ದರ್ಶನ್-ಭಟ್ಟರ ಜೋಡಿಯಲ್ಲಿ ಬಂದ ಎಲ್ಲ ಹಾಡುಗಳು ಸೂಪರ್ ಹಿಟ್.!
Recommended Video

ಯೋಗರಾಜ್ ಭಟ್ಟರು ಹಾಡು ಬರೆದ್ರು ಅಂದ್ರೆ ಆ ಹಾಡು ಸೂಪರ್ ಹಿಟ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಭಟ್ಟರ ಸಾಹಿತ್ಯಕ್ಕೆ ಒಳ್ಳೆ ಸಿಂಗರ್ ಸಿಕ್ಬಿಟ್ರೆ ಮುಗಿತು. ಆ ಹಾಡಿನ ಗತ್ತು, ಗಮ್ಮತ್ತು ಕೇಳೋದೇ ಬೇಡ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್, ಹಿಟ್, ಲೈಕ್ಸ್ ಫಿಕ್ಸ್.
ಇದೀಗ, ಭಟ್ಟರು ಬರೆದಿರುವ 'ಯಜಮಾನ' ಚಿತ್ರದ ಬಸಣ್ಣಿ ಹಾಡು ಬಿಡುಗಡೆಯಾಗಿದೆ. ಈ ಹಾಡು ಕೇಳಿ ಸಂಗೀತ ಪ್ರಿಯರು ಥ್ರಿಲ್ ಆಗಿದ್ದಾರೆ. 'ಏನ್ ಗುರು ಈ ಯಪ್ಪಾ ಹಿಂಗಾ ಬರೀತಾರೆ, ಎಲ್ಲಿಂದ ಹುಡುಕ್ತಾರೆ ಇಂತಹ ಪದಗಳನ್ನ, ಇವರು ಮನುಷ್ಯರೇ ಅಲ್ಲ' ಹಾಗೆ ಹೀಗೆ ಮಾತಾಡಿಕೊಳ್ತಿದ್ದಾರೆ.
ಸರಿ ಇದೆಲ್ಲ ಸೈಡಿಗೆ ಇಟ್ಟು ಕಾಂಬಿನೇಷನ್ ಬಗ್ಗೆ ಸರ್ಚ್ ಮಾಡಿದ್ರೆ ಅಲ್ಲಿಯೂ ಸಕ್ಸಸ್ ಕಾಣ್ತಿದೆ. ಹರಿಕೃಷ್ಣ ಮತ್ತು ಭಟ್ಟರ ಜೋಡಿ ಒಂದು ಕಡೆಯಾದ್ರೆ, ದರ್ಶನ್ ಮತ್ತು ಭಟ್ಟರ ಕಾಂಬಿನೇಷನ್ ಕೂಡ ಅಷ್ಟೇ ಹಿಟ್ ಆಗಿದೆ. ಹಾಗಿದ್ರೆ, ದರ್ಶನ್ ಅವರ ಯಾವ ಹಾಡುಗಳಿಗೆ ಭಟ್ಟರ ಸಾಹಿತ್ಯ ಇದೆ ಎಂದು ನೋಡಿದ್ರೆ ದೊಡ್ಡ ಪಟ್ಟಿಯೇ ಸಿಕ್ಕಿದೆ. ಮುಂದೆ ಓದಿ.....

ಸಂಜೆ ಟೈಮಲ್ಲಿ.....
ದರ್ಶನ್ ಮತ್ತು ಯೋಗರಾಜ್ ಭಟ್ಟರ ಜೋಡಿಯಲ್ಲಿ ಎಷ್ಟು ಹಾಡುಗಳು ಬಂದಿವೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರೂ, ಹುಡುಕಿದಾಗ ನಮಗೆ ಮೊದಲು ಸಿಕ್ಕಿದ್ದು 'ಪ್ರಿನ್ಸ್' ಚಿತ್ರದ 'ಸಂಜೆ ಟೈಮಲ್ಲಿ....' ಹಾಡು. ಈ ಸಿನಿಮಾ ಅಷ್ಟಾಗಿ ಸದ್ದು ಮಾಡದೇ ಹೋದ್ರು ಈ ಹಾಡು ಹಿಟ್ ಆಗಿತ್ತು. ವಿಶೇಷ ಅಂದ್ರೆ ಈ ಚಿತ್ರಕ್ಕೆ ಸಂಗೀತ ನೀಡಿದ್ದು ವಿ ಹರಿಕೃಷ್ಣ.

ಕೈ ಕಯ ಕಚ್ಚಾಸುಡಾ ಬಸುಡಾ
ಹರ್ಷ ನಿರ್ದೇಶನ ಹಾಗೂ ದರ್ಶನ್ ನಟಿಸಿದ್ದ ಚಿಂಗಾರಿ ಸಿನಿಮಾದಲ್ಲಿ ಮೂಡಿಬಂದಿದ್ದ 'ಕೈ ಕಯ ಕಚ್ಚಾಸುಡಾ ಬಸುಡಾ' ಹಾಡಂತೂ ಕನ್ನಡ ಇಂಡಸ್ಟ್ರಿಯಲ್ಲಿ ಹೊಸದೊಂದು ಟ್ರೆಂಡ್ ಹುಟ್ಟುಹಾಕಿತ್ತು. ಹೊಸ ಶೈಲಿಯ ಸಾಹಿತ್ಯ ಮೂಲಕ, ಅರ್ಥವೇ ಆಗದ ಪದಗಳನ್ನ ಬಳಸಿ ಹಾಡು ರಚಿಸಿದ್ದರು ಭಟ್ಟರು. ಈ ಹಾಡಂತೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಚಿತ್ರಕ್ಕೆ ಸಂಗೀತ ನೀಡಿದ್ದು ಕೂಡ ಹರಿಕೃಷ್ಣ.

