twitter
    For Quick Alerts
    ALLOW NOTIFICATIONS  
    For Daily Alerts

    ಅಪಘಾತ ಪ್ರಕರಣಕ್ಕೆ ಕಷ್ಟತಂದಿಟ್ಟ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಹೇಳಿಕೆ

    |

    Recommended Video

    ಏನಿದು ಅಪಘಾತದ ಬಗ್ಗೆ ಅನುಮಾನಗಳು..! | Filmibeat Kannada

    ದರ್ಶನ್ ಕಾರು ಅಪಘಾತ ಪ್ರಕರಣ ಅದ್ಯಾಕೋ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕ್ಷಣ ಕ್ಷಣನೂ ಅನುಮಾನ ಮೂಡಿಸುತ್ತಲೇ ಸಾಗಿದೆ. ಸಾಮಾನ್ಯವಾದ ಅಪಘಾತ ಇದು, ಯಾಕಿಷ್ಟು ದೊಡ್ಡದಾಗುತ್ತಿದೆ ಎಲ್ಲರೂ ಯೋಚನೆ ಮಾಡುತ್ತಿರುವಾಗಲೇ, ಇಲ್ಲ ಬೇರೇ ಏನೋ ಆಗಿದೆ ಎನ್ನು ರೀತಿ ಘಟನೆಗಳು ನಡೆಯುತ್ತಿದೆ.

    ಅಪಘಾತವಾಗಿದ್ದ ಬಳಿಕ ಕಾರು ಮುಚ್ಚಿಟ್ಟಿದ್ದು, ದರ್ಶನ್ ಸ್ನೇಹಿತ ರಾಯ್ ಆಂಟೋನಿ ವಿರುದ್ಧ ದೂರು ದಾಖಲಾಗಿದ್ದು, ಘಟನೆ ನಡೆದ ತುಂಬಾ ಸಮಯದ ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ಹೀಗೆ ಪ್ರಶ್ನೆಗಳನ್ನ ಹುಟ್ಟುಹಾಕುತ್ತಲೇ ಪ್ರಕರಣ ಸಾಗುತ್ತಿದೆ.

    ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.? ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.?

    ಈ ಮಧ್ಯೆ ರಾಯ್ ಆಂಟೋನಿ ವಿರುದ್ಧ ನಾನು ದೂರು ನೀಡಿಲ್ಲ ಎಂದು ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಅವರು ನೀಡಿರುವ ಹೇಳಿಕೆ ಈಗ ಇಡೀ ಅಪಘಾತ ಪ್ರಕರಣಕ್ಕೆ ಕಷ್ಟತಂದಿಟ್ಟಿದೆ. ಹಾಗಿದ್ರೆ, ರಾಯ್ ಆಂಟೋನಿ ವಿರುದ್ಧ ದೂರು ನೀಡಿದ್ದು ಯಾರು.? ಲಕ್ಷ್ಮಣ್ ಏನು ಹೇಳಿದ್ರು.? ಮುಂದೆ ಓದಿ....

    ನಾನು ದೂರು ನೀಡಿಲ್ಲ

    ನಾನು ದೂರು ನೀಡಿಲ್ಲ

    ವಿವಿ ಪುರಂ ಪೊಲೀಸರು ದಾಖಲಿಸಿರುವ ಎಫ್.ಐ.ಆರ್ ಪ್ರಕಾರ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಎಂಬುವರು, ಯಾರ್ ಆಂಟೋನಿ ವಿರುದ್ಧ ದೂರು ನೀಡಿದ್ದಾರೆ. ಈ ಅಪಘಾತಕ್ಕೆ ಆಂಟೋನಿ ಅವರೇ ಕಾರಣ, ಅವರ ವಿರುದ್ಧ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಎಫ್.ಐ.ಆರ್ ನಲ್ಲಿದೆ. ಆದ್ರೆ, ನಾನು ದೂರು ನೀಡೇ ಇಲ್ಲ ಎನ್ನುತ್ತಿದ್ದಾರೆ ಲಕ್ಷ್ಮಣ್.

    ದರ್ಶನ್ ಬಹುದಿನದ ಆಸೆಯನ್ನ ನುಚ್ಚುನೂರು ಮಾಡಿತು ಈ ಅಪಘಾತದರ್ಶನ್ ಬಹುದಿನದ ಆಸೆಯನ್ನ ನುಚ್ಚುನೂರು ಮಾಡಿತು ಈ ಅಪಘಾತ

    ಪೊಲೀಸರೇ ದೂರು ದಾಖಲಿಸಿಕೊಂಡಿದ್ದಾರೆ

    ಪೊಲೀಸರೇ ದೂರು ದಾಖಲಿಸಿಕೊಂಡಿದ್ದಾರೆ

    'ನಾನು ಆಸ್ಪತ್ರೆ ಬಳಿ ಹೋದಾಗ, ಪೊಲೀಸರು ನನ್ನನ್ನು ಮಾತನಾಡಿಸಿದರು. ರಾಯ್ ಆಂಟೋನಿ ಬಳಿ ಹೇಳಿಕೆ ಪಡೆಯೋಕೆ ಬಂದರು. ಆಗ ನಾನು ಅವರ ಮಾತನಾಡೋಕೆ ಆಗಲ್ಲ ಅಂದೆ. ನೀವು ಹೇಳಿ, ನಾವು ಬರೆದುಕೊಳ್ತೀನಿ ಅಂದ್ರು. ಸಂದೇಶ್ ಅವರು ನನ್ನ ಜೊತೆಯಲ್ಲಿ ಇದ್ರು. ನಾನು ಯಾಕೆ ದೂರು ಕೊಡಲಿ'' ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

