For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮನೆಗೆ ಮತ್ತೊಂದು ಕಾಸ್ಟ್ಲಿ ಕಾರ್: ಇನ್ನೊಬ್ಬ ನಟನ ಬಳಿಯೂ ಇದೆ ಈ ಕಾರು.!

  |
  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾರುಗಳು ಅಂದ್ರೆ ಸಿಕ್ಕಾಪಟ್ಟೆ ಇಷ್ಟ | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾರುಗಳು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಹೊಸದಾಗಿ ಯಾವುದಾದರೂ ಕಾರು ಬಂದಿದೆ ಅಂದ್ರೆ ಆ ಕಾರನ್ನ ಡ್ರೈವ್ ಮಾಡಬೇಕು ಅಥವಾ ಆ ಕಾರನ್ನ ಖರೀದಿ ಮಾಡಬೇಕು ಎಂಬ ಆಸೆ.

  ಅದರಂತೆ ಹೊಸ ಹೊಸ ಕಾರುಗಳನ್ನ ಖರೀದಿ ಮಾಡುತ್ತಲೇ ಇರ್ತಾರೆ. ಈಗಾಗಲೇ ಮನೆಯಲ್ಲಿ ಹಲವು ದುಬಾರಿ ಕಾರು ಇದ್ದರೂ, ಈಗ ಇನ್ನೊಂದು ಹೊಸ ಕಾರು ಖರೀದಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

  ದರ್ಶನ್ ಮನೆಯಂಗಳದಲ್ಲಿ ಮತ್ತೊಂದು ಹೊಸ ಕಾರು

  ಈ ಕಾರಿನ ಬಗ್ಗೆ ಹೇಳುವುದಾದರೇ ಈ ಕಾರು ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಮತ್ತೊಬ್ಬ ನಟನ ಬಳಿಯೂ ಇದೆ. ಕೆಲವು ತಿಂಗಳ ಹಿಂದೆಯಷ್ಟೇ ಆ ಸ್ಟಾರ್ ಕೂಡ ಖರೀದಿಸಿದ್ದರು. ಈಗ ಡಿ ಬಾಸ್ ಕೂಡ ಆ ಕಾರಿಗೆ ಫಿದಾ ಆಗಿದ್ದು ತನ್ನ ಮನೆಯ ಅಂಗಳಕ್ಕೆ ಮತ್ತೊಂದು ಕಾರನ್ನ ಸೇರಿಸಿಕೊಂಡಿದ್ದಾರೆ. ಯಾವುದು ಆ ಕಾರು? ಚಿತ್ರಗಳ ಸಮೇತ ಮುಂದೆ ಓದಿ....

  ಡಿ-ಬಾಸ್ ಮನೆಗೆ ಬಂತು ಲಂಬೋರ್ಗಿನಿ ಕಾರು

  ಡಿ-ಬಾಸ್ ಮನೆಗೆ ಬಂತು ಲಂಬೋರ್ಗಿನಿ ಕಾರು

  ಡಿ ಬಾಸ್ ಬಳಿ ಈಗಾಗಲೇ ಲಂಬೋರ್ಗಿನಿ ಕಾರು ಒಂದಿದೆ. ಈಗ ಇನ್ನೊಂದು ಲಂಬೋರ್ಗಿನಿ ಕಾರನ್ನ ಖರೀದಿಸಿದ್ದಾರೆ. ಹೌದು, ಬಿಳಿ ಬಣ್ಣದ ಲಂಬೋರ್ಗಿನಿ ಅವೆಂಟೆಡರ್ ಇಟ್ಟುಕೊಂಡಿದ್ದ ದರ್ಶನ್ ಈಗ ಲಂಬೋರ್ಗಿನಿ ಉರುಸ್ ಕಾರು ಖರೀದಿ ಮಾಡಿದ್ದಾರೆ.

  ಧನಂಜಯ್ ಗೆ 'ರೇಂಜ್ ರೋವರ್' ಕಾರು ಕೊಡಿಸಿದ್ದು ಇವರೇ.!

  ಈ ಕಾರಿನೆ ಬೆಲೆ ಎಷ್ಟಿದೆ

  ಈ ಕಾರಿನೆ ಬೆಲೆ ಎಷ್ಟಿದೆ

  ಅಂದ್ಹಾಗೆ, ಲಂಬೋರ್ಗಿನಿ ಅವೆಂಟೆಡರ್ 5 ಕೋಟಿ ಬೆಲೆ ಹೊಂದಿದೆ. ಈಗ ದರ್ಶನ್ ಖರೀದಿ ಮಾಡಿರುವ ಕಾರಿನ ಬೆಲೆ ಸುಮಾರು 3 ಕೋಟಿ. ಹಳದಿ ಬಣ್ಣ ಕಾರು ಈಗ ತೂಗುದೀಪ ನಿಲಯಕ್ಕೆ ಮತ್ತಷ್ಟು ಮೆರಗು ನೀಡಿದೆ.

