ಡಿ ಬಾಸ್ ದರ್ಶನ್ 'ಚಾಲೆಂಜಿಂಗ್ ಸ್ಟಾರ್' ಆಗಿ 17 ವರ್ಷ
ಸ್ಯಾಂಡಲ್ ವುಡ್ ನಟ, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ ಇವತ್ತಿಗೆ 17 ವರ್ಷವಾಗಿದೆ. ಅಂದರೆ ದರ್ಶನ್ ಗೆ ಚಾಲೆಂಜಿಂಗ್ ಸ್ಟಾರ್ ಬಿರುದು ಸಿಕ್ಕಿ 17 ವರ್ಷ ಪೂರೈಸಿದೆ. 2003 ಮೇ 23ರಂದು ದರ್ಶನ್ ಗೆ ಚಾಲೆಂಜಿಂಗ್ ಸ್ಟಾರ್ ಬಿರುದು ಸಿಕ್ಕಿದೆ.
Recommended Video
ಕೇವಲ ದರ್ಶನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದರ್ಶನ್ ಆನಂತರ ಚಾಲೆಂಜಿಂಗ್ ಸ್ಟಾರ್ ಆಗಿ, ಅಭಿಮಾನಿಗಳ ಆರಾಧ್ಯ ದೈವನಾಗಿ ಖ್ಯಾತಿಗಳಿಸಿದ್ದಾರೆ. ಸದ್ಯ ದರ್ಶನ್ ಗೆ ಸಾಕಷ್ಟು ಬಿರುದುಗಳಿವೆ. ಅಭಿಮಾನಿಗಳು ನೆಚ್ಚಿನ ನಟನನ್ನು ನಾನಾಹೆಸರಿನ ಮೂಲಕ ಗುಣಗಾನ ಮಾಡುತ್ತಾರೆ. ಮುಂದೆ ಓದಿ..

ಸಾಕಷ್ಟು ಬಿರುದುಗಳ ಒಡೆಯ ದರ್ಶನ್
ದರ್ಶನ್ ಗೆ ಸಾಕಷ್ಟು ಬಿರುದುಗಳಿವೆ. ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್, ದಾಸ ಹೀಗೆ ಸಾಕಷ್ಟು ಹೆಸರುಗಳಿಂದ ದರ್ಶನ್ ಅವರನ್ನು ಕರೆಯುತ್ತಾರೆ ಪೂಜಿಸುತ್ತಾರೆ.
ಈ ವಿಶೇಷ ದಿನದಂದು ಅಭಿಮಾನಿಗಳು ದರ್ಶನ್ ಮನೆ ಮುಂದೆ ಬಂದು ಜಮಾಯಿಸುತ್ತಿದ್ದರು. ಆದರೆ ಕೊರೊನಾ ಲಾಕ್ ಡೌನ್ ನಿಂದ ಅಭಿಮಾನಿಗಳು ಮನೆಯಲ್ಲಿಯೇ ಇರುವಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ
ಚಾಲೆಂಜಿಂಗ್ ಸ್ಟಾರ್ ಬಿರುದು ಸಿಕ್ಕ ದಿನವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಬಿರುದು ಸಿಕ್ಕ ಫೋಟೋವನ್ನು ಶೇರ್ ಮಾಡುವ ಮೂಲಕ ಸಂತಸ ಹಂಚಿಕೊಳ್ಳುತ್ತಿದ್ದಾರೆ. "ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ "ಚಾಲೆಂಜಿಂಗ್ ಸ್ಟಾರ್" ಎಂದು ಬಿರುದನ್ನು ನೀಡಿ ಇಂದಿಗೆ 17ವರುಷ ಪೂರೈಸಿದೆ" ಅಭಿಮಾನಿಗಳು ಬರೆದುಕೊಂಡಿದ್ದಾರೆ.

2001ರಲ್ಲಿ ನಾಯಕನಾಗಿ ಎಂಟ್ರಿ
ಮೆಜೆಸ್ಟಿಕ್ ಸಿನಿಮಾ ಮೂಲಕ 2001ರಲ್ಲಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ದರ್ಶನ್ ಇಂದು ಟಾಪ್ ನಟನಾಗಿ ಹೊರಹೊಮ್ಮಿದ್ದಾರೆ. ಕರಿಯ, ನಮ್ಮ ಪ್ರೀತಿಯ ರಾಮು, ದಾಸ, ಕಲಸಿಪಾಳ್ಯ, ಸಾರಥಿ, ಸಂಗೊಳ್ಳಿ ರಾಯಣ್ಣ ಹೀಗೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿ
ಕಳೆದ ವರ್ಷ ಪೌರಾಣಿಕ ಕುರುಕ್ಷೇತ್ರ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ದರ್ಶನ್, ಸದ್ಯ ಹಿಸ್ಟಾರಿಕಲ್ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭಿಸಿರುವ ದರ್ಶನ್ ಲಾಕ್ ಡೌನ್ ನಿಂದ ಮನೆಯಲ್ಲಿಯೆ ಇರುವಂತಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡುವ ಸಾಧ್ಯತೆ ಇದೆ.


Click it and Unblock the Notifications











