ದರ್ಶನ್ ಅಭಿಮಾನಕ್ಕೆ ಅಭಿಮಾನಿಗಳ ಕೈ ಮೀಸಲು

By Pavithra

ಕಳೆದ ಒಂದು ವಾರಗಳಗಳಿಂದಲೂ ಸ್ಯಾಂಡಲ್ ವುಡ್ ಅಂಗಳದಲ್ಲಿ ದರ್ಶನ್ ಹುಟ್ಟುಹಬ್ಬದ್ದೇ ಸುದ್ದಿ. ಅಭಿಮಾನಿಗಳು ಈ ಬಾರಿಯ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡುವ ಉದ್ದೇಶದಿಂದ ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ.

ದರ್ಶನ್ ಪತ್ನಿ ಪತಿಯ ಹುಟ್ಟುಹಬ್ಬಕ್ಕಾಗಿ ಎರಡು ವಾರಕ್ಕೂ ಮುಂಚೆಯೇ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಈಗಾಗಲೇ ಸಂಭ್ರಮ ಪ್ರಾರಂಭ ಮಾಡಿದ್ದಾರೆ.

ಈ ಬಾರಿ ಹುಟ್ಟುಹಬ್ಬ ವಿಭಿನ್ನವಾಗಿ ಇರಲೇಬೇಕು ಎಂದು ನಿರ್ಧರಿಸಿರುವ ಅಭಿಮಾನಿಯ ವರ್ಗ ದರ್ಶನ್ ಅವರ ಅಭಿಮಾನಕ್ಕೆ ನಮ್ಮ ಕೈಗಳನ್ನ ಅರ್ಪಿಸಿದ್ದಾರೆ. ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ನಾವು ಹೇಳುತ್ತಿರುವುದು ಹುಟ್ಟುಹಬ್ಬ ಹತ್ತಿರವಾಗುತ್ತಿದ್ದಂತೆ ಪ್ರತಿಯೊಬ್ಬರು ತಮ್ಮ ಕೈಗಳ ಮೇಲೆ ದರ್ಶನ್ ಹಚ್ಚೆ ಹಾಕಿಸಿಕೊಳ್ಳಲು ಆರಂಭಿಸಿದ್ದಾರೆ ಎಂದು. ಹಾಗಾದರೆ ದರ್ಶನ್ ಟ್ಯಾಟೂ ಮೇನಿಯಾ ಹೇಗಿದೆ? ಯಾರೆಲ್ಲಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಇಲ್ಲಿದೆ ಮಾಹಿತಿ. ಮುಂದೆ ಓದಿ

ಹುಟ್ಟುಹಬ್ಬಕ್ಕೆ ಟ್ಯಾಟೂ ಮೇನಿಯಾ

ಹುಟ್ಟುಹಬ್ಬಕ್ಕೆ ಟ್ಯಾಟೂ ಮೇನಿಯಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿಂದೆ ಎಂದಿಗೂ ಕ್ರಿಯೆಟ್ ಆಗದಷ್ಟು ನಿರೀಕ್ಷೆ, ಕಾತುರ ಈ ಬಾರಿ ಅಭಿಮಾನಿಗಳಲ್ಲಿ ಹುಟ್ಟುಕೊಂಡಿದೆ. ಹುಟ್ಟುಹಬ್ಬ ಸಮೀಪವಾಗುತ್ತಿದ್ದಂತೆ ದರ್ಶನ್ ಟ್ಯಾಟೂ ಮೇನಿಯಾ ಶುರುವಾಗಿದೆ.

ದರ್ಶನ್ ಗಾಗಿ ಕೈಗಳ ಮೀಸಲಿಟ್ಟ ಅಭಿಮಾನಿಗಳು

ದರ್ಶನ್ ಗಾಗಿ ಕೈಗಳ ಮೀಸಲಿಟ್ಟ ಅಭಿಮಾನಿಗಳು

ಹುಟ್ಟುಹಬ್ಬ ಹತ್ತಿರವಾಗುತ್ತಿದ್ದಂತೆ ದರ್ಶನ್ ಅವರ ಟ್ಯಾಟೂ ಹಾಕಿಸಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ವಿಶೇಷ ಎಂದರೆ ಅಭಿಮಾನಿಗಳು ಎರಡು ಕೈಗಳಲ್ಲಿ ದರ್ಶನ್ ಹಾಗೂ ದಿವಂಗತ ನಟ ತೂಗುದೀಪ ಶ್ರೀನಿವಾಸ್ ಅವರ ಭಾವಚಿತ್ರವನ್ನ ಹಾಕಿಸಿಕೊಳ್ಳುತ್ತಿದ್ದಾರೆ.

ಆಟೋಗ್ರಾಫ್ ಆಗುತ್ತಿದೆ ಹಚ್ಚೆ

ಆಟೋಗ್ರಾಫ್ ಆಗುತ್ತಿದೆ ಹಚ್ಚೆ

ಭಾವಚಿತ್ರಗಳ ಜೊತೆಯಲ್ಲಿ ದರ್ಶನ್ ಸಿನಿಮಾ ಹೆಸರುಗಳು ಹಾಗೂ ಡಿ ಬಾಸ್ ಹಾಕಿದ ಆಟೋಗ್ರಾಫ್ ಗಳು ಹಚ್ಚೆಯ ರೂಪ ತಾಳುತ್ತಿದೆ. ಇದೇ ಕಾರಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ಕೈಗಳ ಮೇಲೆ ಆಟೋಗ್ರಾಫ್ ಹಾಕುವುದನ್ನ ನಿಲ್ಲಿಸಿದ್ದಾರೆ.

ಮಹಿಳಾ ಅಭಿಮಾನಿಗಳ ಕೈನಲ್ಲಿ ದರ್ಶನ್

ಮಹಿಳಾ ಅಭಿಮಾನಿಗಳ ಕೈನಲ್ಲಿ ದರ್ಶನ್

ಕೇವಲ ಹುಡುಗರು ಮಾತ್ರವಲ್ಲದೆ ಮಹಿಳಾ ಅಭಿಮಾನಿಗಳ ಕೈನಲ್ಲೂ ದರ್ಶನ್ ಅವರ ಹೆಸರು ರಾರಾಜಿಸುತ್ತಿವೆ. ಇದರ ಹಿಂದಿನ ಉದ್ದೇಶ ಹುಟ್ಟುಹಬ್ಬ ವಿಶೇಷವಾಗಿರಲಿ ಎಂದು.

More from Filmibeat

English summary
Fans start preparation for the Birthday of Kannada actor Challenging star Darshan. As the birthday special the fans are tattooed Darshan's name on hands.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X