ಸಂಭಾವನೆ ಪಡೆಯದೆ ಕೃಷಿ ಇಲಾಖೆಗೆ ರಾಯಭಾರಿಯಾದ ದರ್ಶನ್
ಸ್ವತಃ ಕೃಷಿ ಆಸಕ್ತ, ಪಶುಸಂಗೋಪನೆ, ಕೃಷಿಯಲ್ಲಿ ತೊಡಗಿಕೊಂಡಿರುವ ನಟ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ನೀಡಿದ ಅವಕಾಶವನ್ನು ಒಪ್ಪಿಕೊಂಡಿರುವ ನಟ ದರ್ಶನ್, ಕೃಷಿ ಇಲಾಖೆಯ ರಾಯಭಾರಿ ಆಗಿದ್ದಾರೆ. ಇದಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ ನಟ ದರ್ಶನ್.
ನಿನ್ನೆ ದರ್ಶನ್ ಅವರ ಫಾರಂ ಗೆ ಭೇಟಿ ನೀಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ದರ್ಶನ್ ಅವರೊಟ್ಟಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ದರ್ಶನ್ ಅವರು ಸಹ ಕೃಷಿ ಇಲಾಖೆ ರಾಯಭಾರಿ ಆಗಲು ತುಂಬಿದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.

ಕೃಷಿ ಇಲಾಖೆ ಕಾರ್ಯಕ್ರಮಗಳಿಗೆ ದರ್ಶನ್ ಪ್ರಚಾರ
ಕೃಷಿ ಇಲಾಖೆಯ ರೈತ ಪರ ಕಾರ್ಯಕ್ರಗಳಿಗೆ ದರ್ಶನ್ ಪ್ರಚಾರ ಮಾಡಲಿದ್ದಾರೆ. ಕೃಷಿ ಇಲಾಖೆಯ ಸವಲತ್ತುಗಳು ರೈತರನ್ನು ತಲುಪಿಸುವಲ್ಲಿ ದರ್ಶನ್ ಸಹ ಕೆಲಸ ಮಾಡಲಿದ್ದಾರೆ. ರೈತರಿಗೆ ಉತ್ಸಾಹ, ಹುರುಪು ತುಂಬುವ ಕಾರ್ಯವನ್ನು ನಟ ದರ್ಶನ್ ಮಾಡಲಿದ್ದಾರೆ.

ರೈತರೊಟ್ಟಿಗೆ ದಿನ ಕಳೆಯಲಿರುವ ದರ್ಶನ್
ಕೆಲವೇ ದಿನಗಳಲ್ಲಿ ನಟ ದರ್ಶನ್ ಅವರು ಕೃಷಿ ಇಲಾಖೆ ವತಿಯಿಂದ ಇಡೀಯ ದಿನವನ್ನು ರೈತರೊಟ್ಟಿಗೆ ಕಳೆಯಲಿದ್ದಾರೆ ಎನ್ನಲಾಗಿದೆ. ಇದು ಕೃಷಿ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮದ ಭಾಗವಾಗಿರಲಿದೆ.

ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ದರ್ಶನ್
ಸ್ವತಃ ಕೃಷಿಯ ಬಗ್ಗೆ ಹೈನುಗಾರಿಕೆ, ಪಶುಸಂಗೋಪನೆ ಬಗ್ಗೆ ಅಪಾರ ಆಸಕ್ತಿ ಮತ್ತು ರೈತರ ಬಗ್ಗೆ ಅಪಾರ ಗೌರವ ಹೊಂದಿರುವ ನಟ ದರ್ಶನ್ ಗೆ ಕೃಷಿ ಇಲಾಖೆ ರಾಯಭಾರಿ ಸ್ಥಾನ ನೀಡಿರುವುದು ಸೂಕ್ತವಾಗಿದೆ ಎಂಬುದು ಹಲವರ ಅಭಿಪ್ರಾಯ.
Recommended Video

ನಂದಿನಿ ಯ ರಾಯಭಾರಿ ಪುನೀತ್
ನಟ ಪುನೀತ್ ರಾಜ್‌ಕುಮಾರ್ ನಂದಿನಿ ಬ್ರ್ಯಾಂಡ್‌ಗೆ ರಾಯಭಾರಿ ಆಗಿದ್ದಾರೆ. ಪುನೀತ್ ಸಹ ಹಣ ಪಡೆಯದೆ ಉಚಿತವಾಗಿ ನಂದಿನಿ ಬ್ರ್ಯಾಂಡ್‌ನ ಪ್ರಚಾರ ಮಾಡುತ್ತಾರೆ. ನಂದಿನಿ ಮಾತ್ರವೇ ಅಲ್ಲದೆ, ಪ್ರವಾಸೋದ್ಯಮದ ರಾಯಭಾರಿಯೂ ಆಗಿದ್ದಾರೆ ನಟ ಪುನೀತ್ ರಾಜ್‌ಕುಮಾರ್.


Click it and Unblock the Notifications











