ಹುಟ್ಟುಹಬ್ಬದ ಹಿನ್ನೆಲೆ ದರ್ಶನ್ ಮನೆ ಮುಂದೆ ಅಭಿಮಾನಿಗಳು ಮಾಡಿದ್ದೇನು?

By Bharath Kumar

ಡಿ ಬಾಸ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಕೇವಲ 9 ದಿನಗಳು ಮಾತ್ರ ಬಾಕಿಯಿದೆ. ಫೆಬ್ರವರಿ 16 ರಂದು ಸ್ಯಾಂಡಲ್ ವುಡ್ ಚಕ್ರವರ್ತಿಯ ಜನುಮದಿನ. ಈ ಹಬ್ಬಕ್ಕಾಗಿ ಅಭಿಮಾನಿಗಳು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆ ದಿನ ತಮ್ಮ ನೆಚ್ಚಿನ ನಟನನ್ನ ನೋಡಿ, ವಿಶ್ ಮಾಡ್ಬೇಕು ಅಂತ ಈಗಲೇ ಪ್ಲಾನ್ ಮಾಡಿಕೊಂಡಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ದರ್ಶನ್ ಹುಟ್ಟುಹಬ್ಬದ ತಯಾರಿ ಸಿಕ್ಕಾಪಟ್ಟೆ ಜೋರಾಗಿದೆ. ಈ ನಡುವೆ ಸ್ವತಃ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಯಾರಿಗೂ ತೊಂದರೆ ಕೊಡಬೇಡಿ. ಗೋಡೆಗಳ ಮೇಲೆ ಕಟೌಟ್, ಬ್ಯಾನರ್ ಗಳನ್ನ ಹಾಕಬೇಡಿ ಎಂದು ಕೇಳಿಕೊಂಡಿದ್ದಾರೆ.

ಡಿ ಬಾಸ್ ಉತ್ಸವಕ್ಕೆ ಇನ್ನೂ 9 ದಿನ ಬಾಕಿ ಇರುವಾಗಲೇ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ನಿವಾಸ ತಯಾರಿಯಾಗಿದೆ. ಅಷ್ಟಕ್ಕೂ, ಅಭಿಮಾನಿಗಳು ದರ್ಶನ್ ಮನೆ ಮುಂದೆ ಮಾಡಿದ್ದೇನು? ಮುಂದೆ ಓದಿ.....

ಬೃಹತ್ ಆಕಾರದಲ್ಲಿ ನಿಂತ ದುಯೋರ್ಧನ

ಬೃಹತ್ ಆಕಾರದಲ್ಲಿ ನಿಂತ ದುಯೋರ್ಧನ

ಬೆಂಗಳೂರಿನ ಆರ್.ಆರ್ ನಗರದಲ್ಲಿರುವ ದರ್ಶನ್ ತೂಗುದೀಪ ನಿಲಯದ ಮುಂದೆ ಬೃಹತ್ ಆಕಾರದ ಕಟೌಟ್ ನಿಲ್ಲಿಸಲಾಗಿದೆ. ಕುರುಕ್ಷೇತ್ರದ ಚಿತ್ರದಲ್ಲಿ ದುರ್ಯೋಧನ ಪಾತ್ರದ ದರ್ಶನ್ ಕಟೌಟ್ ರಾರಾಜಿಸುತ್ತಿದೆ. ಜೊತೆಗೆ ಹೂವಿನ ಅಲಂಕಾರ ಮಾಡಿ, ಹಾಲಿನ ಅಭಿಷೇಕ ಕೂಡ ಮಾಡಲಾಗಿದೆ.

'ಡಿ ಬಾಸ್' ರಗೋಲಿ

'ಡಿ ಬಾಸ್' ರಗೋಲಿ

ಇನ್ನು ದೊಡ್ಡ ಬ್ಯಾನರ್ ಹಾಕಿರುವ ಅಭಿಮಾನಿಗಳು, ಕಟೌಟ್ ಮುಂದೆ 'ಡಿ ಬಾಸ್' ಎಂದು ರಂಗೋಲಿ ಬಿಡಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಭಿಮಾನಿಗಳ ಹಬ್ಬ

ಅಭಿಮಾನಿಗಳ ಹಬ್ಬ

9 ದಿನಕ್ಕೂ ಮುಂಚೆಯೇ ದರ್ಶನ್ ನಿವಾಸದೆದುರು ಉತ್ಸವ ಆರಂಭವಾಗಿದ್ದು, ದರ್ಶನ್ ಅಭಿಮಾನಿಗಳು ಜಾತ್ರೆ ಮಾಡುತ್ತಿದ್ದಾರೆ. ತಮ್ಮ ವಾಟ್ಸಾಪ್ ಹಾಗೂ ಫೇಸ್ ಬುಕ್ ಗಳಲ್ಲಿ ದರ್ಶನ್ ಅವರ ಫೋಟೋಗಳನ್ನ ಡಿಪಿ ಆಗಿ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.

ಟ್ಯಾಟೂಗಳ ಮಿಂಚು

ಟ್ಯಾಟೂಗಳ ಮಿಂಚು

ಇನ್ನು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ತಮ್ಮ ಮೈ-ಕೈಗಳ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ದುರ್ಯೋಧನ, ಡಿ ಬಾಸ್, ಎಂದು ಟ್ಯಾಟೂಗಳನ್ನ ಹಾಕಿಸಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನು ನೋಡುತಿದ್ದರೆ ಈ ಭಾರಿಯ ದರ್ಶನ್ ಹುಟ್ಟುಹಬ್ಬ ಅಭಿಮಾನಿಗಳ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ...

More from Filmibeat

English summary
D Boss Fans start preparation for the Birthday of Kannada actor Challenging star Darshan. darshan's Rajarajeshwari nagara residence decorated for his birthday before 10 days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X