Devil Shooting: 'ಡೆವಿಲ್' ಆಕ್ಷನ್ ಧಮಾಕ ಜೋರು; ದರ್ಶನ್ ಹೊಸ ಲುಕ್ ವೈರಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಚಿತ್ರೀಕರಣ ಶುರುವಾಗಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ದರ್ಶನ್ ಪ್ರಯತ್ನಿಸುತ್ತಿದ್ದಾರೆ. ಪ್ರಕಾಶ್‌ ವೀರ್ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಬಂಡವಾಳ ಕೂಡ ಹೂಡುತ್ತಿದ್ದಾರೆ. 'ಕಾಟೇರ' ಬ್ಲಾಕ್‌ಬಸ್ಟರ್ ಬಳಿಕ 'ಡೆವಿಲ್' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಡೆವಿಲ್' ಚಿತ್ರದ ಟೀಸರ್ ರಿಲೀಸ್ ಆಗಿತ್ತು. ದರ್ಶನ್ ಲುಕ್ಕು, ಮ್ಯಾನರಿಸಂ, ಪಾಪು ಕಥೆ ಅಭಿಮಾನಿಗಳಿಗೆ ಸಖತ್ ಮಜಾ ಕೊಟ್ಟಿತ್ತು. ಇನ್ನು ಸೂಪರ್ ಹಿಟ್ 'ತಾರಕ್' ಸಿನಿಮಾ ಕಾಂಬಿನೇಷನ್ ಆಗಿರುವುದರಿಂದ ಸಹಜವಾಗಿಯೇ 'ಡೆವಿಲ್' ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಎಂದು ಈಗಾಗಲೇ ನಿರ್ದೇಶಕರು ಹೇಳಿದ್ದಾರೆ.

Darshan Begins Shooting For First Schedule Of Devil the hero

'ಡೆವಿಲ್' ಅಭಿಮಾನಿಗಳಿಗಂತ್ಲೇ ಹೇಳಿ ಮಾಡಿಸಿರುವ ಕಥೆ ಎಂದು ಹೇಳಲಾಗ್ತಿದೆ. ಇನ್ನು ದರ್ಶನ್ ಲುಕ್ ಕೂಡ ಕುತೂಹಲ ಮೂಡಿಸಿದ್ದು ಚಿತ್ರದಲ್ಲಿ ನೆಗೆಟಿವ್ ಶೇಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.

ನವೆಂಬರ್‌ನಲ್ಲೇ 'ಡೆವಿಲ್' ಸಿನಿಮಾ ಮುಹೂರ್ತ ನಡೆದಿತ್ತು. ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ನೆರವೇರಿಸಲಾಗಿತ್ತು. ಬಳಿಕ 'ಕಾಟೇರ' ಸಕ್ಸಸ್‌ ಬೆನ್ನಲ್ಲೇ ಹುಟ್ಟುಹಬ್ಬದ ವೇಳೆಗೆ ಸಣ್ಣ ಟೀಸರ್ ಶೂಟ್ ಮಾಡಿ ರಿಲೀಸ್ ಮಾಡಿದ್ದರು. ಇದೀಗ ಅಧಿಕೃತವಾಗಿ 'ಡೆವಿಲ್' ಚಿತ್ರೀಕರಣ ಆರಂಭವಾಗಿದೆ. ನೆಲಮಂಗಲ ಸಮೀಪದ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಫಸ್ಟ್ ಶೆಡ್ಯೂಲ್ ಶುರುವಾಗಿದೆ.

ಭರ್ಜರಿ ಸೆಟ್ ನಿರ್ಮಾಣ ಮಾಡಿ 'ಡೆವಿಲ್' ಚಿತ್ರದ ಆಕ್ಷನ್ ಸೀಕ್ವೆನ್ಸ್ ಸೆರೆ ಹಿಡಿಯಲಾಗುತ್ತಿದೆ. ದರ್ಶನ್ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊವೊಂದು ವೈರಲ್ ಆಗುತ್ತಿದೆ. ಯುವ ನಟ ರಾಜವರ್ಧನ್ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ದರ್ಶನ್ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ದರ್ಶನ್ 'ಡೆವಿಲ್' ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಫೋಟೊವನ್ನು ವೈರಲ್ ಮಾಡಲಾಗುತ್ತಿದೆ.

ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳ ಚಿತ್ರೀಕರಣ ವೇಳೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತಿದೆ. ಚಿತ್ರೀಕರಣದ ಫೋಟೊ, ವಿಡಿಯೋ ಲೀಕ್ ಆಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಟ ದರ್ಶನ್ ಸಿನಿಮಾಗಳ ವಿಚಾರದಲ್ಲೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. 'ರಾಬರ್ಟ್', 'ಕ್ರಾಂತಿ', 'ಕಾಟೇರ' ಸಿನಿಮಾಗಳ ವಿಚಾರದಲ್ಲಿ ಇದನ್ನು ಪಾಲಿಸಲಾಗಿತ್ತು. ಇದೀಗ 'ಡೆವಿಲ್' ಸಿನಿಮಾ ಚಿತ್ರೀಕರಣದ ವಿಚಾರದಲ್ಲೂ ಇದೇ ಪ್ರಯತ್ನ ಮಾಡಲಾಗುತ್ತಿದೆ.

ಚಿತ್ರತಂಡ ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಕೂಡ 'ಡೆವಿಲ್' ಸೆಟ್‌ ಹೊರ ಭಾಗದಿಂದ ಸೆರೆಹಿಡಿದಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಸೆಟ್ಟು, ಕ್ಯಾರವಾನ್‌ಗಳು ನಿಂತಿರುವುದನ್ನು ನೋಡಬಹುದು. ಅಭಿಮಾನಿಗಳು ಈ ವಿಡಿಯೋವನ್ನು ಬಹಳ ವೈರಲ್ ಮಾಡುತ್ತಿದ್ದಾರೆ.

ಅಂದಹಾಗೆ ನಟ ದರ್ಶನ್ ನಾಳೆ(ಮಾರ್ಚ್ 27) ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟನೆಯ 'ಮ್ಯಾಟ್ನಿ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗುತ್ತಿದ್ದಾರೆ. ಮಂತ್ರಿ ಮಾಲ್‌ನಲ್ಲಿ ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ದರ್ಶನ್ ಬರುತ್ತಿದ್ದಾರೆ. ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಏಪ್ರಿಲ್ 5ರಂದು 'ಮ್ಯಾಟ್ನಿ' ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Shooting of Darshan's new film devil in full swing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X