ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ದರ್ಶನ್
ಗೆಳೆತನಕ್ಕೆ ಹೆಚ್ಚಿನ ಗೌರವ ಕೊಡುವವರು ನಟ ದರ್ಶನ್, ಸಿನಿಮಾ ಉದ್ಯಮದಲ್ಲಿ ಅವರು ನಿಭಾಯಿಸಿಕೊಂಡು ಬಂದಿರುವ ಗೆಳೆತನ ಉತ್ತಮವಾದುದು.
Recommended Video
Ambareesh memorial:ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಅಸ್ತು |Kanteerava Studio |Filmibeat Kannada
ಇಂಥಹಾ ದರ್ಶನ್ ತಮ್ಮ ಆತ್ಮೀಯರಿಗೆ ಹುಟ್ಟುಹಬ್ಬದ ವಿಶ್ ಮಾಡುವುದನ್ನು ಮರೆಯುವುದಿಲ್ಲ. ಅಂತೆಯೇ ಈಗಲೂ ಸಹ ತಮ್ಮ ಕುಚಿಕು ಗೆಳೆಯನಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಅವರು ತಿಳಿಸಿದ್ದಾರೆ.
ದರ್ಶನ್ ಆಪ್ತಮಿತ್ರರಲ್ಲಿ ಒಬ್ಬರಾದ ಸೃಜನ್ ಲೋಕೇಶ್ ಅವರ ಹುಟ್ಟುಹಬ್ಬ ಇಂದು. ಸೃಜನ್ ಅವರ ಎರಡು ಚಿತ್ರಗಳನ್ನು ಹಂಚಿಕೊಂಡು ಸೃಜನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ದರ್ಶನ್ ತಿಳಿಸಿದ್ದಾರೆ.

ದರ್ಶನ್ ಹಾಗೂ ಸೃಜನ್ ಅವರು ಎರಡು ಎತ್ತುಗಳನ್ನು ಹಿಡಿದುಕೊಂಡಿರುವ ಚಿತ್ರವನ್ನು ಪ್ರಕಟಿಸಿರುವ ದರ್ಶನ್ 'ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯ ಸೃಜನ್. ನಿನ್ನ ಇಷ್ಟಾರ್ಥಗಳೆಲ್ಲವೂ ಬೇಗ ಈಡೇರಲಿ' ಎಂದು ಬರೆದಿದ್ದಾರೆ.
ಸೃಜನ್ ಲೋಕೇಶ್ ಮತ್ತು ದರ್ಶನ್ ಬಹುವರ್ಷಗಳಿಂದಲೂ ಆತ್ಮೀಯ ಗೆಳೆಯರು.
More from Filmibeat
English summary
Actor Darshan birthday wish to actor Srujan Lokesh. Both were very good friends.


Click it and Unblock the Notifications











