twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯಕ್ಕೆ ವಿಶ್ರಾಂತಿ, ಬೆಂಗಳೂರಿನಲ್ಲಿ 'ಡಿ ಬಾಸ್' ಅಬ್ಬರದ ಪ್ರಚಾರ

    |

    Recommended Video

    ಮಂಡ್ಯಗೆ ಟಾಟಾ ಹೇಳಿ ಬೆಂಗಳೂರಿಗೆ ಬಂದ ದರ್ಶನ್..! | FILMIBEAT KANNADA

    ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಕಳೆದ ಮೂರು ನಾಲ್ಕು ದಿನದಿಂದ ಮಂಡ್ಯಕ್ಕೆ ತೆರಳಿಲ್ಲ. ಯುಗಾದಿ ಹಬ್ಬ ಮತ್ತು ಶೂಟಿಂಗ್ ಕಾರಣದಿಂದ ಮಂಡ್ಯ ಪ್ರಚಾರಕ್ಕೆ ವಿಶ್ರಾಂತಿ ನೀಡಿದ್ದರು. ಐದು ದಿನಗಳ ರಜೆ ಬಳಿಕ ಮತ್ತೆ ಡಿ ಬಾಸ್ ಮಂಡ್ಯದಲ್ಲಿ ಅಬ್ಬರಿಸಲಿದ್ದಾರೆ.

    ಈ ಮಧ್ಯೆ ನಟ ದರ್ಶನ್ ಬೆಂಗಳೂರಿನಲ್ಲೂ ಚುನಾವಣ ಪ್ರಚಾರ ಮಾಡುವ ಮೂಲಕ ಅಚ್ಚರಿ ನೀಡಿದ್ದಾರೆ. ಸುಮಲತಾ ಪರ ಬೆಂಗಳೂರಿನಲ್ಲಿ ಪ್ರಚಾರ ಹೇಗೆ ಸಾಧ್ಯ ಎಂದು ಲೆಕ್ಕಾಚಾರ ಹಾಕಬೇಡಿ. ಯಾಕಂದ್ರೆ, ಸಿಲಿಕಾನ್ ಸಿಟಿಯಲ್ಲಿ ದರ್ಶನ್ ಪ್ರಚಾರ ಮಾಡುತ್ತಿರುವುದು ಸುಮಲತಾ ಪರವಲ್ಲ.

    ಸುಮಲತಾ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಯ್ತಾ.? ಅಂಬಿ ಪತ್ನಿ ಹೇಳಿದ್ದೇನು? ಸುಮಲತಾ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಯ್ತಾ.? ಅಂಬಿ ಪತ್ನಿ ಹೇಳಿದ್ದೇನು?

    ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವುದಕ್ಕೆ ದರ್ಶನ್ ವಿರುದ್ಧ ಕೆಲವು ಟೀಕೆಗಳು ಕೇಳಿ ಬಂದಿವೆ. ಆದ್ರೀಗ, ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಾರೆ. ಇದು ಸಹಜವಾಗಿ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ, ದರ್ಶನ್ ಬೆಂಗಳೂರಿನಲ್ಲಿ ಪ್ರಚಾರ ಮಾಡಿದ್ದು ಯಾರ ಪರ? ಮುಂದೆ ಓದಿ....

    ಪಿಸಿ ಮೋಹನ್ ಬೆಂಬಲಕ್ಕೆ ಡಿ ಬಾಸ್

    ಪಿಸಿ ಮೋಹನ್ ಬೆಂಬಲಕ್ಕೆ ಡಿ ಬಾಸ್

    ಮಂಡ್ಯದಲ್ಲಿ ಸುಮಲತಾ ಪರವಾಗಿ ಅಬ್ಬರದ ಪ್ರಚಾರ ಮಾಡುತ್ತಿರುವ ನಟ ದರ್ಶನ್, ಬೆಂಗಳೂರಿನ ಲೋಕಸಭೆ ಅಖಾಡಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರವಾಗಿ ದರ್ಶನ್ ಪ್ರಚಾರ ಮಾಡಿದ್ದಾರೆ.

    ಮುಂದಿನ 5 ದಿನ ದರ್ಶನ್ ಪ್ರಚಾರ ಮಾಡಲ್ಲ, ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು?ಮುಂದಿನ 5 ದಿನ ದರ್ಶನ್ ಪ್ರಚಾರ ಮಾಡಲ್ಲ, ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು?

