ಪ್ರಚಾರದ ವೇಳೆ ದಾಸನ ಈ ನಡೆಯನ್ನು ಮೆಚ್ಚಿಕೊಂಡ ಅಭಿಮಾನಿಗಳು
Recommended Video

ಮಂಡ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಚಾರದ ಭರಾಟೆ ಜೋರಾಗಿದೆ. ದಿನದಿಂದ ದಿನಕ್ಕೆ ಪ್ರಚಾರದ ಅಬ್ಬರ ಹೆಚ್ಚಾಗುತ್ತಿದೆ. ದರ್ಶನ್ ಹೋದ ಕಡೆಯಲೆಲ್ಲಾ ಅಪಾರ ಸಂಖ್ಯೆಯ ಜನಸಾಗರ ಹರಿದು ಬರುತ್ತಿದ್ದು, ಎಲ್ಲಾ ಕಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮಕ್ಕೆ ಬೆರಗಾದ ದಚ್ಚು ಅಭಿಮಾನಿಗಳ ಖುಷಿಗೆ ಏನು ಬೇಕಾದರು ಮಾಡಲು ಸಿದ್ದರಾಗಿದ್ದಾರೆ. ಶುಕ್ರವಾರ ಮಂಡ್ಯದ ಮಳವಳ್ಳಿಯಲ್ಲಿ ಪ್ರಚಾರ ಶುರು ಮಾಡಿದ ಡಿ ಬಾಸ್ ಅಭಿಮಾನಿಯೊಬ್ಬರ ಬೈಕ್ ರೈಡ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಪ್ರಚಾರದ ವೇಳೆ ಹಳ್ಳಿಗೆ ಎಂಟ್ರಿ ಕೊಟ್ಟ ದರ್ಶನ್ ಪಲ್ಸರ್ ಬೈಕ್ ಚಾಲನೆ ಮಾಡಿದ್ದಾರೆ. ದಚ್ಚು ಬೈಕ್ ಏರಿ ಬರುತ್ತಿದ್ದಂತೆ ಜನ ಚಾಲೆಂಜಿಂಗ್ ಸ್ಟಾರ್ ಅವರನ್ನು ಮುತ್ತಿಕೊಂಡರು. ಆ ನಂತರ ಮತ್ತೆ ತೆರೆದ ವಾಹನ ಹತ್ತಿ ಪ್ರಚಾರ ಮುಂದುವರೆಸಿದರು.

ನಂತರ ವಿಕಲ ಚೇತನ ಅಭಿಮಾನಿಯೊಬ್ಬ ಎದುರಾಗುತ್ತಿದ್ದಂತೆ ದರ್ಶನ್ ಪ್ರಚಾರದ ವಾಹನದಿಂದ ಇಳಿದು ಹೋಗಿ ಮಾತನಾಡಿಸಿದರು. ಇದೇ ವೇಳೆ ಅಭಿಮಾನಿ ಜೊತೆ ಫೋಟೋಗೆ ಪೋಸ್ ಕೊಟ್ಟು ಸುಮಲತಾ ಅವರಿಗೆ ಮತಹಾಕಿ ಎಂದು ವಿನಂತಿಸಿಕೊಂಡರು. ಪ್ರಚಾರದ ನಡುವೆಯೂ ದಚ್ಚು ನಡೆದುಕೊಳ್ಳುತ್ತಿರುವ ರೀತಿ, ಅವರ ಕೆಲವು ನಡೆಗಳು ಅಭಿಮಾನಿಗಳ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.


Click it and Unblock the Notifications