"ಅಕ್ಟೋಬರ್ 28ರ ವರೆಗೂ ದರ್ಶನ್‌ಗೆ ಜಾಮೀನು ಸಿಗೋದು ಅಸಾಧ್ಯ"
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಒಂದ್ಕಡೆ ಕುಟುಂಬಸ್ಥರು, ಇನ್ನೊಂದು ಕಡೆ ಅಭಿಮಾನಿಗಳು ದರ್ಶನ್ ಜಾಮೀನು ಯಾವಾಗ ಸಿಗುತ್ತೋ ಅಂತ ಎದುರು ನೋಡುತ್ತಿದ್ದಾರೆ. ಮೊದಲ ನ್ಯಾಯಾಂಗ ಅವಧಿ ಮುಗಿದ ಬಳಿಕ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಲಾಗಿದೆ. ಹೀಗಾಗಿ ಸದ್ಯ ಜಾಮೀನು ಸಿಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದೇ ಬೆನ್ನಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆಪ್ತರನ್ನು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಈಗಾಗಲೇ ದರ್ಶನ್ 'ಡೆವಿಲ್' ಸಿನಿಮಾದ ನಿರ್ದೇಶಕ ಮಿಲನ ಪ್ರಕಾಶ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಹಾಗೇ ನಟ ಯಶಸ್ ಸೂರ್ಯಗೂ ನೋಟಿಸ್ ನೀಡಿದ್ದಾಗಿ ವರದಿಯಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದಾರೆ. ಹೀಗಾಗಿ ಜಾಮೀನು ಯಾವಾಗ ಸಿಗಬಹುದು ಅನ್ನೋ ಗೊಂದಲ ಅವರ ಆಪ್ತರಲ್ಲಿದೆ. ಇದೇ ವೇಳೆ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಅವರು ದರ್ಶನ್‌ಗೆ ಅಕ್ಟೋಬರ್ 28ರವರೆಗೂ ಜಾಮೀನು ಸಿಗುವುದು ಕಷ್ಟವಿದೆ ಎಂದು ಹೇಳಿದ್ದಾರೆ. ದರ್ಶನ್ ಭವಿಷ್ಯದ ಬಗ್ಗೆ ಗುರೂಜಿ ಮತ್ತೇನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ತಮ್ಮ ಶಂಕರಾನಂದ ಟಿವಿ ಯೂಟ್ಯೂಬ್ ಚಾನಲ್‌ನಲ್ಲಿ ದರ್ಶನ್ ಭವಿಷ್ಯದ ಮಾತಾಡಿದ್ದಾರೆ. ಈಗ ದರ್ಶನ್ ಜಾತಕ ಹೇಗಿದೆ? ಈ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದು ಯಾಕೆ? ಇದರಿಂದ ಹೊರ ಬರುವುದು ಯಾವಾಗ? ಅನ್ನೋದನ್ನು ಬಿಡಿ ಬಿಡಿಯಾಗಿ ಬಿಡಿಸಿ ಹೇಳಿದ್ದಾರೆ. ಅದರ ಝಲಕ್ ಇಲ್ಲಿದೆ.
"12ನೇ ಮನೆಯಲ್ಲಿ ಗುರು ಇದ್ದಾನೆ"
"ದರ್ಶನ್ ಅವರ ಬಂಧನ ಆಗಿದ್ದು ಮಂಗಳವಾರ. ಮಂಗಳವಾರ ದಿವಸ ಸಂಕೋಲೆ ಹೋಗಿರುವಂತಹದ್ದು. ಜನ್ಮ ಜಾತಕದಲ್ಲೂ 12ನೇ ಮನೆಯಲ್ಲಿ ಗುರು. ಅರೆಸ್ಟ್ ಆದಾಗಲೂ 12ನೇ ಮನೆಯಲ್ಲಿ ಗುರು ಇದ್ದಾನೆ. ನೇರವಾಗಿ ರಾಹು ಮತ್ತು ಕೇತು 10 ಮತ್ತು 11ನೇ ಮನೆಯಲ್ಲಿ ಇದ್ದಾರೆ. ಅನಿಷ್ಟ ಸೂಚನೆಗಳನ್ನೇ ಕೊಡುತ್ತೆ." ಎಂದು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ.

"ಫಿನಿಕ್ಸ್ ಹಕ್ಕಿಯಂತೆ ಎದ್ದು ಬರುತ್ತಾರೆ"
"2024, ಅಕ್ಟೋಬರ್‌ವರೆಗೂ ಸಹ ತುಂಬಾ ಕಠಿಣ ಪರಿಸ್ಥಿತಿ ಇರುತ್ತದೆ. ಇದಾದ ನಂತರ ರಾಹು ಭುಕ್ತಿ ಶುರುವಾಗುತ್ತೆ. ಆ ರಾಹು ಭುಕ್ತಿ ಶುರುವಾದ ಸಂದರ್ಭಕ್ಕೆ ಒಳ್ಳೆಯ ಬದಲಾವಣೆಗಳನ್ನು ಜೀವನದಲ್ಲಿ ನೋಡುವುದಕ್ಕೆ ಸಾಧ್ಯವಿದೆ. ಪುನ: ಫಿನಿಕ್ಸ್ ಹಕ್ಕಿಯಂತೆ ಎದ್ದು ಬರುವ ಸಾಧ್ಯತೆಗಳು ಜಾಸ್ತಿ ಇದ್ದಾವೆ." ಎಂದು ಗುರೂಜಿ ತಿಳಿಸಿದ್ದಾರೆ.
"ಅಕ್ಟೋಬರ್ 28ರವರೆಗೂ ಜಾಮೀನು ಸಿಗಲ್ಲ"
"ಅರ್ಥಾತ್ ದರ್ಶನ್ ಅವರಿಗೆ ಬೇಲ್ ಸಿಗುವಂತಹದ್ದು ಅಕ್ಟೋಬರ್ 28ನೇ ತಾರೀಕಿನವರೆಗೂ ಬೇಲ್ ಸಿಗುವುದು ಅಸಾಧ್ಯ ಅನ್ನೋ ಮಾತು ಜಾತಕದ ಆಧಾರದ ಒಳಗೆ ಇದೆ. ಅದಾದ ಮೇಲೆ ಇವರ ಸಿನಿಮಾ ಕರಿಯರ್ ಮತ್ತೆ ಮೇಲೆ ಹೋಗುತ್ತೆ. ಗುರುದಶ ಮುಗಿದು 2027ರಲ್ಲಿ ಶನಿದಶ ಶುರುವಾಗುತ್ತೆ. ಆ ಕಾಲದಲ್ಲಿ ತುಂಬಾ ಅನುಕೂಲತೆಯನ್ನು ನೋಡಬಹುದು" ಎಂದು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಹೇಳಿದ್ದಾರೆ.


Click it and Unblock the Notifications











