For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಮನೆ ಮುಂದೆ ಸಾಲು ಸಾಲು ಆಟೋಗಳು ನಿಂತಿರೋದ್ಯಾಕೆ?

  By Pavithra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಮುಂದೆ ಆಟೋಗಳ ಸಾಲು ನಿಂತಿದ್ಯಂತೆ. ಅರೆ ಆಟೋ ಚಾಲಕರಿಗೆ ಡಿ ಬಾಸ್ ಮನೆ ಹತ್ತಿರ ಏನು ಕೆಲಸ? ಅಂತ ಯೋಚನೆ ಮಾಡಬೇಡಿ ದರ್ಶನ್ ಅವರ ಮನೆಯ ಬಳಿ ಇರುವವರು ಕೇಲವ ಆಟೋ ಚಾಲಕರಲ್ಲ. ದರ್ಶನ್ ಅವರ ಅಭಿಮಾನಿಗಳು.

  ಕಳೆದ ಎರಡು ದಿನಗಳಿಂದ ದಾಸನ ಮನೆಯ ಬಳಿ ಸಾಕಷ್ಟು ಆಟೋ ಚಾಲಕರು ತಮ್ಮ ಆಟೋ ಸಮೇತವಾಗಿ ಬಂದಿದ್ದಾರೆ. ಅಭಿಮಾನಿಗಳು ಹೊಸ ಹೊಸ ಅಭಿಮಾನಿಗಳು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಿರುತ್ತಾರೆ. ಲಕ್ಷಾಂತರ ಫ್ಯಾನ್ಸ್ ಗಳ ಮಧ್ಯೆ ವಿಭಿನ್ನವಾಗಿ ನಿಲ್ಲಬೇಕು ಎನ್ನುವುದು ಅವರ ಉದ್ದೇಶವಾಗಿರುತ್ತೆ.

  ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಶ್ರೀ ಮುರಳಿ ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಶ್ರೀ ಮುರಳಿ

  ಅದೇ ರೀತಿಯಲ್ಲಿ ದರ್ಶನ್ ಅಭಿಮಾನಿಗಳು ಆಲೋಚನೆ ಮಾಡಿಕೊಂಡು ಮನೆಯ ಬಳಿ ಹೋಗಿದ್ದಾರೆ. ದರ್ಶನ್ ಅವರ ಆಟೋಗ್ರಾಫ್ ಅನ್ನು ಕೈ ಮೇಲೋ, ಪುಸ್ತಕದಲ್ಲಿಯೋ ತೆಗೆದುಕೊಂಡರೆ ಏನು ಚೆನ್ನಾಗಿರುತ್ತೆ. ಸದಾ ಅದು ನೆನಪಿನಲ್ಲಿ ಉಳಿದುಕೊಳ್ಳಬೇಕು ಎಂದು ಪ್ರತಿನಿತ್ಯ ದುಡಿಮೆಗೆ ಆಧಾರವಾಗಿರುವ ಆಟೋಗಳ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿಸಿಕೊಳ್ಳುತ್ತಿದ್ದಾರೆ.

  ದರ್ಶನ್ ಆಟೋಗಳ ಮೇಲೆ ಆಟೋಗ್ರಾಫ್ ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದಿನ ದಿನ ಆಟೋಚಾಲಕರೆಲ್ಲರೂ ದರ್ಶನ್ ಅವರಿಂದ ಇದೇ ರೀತಿಯಲ್ಲಿ ಆಟೋಗ್ರಾಫ್ ಪಡೆಯುತ್ತಾರೆ ಎನ್ನುವುದು ಕನ್ಫರ್ಮ್ ಆಗಿದೆ.

  English summary
  Kannada actor Darshan autograph on fan auto rickshaws photos are viral on the social networking site.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X