ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ದರ್ಶನ್ ಮತ್ತು ಯಶ್.?

By Bharath Kumar

Recommended Video

ಬಹಳ ದಿನಗಳ ಬಳಿಕ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ದರ್ಶನ್ ಮತ್ತು ಯಶ್ ! | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಆಗಾಗ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು, ಒಬ್ಬರನ್ನೊಬ್ಬರು ಮಾತನಾಡಿಕೊಳ್ಳುವುದು ಅಷ್ಟಿಕ್ಕಿಷ್ಟೆ.

ಈ ಮಧ್ಯೆ ರಾಕಿಂಗ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ನಡುವೆ ಎಲ್ಲವೂ ಸರಿಯಿಲ್ಲ. ಇವರಿಬ್ಬರ ಮಧ್ಯೆ ಮನಸ್ತಾಪ ಇದೆ. ಹೀಗಾಗಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಬ್ಬರು ಇದ್ದ ಕಡೆ, ಮತ್ತೊಬ್ಬರು ಬರುವುದಿಲ್ಲ ಎಂಬ ಅಂತೆ-ಕಂತೆಗಳು ಗಾಂಧಿನಗರದಲ್ಲಿ ಹರಿದಾಡುತ್ತಿತ್ತು.

ಆದ್ರೆ, ಇದೆಲ್ಲದಕ್ಕೂ ಯಶ್ ಹಾಗೂ ದಚ್ಚು ಈಗಾಗಲೇ ಹಲವು ಬಾರಿ ಉತ್ತರ ಕೊಟ್ಟಿದ್ದಾರೆ. ಎಲ್ಲ ಕಲಾವಿದರು ಒಂದೇ, ಅವರವರು ಅವರ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಯಾರ ಮಧ್ಯೆ ಮನಸ್ತಾಪ, ಕಿರಿಕ್ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಸರಿ ಹಾಗಿದ್ರೆ, ಯಶ್-ದರ್ಶನ್ ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿರುವುದು ಎಲ್ಲಿ ಮತ್ತು ಯಾಕೆ? ಮುಂದೆ ಓದಿ....

'ರಾಟೆ' ಆಡಿಯೋ ರಿಲೀಸ್

'ರಾಟೆ' ಆಡಿಯೋ ರಿಲೀಸ್

2015ರಲ್ಲಿ ನಡೆದ 'ರಾಟೆ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಮತ್ತು ದರ್ಶನ್ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. ಅದಾದ ನಂತರ ಅಂಬರೀಶ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಹ್ಯಾಪಿ ಬರ್ತಡೇ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲು ಇಬ್ಬರು ಕಾಣಿಸಿಕೊಂಡಿದ್ದರು. ಆದ್ರೆ, ಒಬ್ಬರಿಗೊಬ್ಬರು ಮಾತನಾಡಿಕೊಂಡಿರಲಿಲ್ಲ. ಅದಾದ ನಂತರ ಎಲ್ಲಿಯೂ ಇವರಿಬ್ಬರು ಒಟ್ಟಿಗೆ ಸ್ಟೇಜ್ ಹತ್ತಲಿಲ್ಲ.

ಡೈಲಾಗ್ ವಾರ್

ಡೈಲಾಗ್ ವಾರ್

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ''ನಾನು ಬರೋವರ್ಗೆ ಮಾತ್ರ ಬೇರ ಯವರು ಹವಾ, ನಾನು ಬಂದ್ಮೇಲೆ ನಂದೇ ಹವಾ'' ಇಂಡಸ್ಟ್ರಿಯಲ್ಲಿ ಯಶ್ ಬಗ್ಗೆ ಬೇರೆ ಅಭಿಪ್ರಾಯ ಉಂಟಾಗಲು ಕಾರಣವಾಗಿತ್ತು. ಸ್ಟಾರ್ ನಟರಿಗೆ ಟಾಂಗ್ ಕೊಟ್ಟಿದ್ದಾರೆ ಎಂದು ಮಾತನಾಡಿಕೊಂಡರು. ಇದಾದ ನಂತರ ದರ್ಶನ್ 'ಜಗ್ಗುದಾದ' ಚಿತ್ರದಲ್ಲಿ ''ಹವಾ ಹೀಟ್ ಇರೋವರ್ಗು ಮಾತ್ರ ಇರುತ್ತೆ, ಉಸಿರು ನಿಂತ್ಮೇಲು ಹೆಸರಿರಬೇಕು ಅಂದ್ರೆ ಧಮ್ ಬೇಕೋಲೇ'' ಎಂಬ ಡೈಲಾಗ್ ಬಂತು. ಈ ಡೈಲಾಗ್ ಯಶ್ ಗೆ ಹೇಳಲಾಗಿದೆ ಎಂದು ಬಿಂಬಿಸಲಾಯಿತು.

