"ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ"; ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ ಆರೋಪ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡ್ತಿದೆ. ಆತ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ. ನಟ ದರ್ಶನ್ ಸೂಚನೆಯಂತೆ ಆಪ್ತರು ಆತನನ್ನು ಕರೆತಂದು ಥಳಿಸಿದ್ದರು. ಈ ವೇಳೆ ಆತ ಮೃತಪಟ್ಟಿದ್ದಾರೆ ಪೊಲೀಸರು ಹೇಳಿದ್ದಾರೆ. ಪ್ರಕರಣ ಸಂಬಂಧ 16 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು. ಅದಕ್ಕೆ ದರ್ಶನ್ ಶಿಕ್ಷೆ ಕೊಡಲು ಮುಂದಾಗಿದ್ದು ಕೂಡ ಸರಿಯಲ್ಲ. ಸಾಕಷ್ಟು ಜನ ಇದೇ ಮಾತು ಹೇಳುತ್ತಿದ್ದಾರೆ. ಇದೀಗ ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ ಎನ್ನುವ ಆರೋಪ ಕೇಳಿಬರುತ್ತಿದೆ. ಇದೀಗ ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದಾರೆ.

ಬಾಡಿ ಬಿಲ್ಡರ್ ಆಗಿರುವ ಚಿತ್ರಾಲ್ ರಂಗಸ್ವಾಮಿ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ -10ರಲ್ಲಿ ದೊಡ್ಮನೆಗೆ ಹೋಗಲು ಚಿತ್ರಾಲ್ ಪ್ರಯತ್ನಿಸಿದ್ದರು. 17 ಜನ ಸ್ಪರ್ಧಿಗಳು ಮನೆ ಪ್ರವೇಶಿದ್ದರು. ಆದರೆ ವೇದಿಕೆಯಲ್ಲಿ ಲೈವ್ ಆಡಿಯೆನ್ಸ್ ಬೆಂಬಲ ಸಿಗದೇ ಚಿತ್ರಾಲ್ ಹೊರಬಂದಿದ್ದರು. ಬಳಿಕ ಶೋ ಆಯೋಜಕರ ಬಗ್ಗೆ ಆಕೆ ಬೇಸರ ಹೊರ ಹಾಕಿದ್ದರು. ತಮ್ಮ ನೇರಾನೇರ ಮಾತುಗಳಿಂದ ಚಿತ್ರಾಲ್ ಗಮನ ಸೆಳೆದಿದ್ದರು.
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮಾಡಿ ರೇಣುಕಾಸ್ವಾಮಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಎಲ್ಲರಿಗೂ ನಮಸ್ಕಾರ. ಸದ್ಯ ಯಾವ ವಿಚಾರ ಚರ್ಚೆಯಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಎಲ್ಲರಿಗೂ ಬೇಸರವಾಗಿದೆ. ನಾನು ಯಾರಿಗೂ ಸಪೋರ್ಟ್ ಮಾಡಲು ಬಂದಿಲ್ಲ. ಆ ದೇವರು ರೇಣುಕಾಸ್ವಾಮಿ ಕುಟುಂಬಕ್ಕೆ ಧೈರ್ಯ ಕೊಡಲಿ. ಆದರೆ ರೇಣುಕಾಸ್ವಾಮಿಯವರು ಇದಕ್ಕೂ ಮುನ್ನ ಇದೇ ರೀತಿ ಕೆಲವರಿಗೆ ಕೆಟ್ಟ ಮೆಸೇಜ್ ಕಳುಹಿಸಿದ್ದರು. ಮಾರ್ಚ್‌ನಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು"

"ಗೌತಮ್_ಕೆಎಸ್_1990 ಎನ್ನುವ ಹೆಸರಿನಲ್ಲಿ ರೇಣುಕಾಸ್ವಾಮಿ ಅವರದ್ದು ಒಂದು ಫೇಕ್ ಅಕೌಂಟ್ ಇತ್ತು ಎಂದು ನಾನು ಒಂದು ನ್ಯೂಸ್‌ನಲ್ಲಿ ನೋಡ್ದೆ. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ"
"ನನಗೆ ಆ ರೀತಿ ಮರ್ಮಾಂಗದ ಚಿತ್ರ ಆಗಲಿ, ಬೆತ್ತಲೆ ಫೋಟೊ ಆಗಲಿ ಅಥವಾ ಹಸ್ತ ಮೈಥುನ ವೀಡಿಯೋ ಆಗಲಿ ಬಂದರೆ ನಾನು ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನಗೆ ಈ ಅಕೌಂಟ್ ನೋಡಿದಾಗ ಎಲ್ಲೋ ಈ ಅಕೌಂಟ್ ನೋಡಿದ್ದೀನಲ್ಲ ಎನಿಸಿತು. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ" ಎಂದು ಚಿತ್ರಾಲ್ ತಮ್ಮ ಇನ್‌ಸ್ಟಾ ಅಕೌಂಟ್ ಬ್ಲಾಕ್ ಲಿಸ್ಟ್ ಸ್ಟ್ರೀನ್ ಶಾಕ್ ಹಂಚಿಕೊಂಡಿದ್ದಾರೆ.
"ಇಷ್ಟು ದಿನ ನಾನು ಸುಮ್ಮನಿದ್ದೆ. ಆದರೆ ಇದನ್ನು ನೋಡಿದ ಮೇಲೆ ಹೇಳಬೇಕು ಎಂದು ಮುಂದೆ ಬಂದೆ. ಭಯ ಅನ್ನಿಸಿತು. ಬೇಸರ ಆಗುತ್ತದೆ. ಅಂತಹ ಸುಂದರ ಹೆಂಡತಿ ಇರುವಾಗ ಈ ರೀತಿ ಸರೀನಾ? ಛೀ ಎನಿಸುತ್ತದೆ. ನನಗೆ ಪ್ರತಿದಿನ ಇಂತಹ ಸಾಕಷ್ಟು ಕೆಟ್ಟ ಮೆಸೇಜ್, ಟ್ರೋಲ್ ಎದುರಾಗುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ನೋಡಿದಾಗ ಏನು ಅನಿಸಲ್ವಾ ಎಂದು ಕೆಲವರು ಕೇಳುತ್ತಾರೆ. ಇಂಥದ್ದೆನ್ನಲ್ಲಾ ನೋಡಿದ್ರೆ ಆನ್‌ಲೈನ್‌ನಲ್ಲಿ ಅತ್ಯಾಚಾರದ ಅನುಭವ ಆಗುತ್ತದೆ" ಎಂದು ಚಿತ್ರಾಲ್ ವಿವರಿಸಿದ್ದಾರೆ.


Click it and Unblock the Notifications