ಐರಾವತ 'ಕ ತಲುಗಟ್ಟು ಕ'
ಎಪಿ ಅರ್ಜುನ್ ನಿರ್ದೇಶನ ಮಾಡಿದ್ದ ಐರಾವತ ಚಿತ್ರದಲ್ಲಿ ಐಟಂ ಹಾಡು ಸಖತ್ ಹಿಟ್ ಆಗಿತ್ತು. 'ಕ ತಲುಗಟ್ಟು ಕ....' ಹಾಡನ್ನ ಕೂಡ ಕೇಳಿದ್ದ ತಕ್ಷಣ ಹೇಳಬಹುದು ಇದು ಭಟ್ಟರದ್ದೇ ಬರೆದಿದ್ದ ಹಾಡು ಅಂತ. ಇದೇ ಸಿನಿಮಾದಲ್ಲಿ ಇನ್ನೊಂದು ಹಾಡನ್ನ ಕೂಡ ಭಟ್ಟರು ಬರೆದಿದ್ದರು. ''ದೇರ್ ವಾಸ್ ಎ ಅಜ್ಜಿ....'' ಹಾಡಿಗೂ ಭಟ್ ಅವರು ಸಾಹಿತ್ಯ ರಚಿಸಿದ್ದರು. ಈ ಚಿತ್ರಕ್ಕೂ ಹರಿಕೃಷ್ಣ ಅವರೇ ಸಂಗೀತ.

ಬೃಂದಾವನ'ದ ಓಯ್ ಕಳ್ಳ...
ಕೆ ಮಾದೇಶ್ ನಿರ್ದೇಶನ ಮಾಡಿದ್ದ ಬೃಂದಾವನ ಚಿತ್ರದಲ್ಲಿ ಉಪೇಂದ್ರ ಒಂದು ಹಾಡು ಹಾಡಿದ್ದರು. ''ಓಯ್ ಕಳ್ಳ ಚಿ ಕಳ್ಳ ಏನ್ ಮಾಡ್ತಿದ್ದೀಯಾ......'' ಎಂಬ ಡಿಫ್ರೆಂಟ್ ಸಾಹಿತ್ಯಕ್ಕೆ ತಮ್ಮ ಧ್ವನಿಗೂಡಿಸಿದ್ದರು. ಈ ಡಿಫ್ರೆಂಟ್ ಹಾಡು ಬರೆದಿದ್ದು ಕೂಡ ಯೋಗರಾಜ್ ಭಟ್. ಈ ಚಿತ್ರಕ್ಕೆ ಸಂಗೀತ ಹರಿಕೃಷ್ಣ.

ಬೊಂಬ್ಡಿ ಬಜಾಯಿಸು, ಚಿಂದಿ ಉಡಾಯಿಸು
ಎಚ್ ವಾಸು ನಿರ್ದೇಶನ ಮಾಡಿದ್ದ ವಿರಾಟ್ ಚಿತ್ರದಲ್ಲೂ ಭಟ್ಟರು ಹಾಡಿತ್ತು. 'ಬೊಂಬ್ಡಿ ಬಜಾಯಿಸು, ಚಿಂದಿ ಉಡಾಯಿಸು' ಹಾಡಿಗೆ ಭಟ್ಟರು ಸಾಹಿತ್ಯ ಬರೆದಿದ್ದರು. ಬಹುಶಃ ದರ್ಶನ್ ಸಿನಿಮಾಗೆ ಬರೆದು ಹಾಡುಗಳ ಪೈಕಿ ಈ ಹಾಡು ಹೆಚ್ಚು ಸದ್ದು ಮಾಡಿಲ್ಲ. ಈ ಚಿತ್ರಕ್ಕೂ ಹರಿಕೃಷ್ಣ ಸಂಗೀತ.

ತಲೆ ಕೆಡಿಸಿದ್ದ ಭಟ್ಟರು
'ಜಗ್ಗುದಾದ' ಚಿತ್ರದಲ್ಲಿ ತಲೆ ಕಡೆತೇ ಹುಡುಗಿ ಎಂದು ಬರೆದು ಎಲ್ಲ ಹುಡುಗರ ತಲೆ ಕೆಡಿಸಿದ್ದರು. ಈ ರೋಮ್ಯಾಂಟಿಕ್ ಫೀಲ್ ಕೊಟ್ಟಿದ್ದ ಈ ಹಾಡು ಕೂಡ ಹಿಟ್ ಆಗಿತ್ತು. ಈ ಚಿತ್ರಕ್ಕೂ ಹರಿಕೃಷ್ಣ ಅವರೇ ಸಂಗೀತ.

ಯಜಮಾನನ 'ಬಸಣ್ಣಿ'
ಹೀಗೆ ಹರಿಕೃಷ್ಣ ಮತ್ತು ದರ್ಶನ್ ಕಾಂಬಿನೇಷನ್ ಗೆ ಹಿಟ್ ಗೀತೆಗಳನ್ನ ನೀಡಿರುವ ಯೋಗರಾಜ್ ಭಟ್ ಅವರು ಈಗ ಯಜಮಾನ ಚಿತ್ರದ ಬಸಣ್ಣಿ ಹಾಡಿನ ಮೂಲಕ ಮತ್ತೆ ಟ್ರೆಂಡ್ ಸೃಷ್ಟಿಸಿದ್ದಾರೆ. ಪೆಪ್ಪಿ ಸ್ಟೈಲ್ ನಲ್ಲಿ ಮೂಡಿಬಂದಿರುವ ಈ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ.


Click it and Unblock the Notifications