    ರಾಯ್ ಆಂಟೋನಿ ಡ್ರೈವರ್ ಅಲ್ಲ: ಏನೋ ಆಗಬೇಕಿತ್ತು, ಏನೋ ಆಯ್ತು ಎಂದ ಸಂದೇಶ್ರಾಯ್ ಆಂಟೋನಿ ಡ್ರೈವರ್ ಅಲ್ಲ: ಏನೋ ಆಗಬೇಕಿತ್ತು, ಏನೋ ಆಯ್ತು ಎಂದ ಸಂದೇಶ್

    ಎಫ್.ಐ.ಆರ್ ನಲ್ಲಿ ಯಾಕೆ ಲಕ್ಷ್ಮಣ್ ಹೆಸರಿದೆ

    ಎಫ್.ಐ.ಆರ್ ನಲ್ಲಿ ಯಾಕೆ ಲಕ್ಷ್ಮಣ್ ಹೆಸರಿದೆ

    ಆದ್ರೆ, ಪೊಲೀಸಿನವರು ದಾಖಲಿಸಿಕೊಂಡಿರುವ ದೂರಿನಲ್ಲಿ ದರ್ಶನ್ ಕಾರು ಡ್ರೈವರ್ ಲಕ್ಷ್ಮಣ್ ಅವರೇ ಪಿರ್ಯಾದುದಾರ ಎಂದು ಯಾಕೆ ದಾಖಲು ಮಾಡಿಕೊಂಡಿದ್ದಾರೆ. ಅವರು ದೂರು ನೀಡಿಲ್ಲ, ಆದ್ರೂ ಯಾಕೆ ಅವರ ಹೇಳಿಕೆಯನ್ನಿಟ್ಟು ಎಫ್.ಐ.ಆರ್ ಹಾಕಿದ್ದಾರೆ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

    ಬಚ್ಚಿಟ್ಟಿದ್ದ ದಾಸನ ಅಪಘಾತದ ಕಾರು, ಶ್ರೀರಂಗಪಟ್ಟಣದಲ್ಲಿ ಪತ್ತೆಬಚ್ಚಿಟ್ಟಿದ್ದ ದಾಸನ ಅಪಘಾತದ ಕಾರು, ಶ್ರೀರಂಗಪಟ್ಟಣದಲ್ಲಿ ಪತ್ತೆ

    ಎಫ್.ಐ.ಆರ್ ನಲ್ಲಿ ಲಕ್ಷ್ಮಣ್ ಸಹಿ ಇಲ್ಲ

    ಎಫ್.ಐ.ಆರ್ ನಲ್ಲಿ ಲಕ್ಷ್ಮಣ್ ಸಹಿ ಇಲ್ಲ

    ಇನ್ನು ಲಕ್ಷ್ಮಣ್ ಅವರು ನೀಡಿದ್ದಾರೆ ಎನ್ನಲಾದ ಎಫ್.ಐ.ಆರ್ ಕಾಪಿಯಲ್ಲಿ ಲಕ್ಷ್ಮಣ್ ಅವರ ಸಹಿ ಮತ್ತು ಹೆಬ್ಬೆರಳು ಗುರುತು ಕೂಡ ಇರುವುದಿಲ್ಲ. ಮತ್ತೊಂದೆಡೆ ಲಕ್ಷ್ಮಣ್ ಅವರು ದೂರು ನಾನು ನೀಡಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ, ಈ ಪ್ರಕರಣ ಮತ್ತಷ್ಟು ತಿರುವು ಕೂಡ ಪಡೆದುಕೊಳ್ಳಬಹುದು.

    ಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕ

    ಪೊಲೀಸರ ಮೇಲೆ ಅನುಮಾನ

    ಪೊಲೀಸರ ಮೇಲೆ ಅನುಮಾನ

    ದರ್ಶನ್ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಹಂತದಲ್ಲೂ ಪೊಲೀಸರ ನಡೆ ಅನುಮಾನ ಮೂಡಿಸುತ್ತಿದೆ. ಯಾರನ್ನೋ ಬಚಾವ್ ಮಾಡಲು, ಬೇರೇ ಯಾರನ್ನೋ ಇಲ್ಲಿ ಬಲಿಪಶು ಮಾಡ್ತಿದ್ದಾರೆ ಎಂಬ ಬಲವಾದ ಅನುಮಾನ ಉಂಟಾಗಿದೆ.

    English summary
    darshan car driver laxman has not filed a complaint against darshan friend ray antony.
    Tuesday, September 25, 2018, 18:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X