ರೇಣುಸ್ವಾಮಿ ಶೆಡ್ ತಲುಪುವುದಕ್ಕೂ ಮುನ್ನವೇ ಎಸ್ಕೇಪ್ ಆಗ್ಬಹುದಿತ್ತಾ? ಆದರೂ ಆಗಿಲ್ಲ ಯಾಕೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಎನಿಸುತ್ತಿದೆ. ಒಬ್ಬೊಬ್ಬರನ್ನೇ ಅರೆಸ್ಟ್ ಮಾಡುತ್ತಿದ್ದಂತೆ ಒಂದು ವಿಷಯ ಹೊರಬೀಳುತ್ತಿದ್ದೆ. ಚಿತ್ರದುರ್ಗದಲ್ಲಿ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಅಪರಣ ಮಾಡಿ ಬೆಂಗಳೂರಿಗೆ ಕರೆ ತಂದಿದ್ದರು ಎನ್ನಲಾಗಿತ್ತು. ಆ ಕಾರಿನ ಚಾಲಕ ರವಿ ಈಗ ಪೊಲೀಸರ ಮುಂದೆ ಶರಣಾಗಿದ್ದಾನೆ.
ಕಾರು ಚಾಲಕ ರವಿಯನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 8ನೇ ಆರೋಪಿಯನ್ನಾಗಿ ಮಾಡಲಾಗಿದೆ. ದರ್ಶನ್ ಸೇರಿದಂತೆ ಅವರ ಸಹಚರರು ಬಂಧನ ಆಗುತ್ತಿದ್ದಂತೆ ರವಿ ಎಸ್ಕೇಪ್ ಆಗಿದ್ದ. ಕೊನೆಗೂ ಚಿತ್ರದುರ್ಗದ ಡಿವೈಎಸ್‌ಪಿ ಕಚೇರಿಗೆ ಬಂದು ಶರಣಾಗಿದ್ದಾನೆ. ಈತನ ಸ್ನೇಹಿತ ಮೋಹನ್ ಜೊತೆ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಆ ಮಾಹಿತಿಯನ್ನು ಮೋಹನ್ ಫಸ್ಟ್ ನ್ಯೂಸ್ ಜೊತೆ ಹಂಚಿಕೊಂಡಿದ್ದಾನೆ.

ರೇಣುಕಾಸ್ವಾಮಿಯನ್ನು ಹೇಗೆ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಯ್ತು? ದಾರಿ ಮಧ್ಯೆ ಏನಲ್ಲ ಆಯ್ತು? ಅನ್ನೋದನ್ನು ಕಾರು ಚಾಲಕನಾಗಿದ್ದ ರವಿ ಸ್ನೇಹಿತ ಮೋಹನ್ ಜೊತೆ ಹೇಳಿಕೊಂಡಿದ್ದಾರೆ. ಆ ವೇಳೆ ರೇಣುಕಾಸ್ವಾಮಿ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವಿದ್ದರೂ ತಪ್ಪಿಕೊಂಡಿಲ್ಲ ಅಂತ ಹೇಳಿದ್ದ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇಲ್ಲಿ ರವಿ ಕೇವಲ ಬಾಡಿಗೆಗಾಗಿ ಹೋಗಿದ್ದ. ಅವನಿಗೆ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಕರೆದುಕೊಂಡು ಹೋಗಿದ್ದಾರೆ ಅನ್ನೋ ಮಾಹಿತಿ ಇರಲಿಲ್ಲ. ಬೆಂಗಳೂರಿಗೆ ಬಾಡಿಗೆ ಬಂದಿತ್ತು. ಹೀಗಾಗಿ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಜೊತೆ 10 ರೂಪಾಯಿಗೆ ಪ್ರತಿ ಕಿ.ಮೀ., ಡ್ರೈವರ್ ಬಾಟಾ, ಟೋಲ್ ಎಲ್ಲವನ್ನೂ ಮಾತಾಡಿಕೊಂಡು ಹೋಗಿದ್ದ.