ನಮ್ಮ ಮಧ್ಯೆ ತಂದಿಡಬೇಡಿ ಎಂದಿದ್ದ ಯಶ್

ನಮ್ಮ ಮಧ್ಯೆ ತಂದಿಡಬೇಡಿ ಎಂದಿದ್ದ ಯಶ್

ಪತ್ರಕರ್ತರೊಬ್ಬರು ಯಶ್ ಗೆ, ದರ್ಶನ್ ಮತ್ತು ಸುದೀಪ್ ಅಭಿಮಾನಿಗಳನ್ನ ನಿಮ್ಮ ಕಡೆ ಸೆಳೆದುಕೊಳ್ಳುತ್ತಿದ್ದಾರಂತೆ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಯಶ್ '' ಪ್ಲೀಸ್ ನಮ್ಮ ಮಧ್ಯೆ ತಂದಿಡಬೇಡಿ. ''ನಾವೆಲ್ಲಾ ಕಲಾವಿದರು. ದಯವಿಟ್ಟು ನಮ್ಮ ನಮ್ಮಲಿ ತಂದಿಡಬೇಡಿ. ಈ ಮೆಂಟಾಲಿಟಿಯೇ ಸರಿಯಲ್ಲ, ಇಲ್ಲಿ ಎಲ್ಲರೂ ಒಂದೇ, ಯಾರೂ ದೊಡ್ಡವರಲ್ಲ, ಸಣ್ಣವರಲ್ಲ. ನಾನು ಎಲ್ಲರ ಫ್ಯಾನ್. ಈ ಮೂಲಕ ನಾನು ಹೇಳೋಕೆ ಇಷ್ಟ ಪಡುವುದೇ ಇಷ್ಟೇ, ನಾನು ಎಲ್ಲರ ಚಿತ್ರವನ್ನು ನೋಡುತ್ತೇನೆ'' ಎಂದು ಹೇಳಿದ್ದರು.

'ಚಕ್ರವರ್ತಿ' ಸಮಯದಲ್ಲಿ ಹರಿದಾಡಿದ್ದ ಸುದ್ದಿ

'ಚಕ್ರವರ್ತಿ' ಸಮಯದಲ್ಲಿ ಹರಿದಾಡಿದ್ದ ಸುದ್ದಿ

ದರ್ಶನ್ ಅಭಿನಯಿಸುತ್ತಿದ್ದ 'ಚಕ್ರವರ್ತಿ' ಸಿನಿಮಾದ ವೇಳೆ ದಚ್ಚು ಮತ್ತು ಯಶ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡಿತ್ತು. 'ಚಕ್ರವರ್ತಿ' ಚಿತ್ರದಲ್ಲಿ ಯಶ್ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ಕೇಳಿ ಅಭಿಮಾನಿ ಬಳಗ ಸಂತೋಷಗೊಂಡಿದ್ದರು. ನಂತರ, ಅದು ಯಶ್ ಅಲ್ಲ, ಯಶಸ್ ಸೂರ್ಯ ಎಂದು ಖಚಿತವಾಯಿತು.

