ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದಾಗುತ್ತಾ ? ಹೇಳಿದ್ದೇನು ಸಂಖ್ಯಾಬ್ರಹ್ಮ ಆರ್ಯವರ್ಧನ್ ಗುರೂಜಿ ?
ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ.
ಕೇವಲ ಜ್ಯೋತಿಷ್ಯ ಮಾತ್ರ ಅಲ್ಲ ಸಂಖ್ಯಾಶಾಸ್ತ್ರ ಮತ್ತು ರೇಖಾಶಾಸ್ತ್ರವನ್ನು ಕೂಡ ನಂಬುವ ಬಹುದೊಡ್ಡ ವರ್ಗ ಸದ್ಯ ಇದೆ. ಎಲ್ಲಾ ಕಾರ್ಯಗಳೂ ಸಂಖ್ಯೆಗಳನ್ನು ಅನುಸರಿಸಿಯೇ ಮುಂದುವರೆಯುತ್ತದೆ. ಹೀಗೆ ಸಂಖ್ಯಾ ಶಾಸ್ತ್ರದಿಂದ ಹೆಸರು, ಕೀರ್ತಿ ಮತ್ತು ಹಣವನ್ನು ಗಳಿಸಿದವರು ಸಾಕಷ್ಟು ಜನ ಇದ್ದು ಆ ಪೈಕಿ ಆರ್ಯವರ್ಧನ್ ಕೂಡ ಒಬ್ಬರು.

ನಂಬರ್ ಅಂದರೆ ನಾನು, ನಾನು ಅಂದರೆ ನಂಬರ್ ಎಂದು ಹೇಳುತ್ತಲೇ ಕರುನಾಡಿನೆಲ್ಲೆಡೆ ಜನಪ್ರಿಯವಾದ ಆರ್ಯವರ್ಧನ್ ತಮ್ಮ ನಂಬರ್ ಬಲದಿಂದ ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದರು. , 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಕೂಡ ತಾಳಕ್ಕೆ ತಕ್ಕಂತೆ ಕುಣಿದರು. ಇನ್ನು ಇವರು ಮಾಡಿಕೊಂಡ ವಿವಾದಗಳಿಗೆ ಬರ ಇಲ್ಲ.
ಇಂಥಾ ಆರ್ಯವರ್ಧನ್ ಸದ್ಯ ದರ್ಶನ್ ವಿಚಾರದಲ್ಲಿ ಭವಿಷ್ಯವನ್ನು ಹೇಳಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ದರ್ಶನ್ ಜಾಮೀನು ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಬೇಲ್ ರದ್ದಾಗುತ್ತಾ ? ಅಥವಾ ಬೇಲ್ ಸಿಗುತ್ತಾ ? ಎನ್ನುವ ಪ್ರಶ್ನೆ ಈಗ ಹಲವರಲ್ಲಿದೆ. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿರುವ ಹಿನ್ನೆಲೆ ದರ್ಶನ್‌ಗೆ ಸಿಕ್ಕಿರುವ ಜಾಮೀನು ರದ್ದಾಗುವುದು ಬಹುತೇಕ ಖಚಿತವೆನ್ನುವ ಅಭಿಪ್ರಾಯ ಸದ್ಯ ವ್ಯಕ್ತವಾಗುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಸದ್ಯ ಮಾತನಾಡಿದ್ದಾರೆ. ಈ ಕುರಿತು ''ನ್ಯಾಷನಲ್ ಟಿವಿ'' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆರ್ಯವರ್ಧನ್ ಗುರೂಜಿ ಅವರ ಜನ್ಮದಿನಾಂಕ 7 [ 1+6 ] ಆಗಿರುವುದಕ್ಕೆ ಅವರಿಗೆ ಸಮಸ್ಯೆಗಳಾಗುತ್ತಿವೆ. ಈಗ ಅವರು ಬುದ್ದಿವಂತರಾಗಿದ್ದಾರೆ ಎಂದು ಹೇಳಿದ್ದಾರೆ.
