕ್ಕಲ್ಲ, ಬದಲಾಗಿ ಒಂದೊಳ್ಳೆ ಕೆಲಸಕ್ಕಾಗಿ. ಏನದು ಮುಂದೆ ಓದಿ.....

ಸ್ವಚ್ಛ ಭಾರತ ಅಭಿಯಾನದಲ್ಲಿ ಯಶ್-ದರ್ಶನ್

ಮೈಸೂರು ಮಹಾನಗರ ಪಾಲಿಕೆ ಅಯೋಜಿಸಲಿರುವ 2018ನೇ ಸಾಲಿನ ಸ್ವಚ್ಛ ಭಾರತ ಅಭಿಯಾನಕ್ಕೆ ನಟ ದರ್ಶನ್ ಮತ್ತು ಯಶ್ ಅವರನ್ನ ರಾಯಭಾರಿಗಳಾಗಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ.

[ರಾಜಕೀಯಕ್ಕೆ ಧುಮುಕುತ್ತಾರಾ ರಾಕಿಂಗ್ ಸ್ಟಾರ್.? ನಟ ಯಶ್ ಹೇಳಿದ್ದೇನು.?]

ಮೈಸೂರು 'ಸ್ಟಾರ್ಸ್'

ನಟ ದರ್ಶನ್ ಮತ್ತು ಯಶ್ ಇಬ್ಬರು ಮೈಸೂರು ಭಾಗದವರೇ ಆಗಿರುವುದರಿಂದ ಈ ಕಾರ್ಯಕ್ರಮ ಯಶಸ್ವಿ ಆಗುತ್ತೆ ಎಂಬ ಚಿಂತನೆ ಮಾಡಿದೆಯಂತೆ ಮೈಸೂರು ಮಹಾನಗರ ಪಾಲಿಕೆ.

['ತಾರಕ್'ಗಾಗಿ ಮಲೇಷ್ಯಾದಲ್ಲಿ ದರ್ಶನ್ ಅದ್ಧೂರಿ ಸಾಹಸ]

ಒಪ್ಪಿಕೊಳ್ಳುವ ಸಾಧ್ಯತೆ ಇದೆ

ಇನ್ನು ದರ್ಶನ್ ಹಾಗೂ ಯಶ್ ಇಬ್ಬರು ಈ ಅಭಿಯಾನಕ್ಕೆ ರಾಯಭಾರಿಗಳಾಗಲು ಒಪ್ಪಿಕೊಳ್ಳುವ ಸಾಧ್ಯತೆ ಎನ್ನಲಾಗುತ್ತಿದೆ. ಈಗಾಗಲೇ ಯಶ್ 'ಯಶೋಮಾರ್ಗ'ದ ಮೂಲಕ ತಮ್ಮನ್ನ ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ದರ್ಶನ್ ಕೂಡ ಇಂತಹ ಒಳ್ಳೆ ಕೆಲಸಗಳಿಗೆ ಇಲ್ಲ ಎನ್ನಲ್ಲ.

'ಕೆ.ಜಿಎಫ್' ಮತ್ತ 'ತಾರಕ್'

ಸದ್ಯ 'ತಾರಕ್' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವ ದರ್ಶನ್ ಮಲೇಶಿಯಾದಲ್ಲಿದ್ದಾರೆ. ಮತ್ತೊಂದೆಡೆ 'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಈ ಇಬ್ಬರು ನಟರು ಒಂದಾದ್ರೆ, ಅವರ ಅಭಿಮಾನಿಗಳು ಫುಲ್ ಖುಷ್ ಆಗೋದ್ರಲ್ಲಿ ಅನುಮಾನವಿಲ್ಲ.

[ದರ್ಶನ್ ಮತ್ತು ಯಶ್ ಬಗ್ಗೆ ಸುಮ್ಮನೆ ಗಾಳಿಸುದ್ದಿ ಹಬ್ಬಿಸಬೇಡಿ.! ಅದೆಲ್ಲವೂ ಸುಳ್ಳು.!]

English summary
Mysuru City Corporation Authorities are Planning to Get Mysuru-Based Sandalwood stars Yash and Darshan on Board as Swachh Bharat Brand Ambassadors.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada