twitter
    For Quick Alerts
    ALLOW NOTIFICATIONS  
    For Daily Alerts

    ಉರ್ದು ನಂತರ ತಮಿಳು ಭಾಷೆಯಲ್ಲಿ ಮತಯಾಚಿಸಿದ ನಟ ದರ್ಶನ್

    |

    Recommended Video

    Lok Sabha Elections 2019 : ಮಂಡ್ಯದಲ್ಲಿ ಬೇರೆ ಬೇರೆ ಭಾಷೆಯಲ್ಲಿ ದರ್ಶನ್ ಮತಪ್ರಚಾರ

    ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತಭೇಟೆ ಮುಂದುವರಿಸಿದ್ದು, ವೇಷಭೂಷಣ, ನಡೆ, ನುಡಿ ಮೂಲಕ ಸುದ್ದಿಯಾಗುತ್ತಿದ್ದಾರೆ.

    ರಸ್ತೆಯಲ್ಲಿ ಅಡ್ಡ ಬಂದ ಗೂಳಿಯನ್ನ ಪಳಗಿಸಿ ಗಮನ ಸೆಳೆದ ದರ್ಶನ್, ಸಾರ್ವಜನಿಕವಾಗಿ ಹಸುವಿನ ಹಾಲು ಕರೆದು ಜೈಕಾರ ಹಾಕಿಸಿಕೊಂಡಿದ್ದರು.

    ಇನ್ನು ಪ್ರಚಾರದ ವೇಳೆ ತಲೆಗೆ ಮುಸ್ಲಿಂ ಟೋಪಿ ಹಾಕಿ ಮತ ಕೇಳಿದ್ದ ದರ್ಶನ್, ಉರ್ದು ಭಾಷೆಯಲ್ಲಿ ಭಾಷಣ ಮಾಡಿದ್ದರು. ಇದೀಗ ತಮಿಳಿನಲ್ಲಿ ಪ್ರಚಾರ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

    ಹಸುವಿನ ಹಾಲು ಕರೆದು 'ರೈತ' ಎಂದು ಸಾಬೀತು ಮಾಡಿದ ದರ್ಶನ್ಹಸುವಿನ ಹಾಲು ಕರೆದು 'ರೈತ' ಎಂದು ಸಾಬೀತು ಮಾಡಿದ ದರ್ಶನ್

    Darshan campaigned in tamil language

    ಹೌದು, ಮಂಡ್ಯದ ನಗರದಲ್ಲಿ ಪ್ರಚಾರ ಮಾಡುತ್ತಿದ್ದ ದರ್ಶನ್, ತಮಿಳು ಜನ ಹೆಚ್ಚು ಪ್ರದೇಶದಲ್ಲಿ ತಮಿಳಿನಲ್ಲೇ ಮಾತನಾಡಿದ ಮತಯಾಚನೆ ಮಾಡಿದ್ದಾರೆ. 'ಅಂಬರೀಶ್ ಅವರಿದ್ದಾಗ ನೀವು ಹೇಗೆ ಪ್ರೀತಿಯಿಂದ ಬರಮಾಡಿಕೊಂಡಿದ್ದರೋ ಅದೇ ರೀತಿ ಸುಮಲತಾ ಅವರಿಗೂ ನಿಮ್ಮ ಮತ ನೀಡಿ' ಎಂದು ಕೇಳಿಕೊಂಡಿದ್ದಾರೆ.

    ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು?ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು?

    ದರ್ಶನ್ ತಮಿಳಿನಲ್ಲಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಟೀಕೆ ಮಾಡುತ್ತಿದ್ದಾರೆ. ಅಪಾರ ಅಭಿಮಾನಿಗಳನ್ನ ಹೊಂದಿರುವ ನಟ ದರ್ಶನ್, ವೋಟಿಗಾಗಿ ಈ ಮಟ್ಟಕ್ಕೆ ಇಳಿಯಬಾರದು, ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.

    ಆದ್ರೆ, ಸ್ಥಳಿಯ ಜನರಿಗೆ ಅವರ ಭಾಷೆಯಲ್ಲಿ ಹೇಳಿದಾಗ ಬೇಗ ಅರ್ಥವಾಗುತ್ತೆ ಎಂಬ ಕಾರಣದಿಂದ ಅವರ ಭಾಷೆಯಲ್ಲಿ ಮಾತನಾಡುವ ಪ್ರಯತ್ನ ಮಾಡುತ್ತೇನೆ ಎಂದು ದರ್ಶನ್ ನಿನ್ನೆಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

    English summary
    Mandya independent candidate Sumalatha supporter Challenging star darshan campaigned in tamil language.
    Friday, April 12, 2019, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X