For Quick Alerts
  ALLOW NOTIFICATIONS  
  For Daily Alerts

  ಉಮಾಪತಿ-ಅರುಣ ಕುಮಾರಿ ವಾಟ್ಸ್ಆಪ್ ಚಾಟ್‌ನಲ್ಲಿದೆ ಹಲವು ಮುಖ್ಯ ಮಾಹಿತಿ

  |

  ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ ಬಹಳಷ್ಟು ಕುತೂಹಲಕಾರಿ ತಿರುವುಗಳನ್ನು ಪಡೆದುಕೊಂಡಿದೆ. ಪ್ರಕರಣ ಕುರಿತು ಇಂದು ನಟ ದರ್ಶನ್ ಸುದ್ದಿಗೋಷ್ಠಿ ನಡೆಸಿದ್ದು, ದರ್ಶನ್ ಗೆಳೆಯರದ್ದೇ ಕೈವಾಡ ಇರುವುದಾಗಿ ಸ್ಪಷ್ಟವಾಗಿದೆ. ಅದರಲ್ಲಿಯೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮುಖ್ಯ ಆರೋಪಿ ಆಗಿದ್ದಾರೆಂದು ಸ್ವತಃ ದರ್ಶನ್ ಹೇಳಿದ್ದಾರೆ.

  ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ವಂಚಿಸಲು ಯತ್ನಿಸಿದ ಅರುಣ ಕುಮಾರಿ ಉಮಾಪತಿಗೆ ಹಳೆಯ ಪರಿಚಯ ಆಗಿದ್ದು, ಉಮಾಪತಿ ಹಾಗೂ ಅರುಣ್ ಕುಮಾರಿ ನಡುವೆ ನಡೆದಿರುವ ವಾಟ್ಸ್‌ಆಪ್ ಚಾಟ್ ಇದೀಗ ಬಹಿರಂಗಗೊಂಡಿದೆ. ಚಾಟ್ ಅನ್ನು ಸೂಕ್ಷ್ಮವಾಗಿ ಗಮಿಸಿದರೆ ಅರುಣ ಕುಮಾರಿ, ಉಮಾಪತಿಗೆ ಸಹ ಸುಳ್ಳು ಹೇಳಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಹಾಗೂ ಹರ್ಷ ಹಾಗೂ ವಿನಯ್ ಎಂಬುವರು ದರ್ಶನ್ ಹೆಸರಲ್ಲಿ ಸುಳ್ಳು ದಾಖಲಾತಿಯನ್ನು ಸಲ್ಲಿಸಿದ್ದಾರೆ ಎಂದು ಅರುಣ್ ಕುಮಾರಿಯೇ ಉಮಾಪತಿಗೆ ಹೇಳಿದ್ದಾರೆ ಎಂಬುದು ತಿಳಿದು ಬರುತ್ತಿದೆ.

  ಅರುಣ್ ಕುಮಾರಿ ಮೊಬೈಲ್‌ನಲ್ಲಿ ಉಮಾಪತಿ ಜೊತೆಗೆ ಮಾಡಿರುವ ವಾಟ್ಸ್‌ಆಪ್ ಚಾಟ್‌ನ ಚಿತ್ರಗಳು ಇದೀಗ ವೈರಲ್ ಆಗಿವೆ. ಏಪ್ರಿಲ್ ತಿಂಗಳಿನಿಂದಲೂ ಉಮಾಪತಿ ಹಾಗೂ ಅರುಣ ಕುಮಾರಿ ಸಂಪರ್ಕದಲ್ಲಿರುವುದು ಪ್ರಸ್ತುತ ವೈರಲ್ ಆಗಿರುವ ಚಿತ್ರಗಳಿಂದ ಗೊತ್ತಾಗುತ್ತಿದೆ. ಆದರೆ ಅರುಣ ಕುಮಾರಿ ಉಮಾಪತಿ ಅವರಿಗೂ ದಾರಿ ತಪ್ಪಿಸಿದ್ದಾಳೆಯೇ ಎಂಬ ಅನುಮಾನ ವಾಟ್ಸ್‌ಆಪ್ ಚಾಟ್‌ನಿಂದ ವ್ಯಕ್ತವಾಗುತ್ತಿದೆ. ಉಮಾಪತಿಯವರಿಗೂ ಅರುಣ್ ಕುಮಾರಿ ತಾನೊಬ್ಬ ಬ್ಯಾಂಕ್ ಮ್ಯಾನೇಜರ್ ಎಂದೇ ಹೇಳಿರುವುದು ವಾಟ್ಸ್‌ಆಪ್‌ ಚಾಟ್‌ನಿಂದ ಗೊತ್ತಾಗುತ್ತಿದೆ.