    ಪ್ರಕಾಶ್ ರೈ ಕ್ಷೇತ್ರ ಇದು

    ಪ್ರಕಾಶ್ ರೈ ಕ್ಷೇತ್ರ ಇದು

    ದರ್ಶನ್ ಪ್ರಚಾರ ಮಾಡುತ್ತಿರುವ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಪಿಸಿ ಮೋಹನ್, ಕಾಂಗ್ರೆಸ್ ರಿಜ್ವಾನ್ ಅರ್ಷಾದ್ ಸ್ಪರ್ಧಿಸಿದ್ರೆ, ಪಕ್ಷೇತರ ಅಭ್ಯರ್ಥಿಯಾಗಿ ಬಹುಭಾಷಾ ನಟ ಪ್ರಕಾಶ್ ರೈ ಕಣದಲ್ಲಿದ್ದಾರೆ. ಸಹಜವಾಗಿ ಇದು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ, ಪ್ರಕಾಶ್ ರೈ ಜೊತೆ ದರ್ಶನ್ ಅವರು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ, ಹಾಗಿದ್ದರೂ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಡಿ ಬಾಸ್ ನಿಂತಿದ್ದೇಕೆ ಎಂಬ ಪ್ರಶ್ನೆ ಕಾಡುತ್ತಿದೆ.

    ಪ್ರಚಾರದಲ್ಲಿ ದರ್ಶನ್ ಗೆ ಹಾಡೇಳುವಂತೆ ವೃದ್ದೆ ಮನವಿ: ಡಿ ಬಾಸ್ ಏನಂದ್ರು?ಪ್ರಚಾರದಲ್ಲಿ ದರ್ಶನ್ ಗೆ ಹಾಡೇಳುವಂತೆ ವೃದ್ದೆ ಮನವಿ: ಡಿ ಬಾಸ್ ಏನಂದ್ರು?

    ಪಕ್ಷಕ್ಕೆ ದರ್ಶನ್ ಬೆಂಬಲವಿಲ್ಲ

    ಪಕ್ಷಕ್ಕೆ ದರ್ಶನ್ ಬೆಂಬಲವಿಲ್ಲ

    ಈ ಹಿಂದೆ ಸ್ವತಃ ದರ್ಶನ್ ಅವರೇ ಹಲವು ಸಲ ಹೇಳಿರುವಂತೆ 'ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡಲ್ಲ. ನಮಗೆ ಬೇಕಾದ ಸ್ನೇಹಿತರ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ' ಎಂದು ಹೇಳಿದ್ದರು. ಅದರಂತೆ ಸಿದ್ದರಾಮಯ್ಯ, ಸಂದೇಶ, ಅಂಬರೀಶ್ ಹೀಗೆ ಕೆಲವರು ಪರ ದರ್ಶನ್ ಪ್ರಚಾರ ಮಾಡ್ತಿದ್ರು. ಮೋಹನ್ ಅವರ ಜೊತೆ ದರ್ಶನ್ ಸ್ನೇಹ ಚೆನ್ನಾಗಿದ್ದು, ಇದೇ ಕಾರಣಕ್ಕಾಗಿ ದರ್ಶನ್ ಬೆಂಗಳೂರಿನಲ್ಲೂ ಪ್ರಚಾರ ಮಾಡಿದ್ದಾರೆ.

    ಮಂಡ್ಯಕ್ಕೆ ಯಾವಾಗ ವಾಪಸ್?

    ಮಂಡ್ಯಕ್ಕೆ ಯಾವಾಗ ವಾಪಸ್?

    ಯುಗಾದಿ ಹಬ್ಬದ ಪ್ರಯುಕ್ತ ಎರಡು ದಿನ ಹಾಗೂ ಸೋಮವಾರ, ಮಂಗಳವಾರ ಮಂಡ್ಯ ಪ್ರಚಾರದಿಂದ ವಿಶ್ರಾಂತಿ ಪಡೆದುಕೊಂಡಿದ್ದ ದರ್ಶನ್, ಬುಧವಾರ (ಏಪ್ರಿಲ್ 10) ಮಂಡ್ಯಕ್ಕೆ ವಾಪಸ್ ಆಗಲಿದ್ದಾರೆ. ಅಲ್ಲಿಂದ ಸತತವಾಗಿ 16ನೇ ತಾರೀಖಿನವರೆಗೂ ಸುಮಲತಾ ಪರ ಪ್ರಚಾರ ಮಾಡಲಿದ್ದಾರೆ.

    English summary
    Kannada actor darshan campaigning in Bangalore central lok sabha for bjp candidate pc mohan. april 10th d boss will gaback to mandya for sumalatha campaign.
    Monday, April 8, 2019, 13:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X