ದರ್ಶನ್ 'ಬುಲ್ ಬುಲ್' ಚಿತ್ರದ ಶೂಟಿಂಗ್ ಡಿಟೇಲ್ಸ್

By Rajendra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಕಾಣಿಕೆ 'ಬುಲ್ ಬುಲ್' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡು ಹಾಗೂ ಎರಡು ಸಾಹಸ ಸನ್ನಿವೇಶಗಳ ಚಿತ್ರೀಕರಣ ಬಾಕಿಯಿದೆ. ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಪಕರಾದ ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್ ಈ ಹಿಂದೆ ಜೊತೆಜೊತೆಯಲಿ' ಹಾಗೂ ನವಗ್ರಹ' ಚಿತ್ರಗಳನ್ನು ನಿರ್ಮಿಸಿದ್ದರು. ಈ ಚಿತ್ರಗಳನ್ನು ದಿನಕರ್ ತೂಗುದೀಪ ನಿರ್ದೇಶಿಸಿದ್ದರು. ಸಂಸ್ಥೆಯ ಮೂರನೇ ಕಾಣಿಕೆಯಾದ 'ಬುಲ್‍ಬುಲ್' ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿದ್ದಾರೆ.

ವಿ.ಹರಿಕೃಷ್ಣ 'ಬುಲ್ ಬುಲ್' ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕವಿರಾಜ್ ಗೀತರಚನೆ ಮಾಡುವುದರೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ, ಸೌಂದರರಾಜ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ, ಸುಂದರರಾಜ್ ನಿರ್ಮಾಣ ನಿರ್ವಹಣೆಯಿದೆ.

ಈ ಚಿತ್ರದ ತಾರಾಬಳಗದಲ್ಲಿ ಅಂಬರೀಶ್, ದರ್ಶನ್, ರಚಿತರಾಂ, ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್‍ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್ ಕೃಷ್ಣ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Challenging Star Darshan's forthcoming film Bulbul shooting is almost in the final stage. Darshan will be seen in a powerful mass role in this film. The film is a remake of Telugu hit Darling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X