ಅವರದು.. ನಂದು ಮತ್ತು ದಿನಕರ್, ನಮ್ಮ ಮೂವರದ್ದು ಕೂಡ ವೃಷಭ ಲಗ್ನ, ವಿನೀಶ್ ವೃಶ್ಚಿಕ ರಾಶಿ.. ವಿಜಯಲಕ್ಷ್ಮಿ ಅವರದ್ದು ಭರಣಿ ನಕ್ಷತ್ರ ಮೇಷ ರಾಶಿ ಎಂದು ಹೇಳಿರುವ ಆಯವರ್ಧನ್ ಗುರೂಜಿ,ಯಾವತ್ತು ವೃಷಭ ಲಗ್ನದವರಿಗೆ ಮೂರನೇ ಮನೆಯಲ್ಲಿ ಶನಿ ಇರಬಾರದು ಎಂದು ಹೇಳಿದ್ದಾರೆ.

ಮೂರನೇ ಮನೆಯಲ್ಲಿ ಕಾಮ..ಜಗಳ..ಧೈರ್ಯ ಹೇಳುತ್ತೆ ಇವರಿಗೆ ಶತ್ರುಗಳು ಜಾಸ್ತಿ ಎಂದು ಹೇಳಿದ್ದಾರೆ. ಜ್ಯೋತಿಷ್ಯದಲ್ಲಿ ಮೂರನೇ ಮನೆ ಆರನೇ ಮನೆಯಲ್ಲಿ ಪಾಪ ಗ್ರಹಗಳಿರಬಾರದು ಅಲ್ಲೆಲ್ಲ ಶುಭ ಗ್ರಹಗಳಿರಬೇಕು ಎಂದು ಹೇಳಿರುವ ಆರ್ಯವರ್ಧನ್ ಗುರೂಜಿ ಆರನೇ ಮನೆ ಖಾಲಿ ಇದ್ದರೂ ಪರವಾಗಿಲ್ಲ ಆದರೆ ಮೂರನೇ ಮನೆಯಲ್ಲಿ ಪಾಪ ಗ್ರಹಗಳಿದ್ದರೆ ಕೋಪ.. ಜಗಳ..ಜೈಲು ಇದೆಲ್ಲ ಅನುಭವಿಸಲೇಬೇಕು ಅದು ಅವರ ಕರ್ಮ ಎಂದು ಹೇಳಿದ್ದಾರೆ.
ಆದರೆ ಇದೇ ಸಮಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನೂರಕ್ಕೆ ನೂರು ದರ್ಶನ್ ಅವರಿಗೆ ಜಾಮೀನು ಸಿಗುತ್ತೆ ಎಂದು ಹೇಳಿದ್ದಾರೆ. ಮುಂದೆ ದರ್ಶನ್ ಸುಮ್ಮನೆ ಇದ್ದರು ಕೂಡ ಸಮಸ್ಯೆಗಳು ಅವರನ್ನೇ ಹುಡುಕಿಕೊಂಡು ಬರುತ್ತಾವೆ ಎಂದು ಕೂಡ ಹೇಳಿದ್ದಾರೆ.
ಇನ್ನುಳಿದಂತೆ ಜಾಮೀನು ರದ್ದು ಕೋರಿ ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಚಾಲ್ತಿಯಲ್ಲಿದೆ. ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನು ರದ್ದು ಮಾಡದಂತೆ ತಮ್ಮ ಲಿಖಿತ ವಾದ ಸಲ್ಲಿಸಿದ್ದಾರೆ. ಶೀಘ್ರದಲ್ಲಿಯೇ ತೀರ್ಪು ಬರುವ ನಿರೀಕ್ಷೆ ಇದ್ದು ಆಯವರ್ಧನ್ ಗುರೂಜಿ ಹೇಳಿರುವ ಭವಿಷ್ಯ ನಿಜವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