  ಮೈಸೂರು ರಸ್ತೆಯಲ್ಲಿ ಹೊಸ ಕಾರ್ ಶೋ

  ಮೈಸೂರು ರಸ್ತೆಯಲ್ಲಿ ಹೊಸ ಕಾರ್ ಶೋ

  ಯಾವುದೇ ಕಾರು ಖರೀದಿಸಿರೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸುವ ದರ್ಶನ್, ಹೊಸ ಕಾರಿಗೂ ದೇವಿ ದರ್ಶನ ಮಾಡಿಸಿ, ಪೂಜೆ ಮಾಡಿಸಿದ್ದಾರೆ. ನಂತರ ಮೈಸೂರು ರಸ್ತೆಯಲ್ಲಿ ಕಾರು ಡ್ರೈವ್ ಮಾಡಿ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ.

  ಹೊಸ ಕಾರ್ ಖರೀದಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

  ಡಿ ಬಾಸ್ ಕಾರಿನ ಜೊತೆ ಧನ್ವೀರ್

  ಡಿ ಬಾಸ್ ಕಾರಿನ ಜೊತೆ ಧನ್ವೀರ್

  ಸಹಜವಾಗಿ ದರ್ಶನ್ ಹೊಸ ಕಾರು ಖರೀದಿಸಿದಾಗ ಕೆಲವು ಸ್ನೇಹಿತರು, ಆತ್ಮೀಯರು ಅವರ ಮನೆಗೆ ಹೋಗುವುದು ಸಾಮಾನ್ಯ. ಈಗ ಡಿ ಬಾಸ್ ಖರೀದಿ ಮಾಡಿರುವ ಹೊಸ ಕಾರಿನ ಬಳಿ ಡಿ ಬಾಸ್ ಜೊತೆ ಬಜಾರ್ ಖ್ಯಾತಿಯ ಧನ್ವೀರ್ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಕೂಡ ಈಗ ವೈರಲ್ ಆಗಿದೆ.

  ಕನ್ನಡ ಇಂಡಸ್ಟ್ರಿಯಲ್ಲಿ ಮೂವರ ಬಳಿ ದುಬಾರಿ ಲಂಬೋರ್ಗಿನಿ ಕಾರ್ ಇದೆ.!

  ಪುನೀತ್ ಬಳಿಯೂ ಈ ಕಾರಿದೆ

  ಪುನೀತ್ ಬಳಿಯೂ ಈ ಕಾರಿದೆ

  ಅಂದ್ಹಾಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಮಾರ್ಚ್ ತಿಂಗಳಲ್ಲಿ ಲಂಬೋರ್ಗಿನಿ ಉರುಸ್ ಕಾರು ಖರೀದಿ ಮಾಡಿದ್ದರು. ನೀಲಿ ಬಣ್ಣದ ಕಾರನ್ನ ಪುನೀತ್ ದಂಪತಿ ತೆಗೆದುಕೊಂಡಿದ್ದರು.

  'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.!

  ಇಂಡಸ್ಟ್ರಿಯಲ್ಲಿ ಮೂವರ ಬಳಿ ಲಂಬೋರ್ಗಿನಿ

  ಇಂಡಸ್ಟ್ರಿಯಲ್ಲಿ ಮೂವರ ಬಳಿ ಲಂಬೋರ್ಗಿನಿ

  ಹಾಗ್ನೋಡಿದ್ರೆ ಲಂಬೋರ್ಗಿನಿ ಕಾರು ಇಂಡಸ್ಟ್ರಿಯಲ್ಲಿ ಮೂವರು ಬಳಿ ಇದೆ. ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್, ಚಾಲೆಜಿಂಗ್ ಸ್ಟಾರ್ ದರ್ಶನ್ ಬಳಿ ಎರಡು ಹಾಗೂ ಪುನೀತ್ ಬಳಿ ಒಂದು ಲಂಬೋರ್ಗಿನಿ ಕಾರು ಹೊಂದಿದ್ದಾರೆ.

  ದರ್ಶನ್ ಬಳಿ ಇರುವ ಕಾರುಗಳು

  ದರ್ಶನ್ ಬಳಿ ಇರುವ ಕಾರುಗಳು

  ದರ್ಶನ್ ಬಳಿ ಜಾಗ್ವಾರ್, Porsche, ಆಡಿ ಕ್ಯೂ 7, ಐ 20, ರೇಂಜ್ ರೋವರ್, ಫಾರ್ಚೂನರ್, ಬೆಂಜ್, ಮಿನಿ ಕೂಪರ್, ಹಮ್ಮರ್, ಲಂಬೋರ್ಗಿನಿ ಅಂತಹ ಕಾರುಗಳನ್ನ ದರ್ಶನ್ ಹೊಂದಿದ್ದರು.

  English summary
  Challenging star darshan bought new lamborghini urus car. already darshan had lamborghini aventador car. now, its second car from same company.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X