Devil Teaser: ಸರಸು ಪಾಪು ಹೆಸರು ಕೇಳಲ್ವಾ? ಗಹಗಹಿಸಿದ ಸಖತ್ ಕ್ರೇಜಿ ಖತರ್ನಾಕ್ 'ಡೆವಿಲ್'

ಚಾಲೆಂಜಿಂಗ್ ಸ್ಟಾರ್ ದರ್ಶನ್ 47ನೇ ವರ್ಷ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ದರ್ಶನ್ ನಿವಾಸದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ. 'ಕಾಟೇರ' bLik ದರ್ಶನ್ ನಟಿಸುತ್ತಿರುವ 'ಡೆವಿಲ್' ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. 'ತಾರಕ್' ಬಳಿಕ ದರ್ಶನ್- ಪ್ರಕಾಶ್ ಜೋಡಿಯ ಎರಡನೇ ಸಿನಿಮಾ ಇದು. 1 ನಿಮಿಷ 48 ಸೆಕೆಂಡ್‌ಗಳ ಪವರ್‌ ಪ್ಯಾಕ್ಡ್ ಟೀಸರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತಿದೆ.

Darshan Birthday Specil; Devil The hero teaser Released

'ಡೆವಿಲ್' ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ. 'ಕಾಟೇರ' ಬಳಿಕ ದರ್ಶನ್ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಅದಕ್ಕೆ ಈಗ ಬ್ರೇಕ್ ಬಿದ್ದಂತಾಗಿದೆ. ಜಬರ್ದಸ್ತ್ ಟೀಸರ್‌ನಲ್ಲಿ 'ಡೆವಿಲ್' ವಿಲನಿಸಂ ತೋರಿಸಲಾಗಿದೆ.

ಸ್ಟೈಲಿಶ್‌ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಕ್ಲೀನ್‌ ಶೇವ್‌ನಲ್ಲಿ ವಿಭಿನ್ನ ಗೆಟಪ್‌ನಲ್ಲಿ ಮಿಂಚಿದ್ದಾರೆ. "ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು. ಫೋಟೊ ತೆಗೆಯಲದ್ದಕ್ಕೆ ಬಲು ಕೋಪ ಬರುವುದು" ಎನ್ನುತ್ತಾ ಕ್ರೇಜಿ 'ಡೆವಿಲ್' ದರ್ಶನ್ ಎಂಟ್ರಿಯಾಗಿದೆ.

ವಿಭಿನ್ನ ಸ್ವಾಗ್‌ನಲ್ಲಿ ಸಿಗರೇಟ್ ಸೇದುತ್ತಾ, ಸರಸು ಪಾಪು ಹೆಸರು ಕೇಳಲ್ವಾ? ಎಂದು ತನಗೆ ಮೋಸ ಮಾಡಿದವನನ್ನು ಕೊಂದು 'ಡೆವಿಲ್' ಎಂದು ದರ್ಶನ್ ಗಹಗಹಿಸುವುದನ್ನು ಟೀಸರ್‌ನಲ್ಲಿ ನೋಡಬಹುದು. ಬಾಕ್ಸಾಫೀಸ್ ಸುಲ್ತಾನ್ ಲುಕ್ಕು, ಮ್ಯಾನರಿಸಂ, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ ಎಲ್ಲರೂ ಹೊಸತಾಗಿದೆ. ನಿರ್ದೇಶಕ ಪ್ರಕಾಶ್ ವೀರ್ ಏನೋ ದೊಡ್ಡದಾಗಿ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತಿದೆ.

ಬ್ಲ್ಯಾಕ್‌ ಅಂಡ್ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಮೇಲೊಂದು ಕೆಂಪು ಬಣ್ಣದ ಬ್ಲೇಸರ್ ತೊಟ್ಟು ದರ್ಶನ್ ಮಿಂಚಿದ್ದಾರೆ. ಗೆಟಪ್‌ಗೆ ತಕ್ಕಂತೆ ಕೆಂಪು ಬಣ್ಣದ ಸನ್‌ಗ್ಲಾಸ್ ತೊಟ್ಟು ಮತ್ತಷ್ಟು ರಂಗಾಗಿದ್ದಾರೆ. ಇನ್ನು ಸಿಗರೇಟ್ ಸೇದುವ ಸ್ಟೈಲ್ ಕೂಡ ಗಮನ ಸೆಳೆಯುತ್ತಿದೆ. ಟೀಸರ್ ನೋಡಿದ್ರೆ ಚಿತ್ರದಲ್ಲಿ ದರ್ಶನ್ ಗ್ಯಾಂಗ್‌ಸ್ಟರ್ ಆಗಿ ನಟಿಸುತ್ತಿದ್ದಾರಾ? ಎನ್ನುವ ಕುತೂಹಲ ಮೂಡುತ್ತಿದೆ.

ಸಣ್ಣ ಟೀಸರ್‌ನಿಂದಲೇ 'ಡೆವಿಲ್' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ದರ್ಶನ್ ಗ್ರೇ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇಡೀ ಸಿನಿಮಾ ಪಾತ್ರ ಹೀಗೆ ಇರುತ್ತಾ? ಅಥವಾ ಇದು ಬರೀ ಟೀಸರ್ ಮಾತ್ರನಾ? ಎನ್ನುವುದನ್ನು ಕೂಡ ಕಾದು ನೋಡಬೇಕಿದೆ. ಆದರೆ 'ಕಾಟೇರ' ಬಳಿಕ ಇದು ನಿಜಕ್ಕೂ ಬಹಳ ಡಿಫ್‌ರೆಂಡ್ ಗೆಟಪ್ ಎನ್ನಬಹುದು.

ಅಜನೀಶ್ ಲೋಕನಾಥ್ ಬಿಜಿಎಂ ಟೀಸರ್‌ಗೆ ಮತ್ತಷ್ಟು ಮಜಾ ತಂದು ಕೊಟ್ಟಿದೆ. ಸುಧಾಕರ್ ರಾಜ್ ಛಾಯಾಗ್ರಹಣ 'ಡೆವಿಲ್' ಚಿತ್ರಕ್ಕಿದ್ದು ಹರೀಶ್ ಕೊಮ್ಮೆ ಟೀಸರ್ ಎಡಿಟ್ ಮಾಡಿದ್ದಾರೆ. ಕಳೆದ ವರ್ಷವೇ ಮುಹೂರ್ತ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಶ್ರೀ ಜೈಮಾತಾ ಕಂಬೈನ್ಸ್ ಹಾಗೂ ವೈಷ್ಣೋ ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

Darshan Birthday Specil; Devil The hero teaser Released

ಆದಷ್ಟು ಬೇಗ ಚಿತ್ರೀಕರಣ ಆರಂಭಿಸಿ ವರ್ಷಾಂತ್ಯಕ್ಕೆ 'ಡೆವಿಲ್' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಇನ್ನು ನಾಯಕಿ ಯಾರು? ಬೇರೆ ಯಾರೆಲ್ಲಾ ತಾರಾಗಣದಲ್ಲಿ ಇರುತ್ತಾರೆ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡದಾಗಿಯೇ 'ಡೆವಿಲ್' ದರ್ಬಾರ್ ಶುರುವಾಗಿದೆ. ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತಾಗಿದೆ.

More from Filmibeat

English summary
Darshan Starrer Devil first look action packed teaser out now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X