  ಜೂನ್ 12 ರಂದು ದಾಖಲೆ ಪ್ರತಿ ಕಳಿಸಿದ್ದ ಅರುಣ ಕುಮಾರಿ

  ಜೂನ್ 12 ರಂದು ದಾಖಲೆ ಪ್ರತಿ ಕಳಿಸಿದ್ದ ಅರುಣ ಕುಮಾರಿ

  ಜೂನ್ 12 ರಂದು ಉಮಾಪತಿಯವರಿಗೆ ದಾಖಲೆಯೊಂದನ್ನು ವಾಟ್ಸ್‌ಆಫ್ ಮೂಲಕ ಕಳಿಸಿರುವ ಅರುಣ ಕುಮಾರಿ, ''ದರ್ಶನ್ ಅವರನ್ನು ಗ್ಯಾರಂಟಿಯರ್ ಆಗಿ ನಮೂದಿಸಿ ಸಾಲಕ್ಕೆ ದಾಖಲೆ ಸಲ್ಲಿಸಿದ್ದಾರೆ. ದರ್ಶನ್ ಅವರ ಪೊನ್ನಂಪೇಟೆಯ ವಿಳಾಸ ನೀಡಿದ್ದಾರೆ'' ಎಂದು ಅರುಣ್ ಕುಮಾರಿ ಹೇಳಿದ್ದಾರೆ.

  ಆ ದಾಖಲೆಗಳನ್ನು ದರ್ಶನ್‌ಗೆ ಒಮ್ಮೆ ತೋರಿಸಿ ಎಂದಿದ್ದ ಉಮಾಪತಿ

  ಆ ದಾಖಲೆಗಳನ್ನು ದರ್ಶನ್‌ಗೆ ಒಮ್ಮೆ ತೋರಿಸಿ ಎಂದಿದ್ದ ಉಮಾಪತಿ

  ಇದಕ್ಕೆ ಪ್ರತಿಕ್ರಿಯಿಸಿರುವ ಉಮಾಪತಿ, ''ದರ್ಶನ್ ಅಲ್ಲಿ ವಾಸವಿಲ್ಲ'' ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಅರುಣ್ ಕುಮಾರಿ, ''ಅಯ್ಯೋ ಬಹಳ ಅನ್ಯಾಯ ಸರ್ ಇದು, ತಪ್ಪು ಮಾಹಿತಿ ನೀಡಿದ್ದಾರೆ. ದರ್ಶನ್ ಸಹಿ ಸಹ ಫೋರ್ಜರಿ ಮಾಡಿದ್ದಾರೆ'' ಎಂದಿದ್ದಾರೆ ಅರುಣಾ. ನಂತರ ಉಮಾಪತಿ, ''ಆ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬರಲು ಆಗುತ್ತದೆಯಾ? ಒಮ್ಮೆ ಅದನ್ನು ದರ್ಶನ್‌ ಸರ್‌ಗೆ ತೋರಿಸಿ ವಾಪಸ್ ತೆಗೆದುಕೊಂಡು ಹೋಗುವಿರಂತೆ'' ಎಂದಿದ್ದಾರೆ. ಅದಕ್ಕೆ ಅರುಣಾ, ಓಕೆ ಎಂದಿದ್ದಾರೆ.

  ಜೂನ್ 16ರಂದು ನಡೆದಿರುವ ಸಂಭಾಷಣೆ

  ಜೂನ್ 16ರಂದು ನಡೆದಿರುವ ಸಂಭಾಷಣೆ

  ನಂತರ ಜೂನ್ 16 ರಂದು ಉಮಾಪತಿ ಹಾಗೂ ಅರುಣ್ ಕುಮಾರಿ ಸಂದೇಶ ವಿನಿಮಯ ಮಾಡಿಕೊಂಡಿದ್ದು, ''ನೀನು ಸಹ ಹುಷಾರಾಗಿ, ಬುದ್ಧಿವಂತಿಕೆಯಿಂದ ಆಟವಾಡು'' (ಯೂ ಆಲ್ಸೊ ಪ್ಲೇ ಆಂಡ್ ಥಿಂಕ್ ಸ್ಮಾರ್ಟ್), ''ಹೆದರಬೇಡ, ನಿನ್ನ ಜೊತೆ ನಾವಿದ್ದೇವೆ'' (ಡೋಂಟ್ ವರಿ, ವಿ ಆರ್ ವಿತ್ ಯೂ) ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷವೆಂದರೆ ಹರ್ಷ ನೀಡಿರುವ ದೂರಿನಲ್ಲಿ ಜೂನ್ 16 ರಂದೇ ಮೊದಲ ಬಾರಿ ಉಮಾಪತಿ ಕರೆ ಮಾಡಿ ಸಾಲ ಪಡೆದುಕೊಂಡಿರುವ ವಿಷಯ ಹೇಳಿದ್ದಾರೆ. ನಂತರ ಅರುಣ್ ಕುಮಾರಿ ಸಹ ಅಂದೇ ಹರ್ಷಗೆ ಸಾಲ ಪಡೆಯಲು ಸುಳ್ಳು ದಾಖಲಾತಿ ನೀಡಿರುವುದಾಗಿ ಹೇಳಿದ್ದಾರೆ.

