For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಕಾರು ಅಪಘಾತ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

  By ಯಶಸ್ವಿನಿ ಎಂ.ಕೆ
  |
  ನಟ ದರ್ಶನ್ ಕಾರು ಅಪಘಾತದ ಕೇಸ್ ನಲ್ಲಿ ಯಾರು ತಪ್ಪಿಸ್ಥರು? | FILMIBEAT KANNADA

  ಮೈಸೂರು, ನವೆಂಬರ್ 3 : ಕಳೆದ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿ.ವಿ.ಪುರಂ ಸಂಚಾರ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

  ಈ ಅಪಘಾತ ಪ್ರಕರಣ ಸಂಬಂಧ ಮೈಸೂರಿನ 4ನೇ ಜೆ.ಎಂ.ಎಫ್‌.ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ಕುರಿತು ವಿವಿ ಪುರಂ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಎಲ್ಲಾ ವಿಧದಲ್ಲೂ ತನಿಖೆ ನಡೆಸಿದ್ದು, ಇಂಚಿಂಚೂ ಮಾಹಿತಿ ಕಲೆ ಹಾಕಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

  ದರ್ಶನ್ ಕಾರು ಅಪಘಾತ: 'ಡಿ-ಬಾಸ್'ಗೆ ಆಘಾತ ನೀಡಿದ ವೈದ್ಯರ ಸಲಹೆದರ್ಶನ್ ಕಾರು ಅಪಘಾತ: 'ಡಿ-ಬಾಸ್'ಗೆ ಆಘಾತ ನೀಡಿದ ವೈದ್ಯರ ಸಲಹೆ

  ಪೊಲೀಸರು ಅಪಘಾತದ ಮಾಹಿತಿಯನ್ನು ಚಾರ್ಜ್ ಶೀಟ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಆ ಕಾರನ್ನು ಅವರ ಗೆಳೆಯ ಆಂಟೋನಿ ರಾಯ್ ಚಾಲನೆ ಮಾಡುತ್ತಿದ್ದನ್ನು ಉಲ್ಲೇಖಿಸಲಾಗಿದೆ.

  ಮೈಸೂರಿನಲ್ಲಿ ತಡರಾತ್ರಿ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ರಿಂಗ್ ರಸ್ತೆಯ ಜಂಕ್ಷನ್ ಬಳಿ ಆಂಟೋನಿ ರಾಯ್ ಅವರ ನಿರ್ಲಕ್ಷ್ಯತನದಿಂದ ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿತ್ತು. ನಂತರ ಕಾರಿನಲ್ಲಿದ್ದ ಐವರಿಗೆ ಗಾಯವಾಗಿ ಚಿಕಿತ್ಸೆ ಪಡೆದಿದ್ದರು.

  ದರ್ಶನ್ ಅಪಘಾತದ ಕಾರಿನಲ್ಲಿ ಇದ್ದದ್ದು 4 ಜನ ಅಲ್ಲ, 6 ಜನ.! ಯಾರವರು.? ದರ್ಶನ್ ಅಪಘಾತದ ಕಾರಿನಲ್ಲಿ ಇದ್ದದ್ದು 4 ಜನ ಅಲ್ಲ, 6 ಜನ.! ಯಾರವರು.?

  ಈ ಸಮಯದಲ್ಲಿ ನಟ ದರ್ಶನ್ ಅವರಿಗೆ ಸಹಾಯ ಮಾಡಲು ಬಂದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಅವರಿಗೂ ಗಾಯಗಳಾಗಿತ್ತು. ಅವರೂ ಸಹ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

  ಕಾರನ್ನು ಸರ್ಕಾರಿ ಆರ್.ಟಿ.ಓ ಅಧಿಕಾರಿಗಳು ಪರಿಶೀಲಿಸಿದ್ದು, ಯಾವುದೇ ತಾಂತ್ರಿಕ ಕಾರಣದಿಂದ ಅಪಾಯ ಆಗಿಲ್ಲ ಎಂದು ವರದಿ ನೀಡಿದ್ದಾರೆ. ಘಟನೆ ಸಂಬಂಧ ನಟರಾದ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್, ಚಾಲಕ ಆಂಟೋನಿ ಕಾರಿನಲ್ಲಿದ್ದ ಪ್ರಕಾಶ್ ಎಂಬುವರ ಹೇಳಿಕೆ ಪಡೆಯಲಾಗಿದೆ. ಎಲ್ಲರ ಹೇಳಿಕೆಯಲ್ಲೂ ಆಂಟೋನಿ ಅವರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಸಹಜ ಅಭಿಪ್ರಾಯ ಬಂದಿದೆ.

  ಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕ ಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕ

  ತಪ್ಪಿತಸ್ಥ ಚಾಲಕ ಆಂಟೋನಿ ರಾಯ್ ವಿರುದ್ಧ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ಸಂಚಾರಿ ಠಾಣಾ ಪೊಲೀಸರು ಮನವಿ ಮಾಡಿದ್ದಾರೆ.

  English summary
  Kannada Actor Darshan car Accident case: Charge sheet submitted to Mysuru court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X