ಚಿತ್ರದುರ್ಗದಿಂದ ರೇಣುಕಾಸ್ವಾಮಿ ಜೊತೆ ಜಗ್ಗು, ಅನು, ರಾಘವೇಂದ್ರ ಹಾಗೂ ರೇಣುಕಾಸ್ವಾಮಿ ಕಾರಿ ಹತ್ತಿದ್ದಾಗಿ ಸ್ನೇಹಿತ ಮೋಹನ್ ಜೊತೆ ರವಿ ಹೇಳಿಕೊಂಡಿದ್ದಾನೆ. ಅಲ್ಲದೆ ದಾರಿ ಮಧ್ಯೆ ಯಾಕೆ ಮೆಸೇಜ್ ಕಳಿಸಿದೆ ಎಂದು ರೇಣುಕಾಸ್ವಾಮಿಗೆ ಪ್ರಶ್ನೆ ಮಾಡುತ್ತಿದ್ದರು. ಏನು ಅಂತ ಕೇಳಿದ್ದಕ್ಕೆ, ನೀನು ಸುಮ್ಮನೆ ಕಾರು ಓಡಿಸು ಎಂದಿದ್ದರಂತೆ. "ಯಾಕೋ ಮೆಸೇಜ್ ಎಲ್ಲ ಹಾಕಿದೆ ಅಂತ ಕೇಳಿದ್ರು. ಅದಕ್ಕೆ ಇಲ್ಲ ಅಣ್ಣ ಇದು ಹವ್ಯಾಸ ಅಂತ ರೇಣುಕಾಸ್ವಾಮಿ ಹೇಳಿದ್ದ" ಎಂದು ಕಾರು ಚಾಲಕ ರವಿ ಹೇಳಿರುವ ಬಗ್ಗೆ ಮಾಹಿತಿಯನ್ನು ಸ್ನೇಹಿತ ಮೋಹನ್ ಶೇರ್ ಮಾಡಿಕೊಂಡಿದ್ದಾರೆ.
ಈ ವೇಳೆ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿದ್ದಾರೆ. ತುಮಕೂರು ದಾಟಿದ ಬಳಿಕ ಕಾರನ್ನು ತಿಂಡಿಗೆಂದು ನಿಲ್ಲಿಸಿದ್ದರಂತೆ. ಆ ವೇಳೆ ಖುದ್ದು ರೇಣುಕಾಸ್ವಾಮಿನೇ ಅವರೆಲ್ಲರ ಬಿಲ್ ಅನ್ನು ಪಾವತಿ ಮಾಡಿದ್ದರು ಎಂದೂ ರವಿ ಹೇಳಿದ್ದಾಗಿ ಸ್ನೇಹಿತ ಮೋಹನ್ ರಿವೀಲ್ ಮಾಡಿದ್ದಾರೆ. ಆ ವೇಳೆ ಕೂಡ ರೇಣುಕಾಸ್ವಾಮಿ ಅಪೋಸ್ ಮಾಡಿರಲಿಲ್ಲ.
ರೇಣುಕಾಸ್ವಾಮಿ ಕಾರಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣ ಮಾಡುವಾಗಲೇ ಎಸ್ಕೇಪ್ ಆಗಬಹುದಿತ್ತು. ತಿಂಡಿಗೆ ನಿಲ್ಲಿಸಿದಾಗಲೂ ಅಪೋಸ್ ಮಾಡಲಿಲ್ಲ. ಹಾಗೇ ಮೂತ್ರ ವಿಸರ್ಜನೆಗೆ ನಿಲ್ಲಿಸಿದ ವೇಳೆನೂ ರೇಣುಕಾಸ್ವಾಮಿ ತಪ್ಪಿಸಿಕೊಳ್ಳುವ ಅವಕಾಶವಿತ್ತು. ಆದರೂ ಎಸ್ಕೇಪ್ ಆಗಿರಲಿಲ್ಲ ಎಂದು ಕಾರು ಚಾಲಕ ರವಿ ಸ್ನೇಹಿತ ಮೋಹನ್ ಹತ್ತಿರ ಹೇಳಿಕೊಂಡಿದ್ದಾನೆ. ಒಟ್ನಲ್ಲಿ ಚಿಕ್ಕದೊಂದು ಮೆಸೇಜ್ ಕಾರಣಕ್ಕೆ ರೇಣುಕಾಸ್ವಾಮಿ ಕೊಲೆ ನಡೆದು ಹೋಗಿದೆ.


Click it and Unblock the Notifications