  ಜೂನ್ 17 ರಂದು ಉಮಾಪತಿ ಸಂದೇಶ

  ಜೂನ್ 17 ರಂದು ಉಮಾಪತಿ ಸಂದೇಶ

  ಜೂನ್ 17 ರಂದು ಮೊದಲಿಗೆ ಅರುಣ್ ಕುಮಾರಿಗೆ ಸಂದೇಶ ಕಳಿಸಿರುವ ಉಮಾಪತಿ, ''ಏನಾಯಿತು?'' ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅರುಣ್ ಕುಮಾರಿ, 'ನಾನಿನ್ನೂ ಬ್ಯಾಂಕ್‌ನಲ್ಲಿದ್ದೀನಿ, ಆಮೇಲೆ ಕರೆ ಮಾಡ್ತೀನಿ'' ಎಂದಿದ್ದಾರೆ. ನಂತರ ಮತ್ತೆ ಉಮಾಪತಿ ಸಂದೇಶ ಕಳಿಸಿದಾಗ, ''ನಾನು ಮಾಲೂರಿಗೆ ಸೈಟ್ ವೆರಿಫಿಕೇಶನ್‌ಗೆ ಬಂದ್ದಿದ್ದೀನಿ'' ಎಂದಿದ್ದಾರೆ.

  ದರ್ಶನ್ ಬಗ್ಗೆ ಅರುಣಾಕುಮಾರಿ, ಹರ್ಷ ಮಾತನಾಡಿರುವ ಸ್ಪೋಟಕ ಆಡಿಯೋ | Filmibeat Kannada
  ಹರ್ಷ ನಿನ್ನ ಬ್ಯಾಂಕ್‌ಗೆ ಬಂದಿದ್ದಾನೆ ಎನಿಸುತ್ತದೆ: ಉಮಾಪತಿ

  ಹರ್ಷ ನಿನ್ನ ಬ್ಯಾಂಕ್‌ಗೆ ಬಂದಿದ್ದಾನೆ ಎನಿಸುತ್ತದೆ: ಉಮಾಪತಿ

  ''ಹರ್ಷ ನಿನ್ನ ಬ್ಯಾಂಕ್‌ಗೆ ಬಂದಿದ್ದಾನೆ ಎನಿಸುತ್ತದೆ'' ಎಂದು ಉಮಾಪತಿ ಸಂದೇಶ ಕಳಿಸಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿರುವ ಅರುಣ್ ಕುಮಾರಿ, ''ಯಾವಾಗ?'', 'ಸಾಧ್ಯವೇ ಇಲ್ಲ'' ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವು ಸಮಯದ ಬಳಿಕ ಮತ್ತೆ ಸಂದೇಶ ಕಳಿಸಿರುವ ಉಮಾಪತಿ, ''ದರ್ಶನ್ ಸರ್ ನನಗೆ ಕರೆ ಮಾಡುತ್ತಿದ್ದಾರೆ. ಅವರು ನಿನ್ನ ಬಳಿ ಮಾತನಾಡಬೇಕಂತೆ'' ಎಂದಿದ್ದಾರೆ. ಈಗ ವೈರಲ್ ಆಗಿರುವ ಚಿತ್ರಗಳಲ್ಲಿ ಇಷ್ಟು ಮಾಹಿತಿ ಇದೆ. ವಿಶೇಷವೆಂದರೆ ಈ ವಾಟ್ಸ್‌ಆಪ್ ಸಂದೇಶಗಳಲ್ಲಿ ಇವರಿಬ್ಬರ ಮಾತುಕತೆಗೂ ಹರ್ಷ ಮಲೆಂಟ ಸಲ್ಲಿಸಿರುವ ದೂರಿನಲ್ಲಿ ಹೆಸರಿಸಲಾಗಿರುವ ದಿನಾಂಕ ಹಾಗೂ ವಿಷಯಕ್ಕೂ ಹೋಲಿಕೆ ಆಗುತ್ತಿದೆ.

  English summary
  Cheating case in name of Darshan: Whats App chat on Arun Kumari and Producer Umapathy Srinivasa Gowda leaked on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X