'ಭರ್ಜರಿ' ಚಿತ್ರದ ಟೈಲಾಗ್ ಸಮರದಲ್ಲಿ ದಚ್ಚು ಎಂಟ್ರಿ

'ಭರ್ಜರಿ' ಚಿತ್ರದ ಟೈಲಾಗ್ ಸಮರದಲ್ಲಿ ದಚ್ಚು ಎಂಟ್ರಿ

ಇತ್ತೀಚೆಗೆ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರದಲ್ಲಿ ಹವಾ ಡೈಲಾಗ್ ಗೆ ಸಂಬಂಧಿಸಿದಂತೆ ಒಂದು ಡೈಲಾಗ್ ಹೇಳಲಾಗಿತ್ತು. ಈ ಡೈಲಾಗ್ ಯಶ್ ಗೆ ಟಾಂಗ್ ಕೊಟ್ಟಿದ್ದಾರೆ ಎಂದು ಬಿಂಬಿಸಿದರು. ಆಗ ಮಧ್ಯೆ ಪ್ರವೇಶ ಮಾಡಿದ ದರ್ಶನ್ ''ಇಲ್ಲಿ ಯಾರಿಗೆ ಯಾರು ಟಾಂಗ್ ಕೊಟ್ಟಿಲ್ಲ. ಅವರವರ ಕೆಲಸ ಅವರು ಮಾಡಿಕೊಂಡು ಹೋಗುತ್ತಿದ್ದಾರೆ ಅಷ್ಟೇ'' ಎಂದು ಹೇಳಿ ಪುಲ್ ಸ್ಟಾರ್ ಹಾಕಿದ್ದರು.

'ಕುರುಕ್ಷೇತ್ರ'ದ ಬಗ್ಗೆ ಮೆಚ್ಚಿದ್ದ ಯಶ್

'ಕುರುಕ್ಷೇತ್ರ'ದ ಬಗ್ಗೆ ಮೆಚ್ಚಿದ್ದ ಯಶ್

ಇತ್ತೀಚೆಗಷ್ಟೆ, ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶ್, ದರ್ಶನ್ ಅವರ 'ಕುರುಕ್ಷೇತ್ರ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ''ದರ್ಶನ್ ಪರ್ಸನಾಲಿಟಿ ಇಷ್ಟ. ಅವರೆದರು ನಿಂತರೇ ಬೇರೆ ಯಾರೂ ಕಾಣಲ್ಲ. ಈಗ ಕುರುಕ್ಷೇತ್ರದಲ್ಲಿ ಸೂಪರ್ ಆಗಿ ಕಾಣಿಸ್ತಿದ್ದಾರೆ. ಅವರಿಗೆ ಮಾಸ್ ಇಮೇಜ್ ಚೆನ್ನಾಗಿ ಹೋಲುತ್ತೆ. ನಮ್ಮವರು ಎಂಬ ಭಾವನೆ'' ಎಂದು ಶ್ಲಾಘನೆ ವ್ಯಕ್ತಪಡಿಸಿದ್ದರು.

ಮೈಸೂರಿನಲ್ಲಿ ಒಂದಾಗಲಿರುವ ಸ್ಟಾರ್ಸ್

ಮೈಸೂರಿನಲ್ಲಿ ಒಂದಾಗಲಿರುವ ಸ್ಟಾರ್ಸ್

ರೋಟರಿ ಹೆರಿಟೇಜ್ ಮೈಸೂರು ಸ್ವರ ಸಾಗರ, ಮ್ಯೂಸಿಕ್ ಫೌಂಡೇಷನ್ ಸಹಯೋಗದಲ್ಲಿ ಜನವರಿ 20 ರಂದು ಸಂಜೆ 4.30ಕ್ಕೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ 'ಸ್ವರಾಮೃತ-3' ಆರಕ್ಷಕರಿಗೆ ಗೌರವ ನಮನ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಯಶ್ ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇವರ ಜೊತೆ ರವಿಚಂದ್ರನ್, ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್ ಜನ್ಯ, ಅನೂಪ್ ಸಿಳೀನ್, ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪಕಾಶ್, ಸಿನಿಮಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿಯಾಗಲಿದ್ದಾರೆ.

More from Filmibeat

English summary
Kannada Actor Darshan, Rocking Star Yash and other Sandalwood Stars to take part in Swaramrutha-3, to salute Mysuru Police on Jan 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X