For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ನಿರ್ದೇಶಕನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಿ ಬಾಸ್ ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬಹುನಿರೀಕ್ಷೆಯ 'ರಾಬರ್ಟ್' ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇತ್ತೀಚಿಗಷ್ಟೆ ಫೇಸ್ ಬುಕ್ ಲೈವ್ ಬಂದಿದ್ದ ದರ್ಶನ್, ರಾಬರ್ಟ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮಾರ್ಚ್ 11ರಂದು ಸಿನಿಮಾ ರಿಲೀಸ್ ಆಗುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.

  ರಾಬರ್ಟ್ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ದರ್ಶನ್ ಮುಂದಿನ ಸಿನಿಮಾ ಯಾವುದು ಎಂದು ಕಾತರ, ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ದರ್ಶನ್ ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಡಿಬಾಸ್ ಮುಂದಿನ ಸಿನಿಮಾಗೆ ಸುಕುಮಾರ್ ಆಕ್ಷನ್ ಕಟ್ ಹೇಳುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಮುಂದೆ ಓದಿ...

  ದಿನಕರ್ ಜೊತೆ ದರ್ಶನ್ ಸಿನಿಮಾ ಯಾವಾಗ? ಡಿ ಬಾಸ್ ಬಳಿ ಇರುವ ಸಿನಿಮಾಗಳೆಷ್ಟು? ಇಲ್ಲಿದೆ ಮಾಹಿತಿ

  ಫೋಟೋ ಶೇರ್ ಮಾಡಿ ವಿಶ್ ಮಾಡಿದ ದರ್ಶನ್

  ಫೋಟೋ ಶೇರ್ ಮಾಡಿ ವಿಶ್ ಮಾಡಿದ ದರ್ಶನ್

  ಹೌದು, ದರ್ಶನ್ ತೆಲುಗು ನಿರ್ದೇಶಕ ಸುಕುಮಾರ್ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿ ಅವರ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅಂದಹಾಗೆ ಈ ಫೋಟೋ ಕೆಲವು ದಿನಗಳ ಹಿಂದಿನದು. ಈಗಾಗಲೇ ಒಮ್ಮೆ ಈ ಪೋಟೋ ವೈರಲ್ ಆಗಿತ್ತು. ಇದೀಗ ದರ್ಶನ್ ಮತ್ತದೆ ಫೋಟೋವನ್ನು ಶೇರ್ ಮಾಡಿ ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

  ಡಿ ಬಾಸ್ ಮುಂದಿನ ಸಿನಿಮಾ ಸುಕುಮಾರ್ ಜೊತೆ?

  ಡಿ ಬಾಸ್ ಮುಂದಿನ ಸಿನಿಮಾ ಸುಕುಮಾರ್ ಜೊತೆ?

  'ಹುಟ್ಟುಹಬ್ಬದ ಶುಭಾಶಯಗಳು ಸುಕುಮಾರ್ ಗಾರು. ಅದ್ಭುತ ವರ್ಷ ನಿಮ್ಮದಾಗಲಿ. ಯಶಸ್ಸು ಸಿಗಲಿ' ಎಂದು ದರ್ಶನ್ ವಿಶ್ ಮಾಡಿದ್ದಾರೆ. ದರ್ಶನ್ ಶುಭಾಶಯ ತಿಳಿಸುತ್ತಿದ್ದಂತೆ 'ಡಿ ಬಾಸ್ ಮುಂದಿನ ಸಿನಿಮಾ ಸುಕುಮಾರ್ ಜೊತೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಸಂತಸ ಪಡುತ್ತಿದ್ದಾರೆ.

  ಚಿತ್ರಮಂದಿರಗಳು ಪೂರ್ಣ ತೆರೆಯದೇ ಇರುವ ಹಿಂದೆ ಅಂಬಾನಿ ಕೈವಾಡ: ದರ್ಶನ್ ಅನುಮಾನ

  ಈ ಹಿಂದೆಯೇ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ

  ಈ ಹಿಂದೆಯೇ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ

  ಡಿ ಬಾಸ್ ದರ್ಶನ್, ತೆಲುಗು ನಿರ್ದೇಶಕ ಸುಕುಮಾರ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು. ಯಜಮಾನ ಸಿನಿಮಾ ಚಿತ್ರೀಕರಣ ಸಮಯದಲ್ಲೇ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆ ಸಮಯದಲ್ಲೇ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ.

  ಫೇಸ್‌ಬುಕ್‌ ಲೈವ್‌ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ದಾಸ ದರ್ಶನ್

  'ಪುಷ್ಪ' ಸಿನಿಮಾದಲ್ಲಿ ಸುಕುಮಾರ್ ಬ್ಯುಸಿ

  'ಪುಷ್ಪ' ಸಿನಿಮಾದಲ್ಲಿ ಸುಕುಮಾರ್ ಬ್ಯುಸಿ

  ಅಂದಹಾಗೆ ಸುಕುಮಾರ್ ಸದ್ಯ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾ ಮುಗಿಸಿ ಸುಕುಮಾರ್ ದರ್ಶನ್ ಜೊತೆ ಸಿನಿಮಾ ಮಾಡಿದರೂ ಅಚ್ಚರಿ ಇಲ್ಲ. ದರ್ಶನ್ ಸಹ ಮುಂದಿನ ಸಿನಿಮಾ ಯಾವುದು ಎಂದು ಇನ್ನೂ ಅನೌನ್ಸ್ ಮಾಡಿಲ್ಲ. ಹಾಗಾಗಿ ರಾಬರ್ಟ್ ರಿಲೀಸ್ ಆದ ಬಳಿಕ ಸುಕುಮಾರ್ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ.

  ನಿರ್ಮಾಪಕ ಪ್ರಸಾದ್ ನಿರ್ಮಾಣದಲ್ಲಿ ಮೂಡಿಬರುತ್ತಾ ಇಬ್ಬರ ಸಿನಿಮಾ

  ನಿರ್ಮಾಪಕ ಪ್ರಸಾದ್ ನಿರ್ಮಾಣದಲ್ಲಿ ಮೂಡಿಬರುತ್ತಾ ಇಬ್ಬರ ಸಿನಿಮಾ

  ಈಗಾಗಲೇ ದರ್ಶನ್ ಹೇಳಿದ ಹಾಗೆ ತೆಲುಗು ನಿರ್ಮಾಪಕರಾದ ಪ್ರಸಾದ್ ಎನ್ನುವವರ ಜೊತೆ ಈಗಾಗಲೇ ಸಿನಿಮಾ ಮಾತುಕತೆಯಾಗಿದೆ. ದರ್ಶನ್ ಬಳಿ ಸಾರುವ ಸಾಲು ಸಾಲು ಸಿನಿಮಾಗಳ ಲಿಸ್ಟ್ ನಲ್ಲಿ ಪ್ರಸಾದ್ ಸಿನಿಮಾ ಕೂಡ ಒಂದು. ಹಾಗಾಗಿ ಪ್ರಸಾದ್ ನಿರ್ಮಾಣದಲ್ಲಿ, ಸುಕುಮಾರ್ ನಿರ್ದೇಶನದಲ್ಲಿ ದರ್ಶನ್ ನಾಯಕನಾಗಿ ಮಿಂಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  English summary
  Challenging star Darshan birthday wish to Telugu director sukumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X