ದರ್ಶನ್ ಹುಟ್ಟುಹಬ್ಬವನ್ನ ಅಭಿಮಾನಿಗಳ ಬರಮಾಡಿಕೊಳ್ಳುತ್ತಿರುವ ರೀತಿ ಇದು!
Recommended Video

ಸಂಕ್ರಾಂತಿ, ಯುಗಾದಿ, ದೀಪಾವಳಿ... ಈ ಎಲ್ಲ ಹಬ್ಬಗಳಿಗಿಂತಲೂ 'ಡಿ-ಉತ್ಸವ'ವೇ ಅರ್ಥಾತ್ 'ಡಿ-ಬಾಸ್' ಹುಟ್ಟುಹಬ್ಬವೇ, ದರ್ಶನ್ ಅಭಿಮಾನಿಗಳಿಗೆ ಅತಿ ದೊಡ್ಡ ಹಬ್ಬ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೂ ಹನ್ನೊಂದು ದಿನ ಬಾಕಿ ಇದೆ. ಫೆಬ್ರವರಿ 16 ರಂದು ದರ್ಶನ್ ಜನ್ಮದಿನ. ಹೀಗಿದ್ದರೂ, ಎರಡ್ಮೂರು ತಿಂಗಳ ಹಿಂದೆಯೇ ದರ್ಶನ್ ಬರ್ತಡೆಗೇ ಕೌಂಟ್ ಡೌನ್ ಶುರು ಮಾಡಿದ್ದ 'ಡಿ-ಬಾಸ್' ಫ್ಯಾನ್ಸ್ ಇದೀಗ ಫೇಸ್ ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್ ಆಪ್ ನಲ್ಲಿ ಒಟ್ಟಾಗಿ ಒಗ್ಗಟ್ಟಿನಿಂದ ದರ್ಶನ್ ಹುಟ್ಟುಹಬ್ಬವನ್ನ ಹೇಗೆ ಸೆಲೆಬ್ರೇಟ್ ಮಾಡ್ತಿದ್ದಾರೆ ಗೊತ್ತಾ.?
ದರ್ಶನ್ ಜನ್ಮದಿನದಂದು, ಅವರ ಮನೆ ಮುಂದೆ ಕೇಕ್ ಕಟ್ ಮಾಡುವುದು, ಪಟಾಕಿ ಹೊಡೆಯುವುದು, ಉಡುಗೊರೆ ನೀಡುವುದೆಲ್ಲ ಸಾಮಾನ್ಯ. ಆದ್ರೆ, ಫೇಸ್ ಬುಕ್, ಟ್ವಿಟ್ಟರ್ ಮತ್ತು ವಾಟ್ಸ್ ಆಪ್ ನಲ್ಲಿ ಏನ್ ಮಾಡಬಹುದು ಅಂತ ಯೋಚನೆ ಮಾಡ್ತಿದ್ದೀರಾ.? ಸಂಪೂರ್ಣ ವಿವರ ಇಲ್ಲಿದೆ ನೋಡಿ....

ಎಲ್ಲೆಲ್ಲೂ ಒಂದೇ ಡಿ.ಪಿ
ಮೊದಲನೇಯದ್ದಾಗಿ, ಡಿಸ್ಪ್ಲೇ ಫೋಟೋ. ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ನೀವು ಯಾವುದೇ ದರ್ಶನ್ ಫ್ಯಾನ್ಸ್ ಪೇಜ್ ಗೆ ಹೋದರೂ ನಿಮ್ಮ ಕಣ್ಣಿಗೆ ಕಾಣುವ ಪ್ರೊಫೈಲ್ ಫೋಟೋ ಹಾಗೂ ಕವರ್ ಫೋಟೋ ಇದೇ.!

ವಾಟ್ಸ್ ಆಪ್ ನಲ್ಲೂ ಹೀಗೆ.!
ಇನ್ನೂ ವಾಟ್ಸ್ ಆಪ್ ಗೆ ಬಂದರೆ, ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ 200 ಕ್ಕೂ ಹೆಚ್ಚು ವಾಟ್ಸ್ ಆಪ್ ಗ್ರೂಪ್ ಗಳು ಇವೆ. ಆ ಎಲ್ಲ ಗ್ರೂಪ್ ಗಳ ಡಿಸ್ಪ್ಲೇ ಫೋಟೋ ಕೂಡ ಇದೇ.!

ಡಿ-ಉತ್ಸವ
ಫೆಬ್ರವರಿ ಪೂರ್ತಿ ತಿಂಗಳು ಎಲ್ಲ ಗ್ರೂಪ್ ಹಾಗೂ ಪೇಜ್ ಗಳಲ್ಲಿ ಇದೇ ಡಿಸ್ಪ್ಲೇ ಫೋಟೋ ರಾರಾಜಿಸಲಿದೆ. ಅಷ್ಟರಮಟ್ಟಿಗೆ, ಸೋಷಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಅಭಿಮಾನಿಗಳೆಲ್ಲ ಒಟ್ಟಾಗಿ, ಒಗ್ಗಟ್ಟಾಗಿ 'ಡಿ-ಉತ್ಸವ'ವನ್ನ ಬರಮಾಡಿಕೊಳ್ಳುತ್ತಿದ್ದಾರೆ.

ತುದಿಗಾಲಲ್ಲಿ ನಿಂತು ಕಾಯುತ್ತಿರುವ ಅಭಿಮಾನಿಗಳು
'ಡಿ-ಉತ್ಸವ' ಹೇಳಿ ಕೇಳಿ ಅಭಿಮಾನಿಗಳ ಹಬ್ಬ. ಹೀಗಾಗಿ, ದರ್ಶನ್ ಫ್ಯಾನ್ಸ್ ಫೆಬ್ರವರಿ 16 ಯಾವಾಗ ಆಗುತ್ತೋ ಅಂತ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.


Click it and Unblock the Notifications











