»   » ಗುಟ್ಟಾಗಿದ್ದ 'ತಾರಕ್' ಚಿತ್ರದಲ್ಲಿನ ದರ್ಶನ್ ಪಾತ್ರ ಈಗ ರಟ್ಟಾಯ್ತು.!

ಗುಟ್ಟಾಗಿದ್ದ 'ತಾರಕ್' ಚಿತ್ರದಲ್ಲಿನ ದರ್ಶನ್ ಪಾತ್ರ ಈಗ ರಟ್ಟಾಯ್ತು.!

Posted By:
Subscribe to Filmibeat Kannada

ಸದಭಿರುಚಿಯ ಸಿನಿಮಾಗಳಿಗೆ ಹೆಸರುವಾಸಿ ಆಗಿರುವ 'ಮಿಲನ' ಪ್ರಕಾಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡ್ತಾರೆ ಅಂತ ಗೊತ್ತಾದಾಗ ಚಿತ್ರದಲ್ಲಿ 'ಡಿ' ಬಾಸ್ ಯಾವ ಪಾತ್ರವನ್ನ ನಿಭಾಯಿಸಬಹುದು ಎಂಬ ನಿರೀಕ್ಷೆ ಸಹಜವಾಗಿ ಎಲ್ಲರಲ್ಲಿಯೂ ಇತ್ತು.

ಅದರಲ್ಲೂ, ದರ್ಶನ್-ಪ್ರಕಾಶ್ ಕಾಂಬಿನೇಷನ್ ನ ಚಿತ್ರಕ್ಕೆ 'ತಾರಕ್' ಅಂತ ಟೈಟಲ್ ಇಟ್ಟು, ಬಹುತೇಕ ವಿದೇಶದಲ್ಲಿಯೇ ಶೂಟಿಂಗ್ ಮಾಡಿದ್ಮೇಲಂತೂ ದರ್ಶನ್ ಪಾತ್ರದ ಬಗ್ಗೆ 'ಡಿ' ಬಾಯ್ಸ್ ತಲೆಗೆ ಹುಳ ಬಿಟ್ಟುಕೊಂಡಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 49ನೇ ಸಿನಿಮಾ 'ತಾರಕ್'ನಲ್ಲಿ ಇಬ್ಬರು ಹೀರೋಯಿನ್ ಗಳು ಬೇರೆ. ಅಂದ್ಮೇಲೆ, ಇದು ತ್ರಿಕೋನ ಪ್ರೇಮಕಥೆಯೋ... ಇಲ್ಲ ದರ್ಶನ್ ಪಾತ್ರದಲ್ಲಿ ವೈರೈಟಿ ಇದ್ಯೋ ಅಂತ ಯೋಚಿಸುತ್ತಿದ್ದವರಿಗೆ ಇದೋ ಇಲ್ಲಿದೆ ಉತ್ತರ...

ಹಿಂದೆಂದೂ ಕಾಣದ ಪಾತ್ರದಲ್ಲಿ ನಟ ದರ್ಶನ್

ತಮ್ಮ ವೃತ್ತಿ ಜೀವನದಲ್ಲಿ... ಇಲ್ಲಿಯವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ 'ತಾರಕ್' ಚಿತ್ರದಲ್ಲಿ ಮಿಂಚಲಿದ್ದಾರೆ ನಟ ದರ್ಶನ್.

ರಗ್ಬಿ ಪ್ಲೇಯರ್ ಆಗಿ ನಟ ದರ್ಶನ್

ಇದೇ ಮೊಟ್ಟ ಮೊದಲ ಬಾರಿಗೆ ತೆರೆಮೇಲೆ ಕ್ರೀಡಾಪಟು ಆಗಿ ನಟ ದರ್ಶನ್ ಅಭಿನಯಿಸಿದ್ದಾರೆ. 'ತಾರಕ್' ಚಿತ್ರದಲ್ಲಿ ರಗ್ಬಿ ಪ್ಲೇಯರ್ (ಅಮೇರಿಕನ್ ಫುಟ್ ಬಾಲ್ ಪ್ಲೇಯರ್) ಆಗಿ 'ದಾಸ' ಕಂಗೊಳಿಸಲಿದ್ದಾರೆ.

ಬೇಕಾದರೆ ಈ ಫೋಟೋ ನೋಡಿ....

'ತಾರಕ್' ಚಿತ್ರದಲ್ಲಿ ರಗ್ಬಿ ಪ್ಲೇಯರ್ (ಅಮೇರಿಕನ್ ಫುಟ್ ಬಾಲ್ ಪ್ಲೇಯರ್) ಆಗಿ ದರ್ಶನ್ ರವರ ಲುಕ್ ಹೀಗಿದೆ... ನೋಡಿ...

ಟ್ರೇನಿಂಗ್ ತೆಗೆದುಕೊಂಡಿದ್ದ ದರ್ಶನ್

ಅಮೇರಿಕನ್ ಫುಟ್ ಬಾಲ್ (ರಗ್ಬಿ) ಆಟ ಆಡಲು ಕೋಚ್ ಸತೀಶ್ ಎಂಬುವವರಿಂದ ಟ್ರೇನಿಂಗ್ ಪಡೆದುಕೊಂಡಿದ್ದರಂತೆ ನಟ ದರ್ಶನ್.

ಸಿನಿಮಾದಲ್ಲಿ ದರ್ಶನ್ ಹೆಸರು 'ತಾರಕ್'

ಸಿನಿಮಾದ ಟೈಟಲ್ ಮಾತ್ರ 'ತಾರಕ್' ಅಲ್ಲ... ಚಿತ್ರದಲ್ಲಿ ದರ್ಶನ್ ಅವರ ಪಾತ್ರದ ಹೆಸರೂ 'ತಾರಕ್' ಅಂತೆ.

ಆಟದ ಸನ್ನಿವೇಶದಲ್ಲಿಯೇ ದರ್ಶನ್ ಕಾಲಿಗೆ ಪೆಟ್ಟಾಗಿತ್ತು.!

ರಗ್ಬಿ ಆಟ ಆಡುವ ಸನ್ನಿವೇಶ ಚಿತ್ರೀಕರಣದಲ್ಲಿಯೇ ನಟ ದರ್ಶನ್ ರವರ ಕಾಲಿಗೆ ಚೆಂಡು ಬಿದ್ದು ಪೆಟ್ಟಾಗಿತ್ತು.

ಕುತೂಹಲ ಹೆಚ್ಚಾಗಿದೆ

'ತಾರಕ್' ಚಿತ್ರದಲ್ಲಿ ದರ್ಶನ್ ರವರ ಪಾತ್ರ ಬಹಿರಂಗವಾಗುತ್ತಿದ್ದಂತೆಯೇ, ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ಡಬಲ್ ಆಗಿದೆ. ತೆರೆಮೇಲೆ ಕ್ರೀಡಾಪಟು ಅಗಿ ದರ್ಶನ್ ಕಮಾಲ್ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತಾಗಿದೆ.

'ತಾರಕ್' ಚಿತ್ರದ ಕುರಿತು

'ತಾರಕ್' ಚಿತ್ರದಲ್ಲಿ ದರ್ಶನ್ ಜೊತೆ ಶಾನ್ವಿ, ಶ್ರುತಿ ಹರಿಹರನ್ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ದೇವರಾಜ್ ಇದ್ದಾರೆ. ಚಿತ್ರಕ್ಕೆ 'ಮಿಲನ' ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ.

English summary
Revealed: Challenging Star Darshan will be seen as 'American Footballer' in Kannada Movie 'Tarak'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada