For Quick Alerts
  ALLOW NOTIFICATIONS  
  For Daily Alerts

  RR ನಗರದಲ್ಲಿ ವೋಟ್ ಮಾಡಿದ 'ಜೋಡೆತ್ತು' ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ

  |
  RR ನಗರದಲ್ಲಿ ಮತ ಚಲಾಯಿಸಿದ ಚಾಲೇಂಜಿಂಗ್ ಸ್ಟಾರ್ ದಂಪತಿ: Lok Sabha Elections 2019

  ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಸಾಗುತ್ತಿದೆ. ಸಾಮಾನ್ಯ ಜನರಂತೆ ಸಿನಿಮಾ ಸ್ಟಾರ್ ಗಳು ಕೂಡ ಬೆಳ್ಳಂಬೆಳಗ್ಗೆಯೇ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

  ಈಗಾಗಲೇ ಕಿಚ್ಚ ಸುದೀಪ್ ದಂಪತಿ, ಅಮೂಲ್ಯ ದಂಪತಿ, ಪ್ರೇಮ್ ದಂಪತಿ, ಜಗ್ಗೇಶ್ ದಂಪತಿ, ರಮೇಶ್ ದಂಪತಿ ಸೇರಿದಂತೆ ಹಲವರು ಮತದಾನ ಮಾಡಿದ್ದಾರೆ. ಇದೀಗ, ಜೋಡೆತ್ತು ಖ್ಯಾತಿಯ ನಟ ದರ್ಶನ್ ಕೂಡ ವೋಟ್ ಚಲಾಯಿಸಿದ್ದಾರೆ.

  ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸ್ಟಾರ್ಸ್ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸ್ಟಾರ್ಸ್

  ಮಂಡ್ಯದ ಅಖಾಡದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ದಾಸ, ಬೆಂಗಳೂರಿನ ಆರ್.ಆರ್ ನಗರದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜನಸಾಮಾನ್ಯರಂತೆ ಜನರ ಜೊತೆ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಪಡೆದುಕೊಂಡಿದ್ದಾರೆ. ಫೋಟೋ ಸಮೇತ ಮುಂದೆ ನೋಡಿ...

  ಪತ್ನಿ ಜೊತೆ ದರ್ಶನ್ ಮತದಾನ

  ಪತ್ನಿ ಜೊತೆ ದರ್ಶನ್ ಮತದಾನ

  ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸೇರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು.

  ಚೆನ್ನೈನಲ್ಲಿ ಸರ್ಜಾ ಕುಟುಂಬ

  ಚೆನ್ನೈನಲ್ಲಿ ಸರ್ಜಾ ಕುಟುಂಬ

  ಇನ್ನು ಕನ್ನಡ ನಟ ಅರ್ಜುನ್ ಸರ್ಜಾ ಅವರು ತಮ್ಮ ಮತದಾನವನ್ನ ಚೆನ್ನೈನಲ್ಲಿ ಮಾಡಿದ್ದಾರೆ. ಪತ್ನಿ ಮತ್ತು ತಮ್ಮ ಇಬ್ಬರು ಮಕ್ಕಳೊಂದಿಗೆ ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

  ಮಂಡ್ಯ ಅಭ್ಯರ್ಥಿ ನಿಖಿಲ್ ಮತ್ತು ಸುಮಲತಾ ಮತ ಹಾಕಿದ್ದು ಎಲ್ಲಿ?ಮಂಡ್ಯ ಅಭ್ಯರ್ಥಿ ನಿಖಿಲ್ ಮತ್ತು ಸುಮಲತಾ ಮತ ಹಾಕಿದ್ದು ಎಲ್ಲಿ?

  ಉಪೇಂದ್ರ ದಂಪತಿ

  ಉಪೇಂದ್ರ ದಂಪತಿ

  ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ ಅವರು ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಜೊತೆ ಆಗಮಿಸಿ ಮತದಾನ ಮಾಡಿದರು. ವಿಶೇಷ ಅಂದ್ರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.

  ವೋಟ್ ಮಾಡಿದ ಗಣೇಶ್

  ವೋಟ್ ಮಾಡಿದ ಗಣೇಶ್

  ರಾಜರಾಜೇಶ್ವರಿ ನಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮತದಾನ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸೇರುವ ಗಣೇಶ್ ಬೆಳಗ್ಗಯೇ ಮತಗಟ್ಟೆಗೆ ಆಗಮಿಸಿ ವೋಟ್ ಮಾಡಿದರು.

  ಮತ ಚಲಾಯಿಸಿದ ರಜನಿಕಾಂತ್ ಮತ್ತು ಕಮಲ್ ಹಾಸನ್ಮತ ಚಲಾಯಿಸಿದ ರಜನಿಕಾಂತ್ ಮತ್ತು ಕಮಲ್ ಹಾಸನ್

  ಊರಿಗೆ ಹೋಗಿ ವೋಟ್ ಮಾಡಿದ ಡಾಲಿ

  ಊರಿಗೆ ಹೋಗಿ ವೋಟ್ ಮಾಡಿದ ಡಾಲಿ

  ಡಾಲಿ ಖ್ಯಾತಿಯ ಧನಂಜಯ್ ಊರಿಗೆ ಹೋಗಿ ತಮ್ಮ ಮತದಾನ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಡಾಲಿಯ ತಮ್ಮ ಮತದಾನ ಹಕ್ಕು ಹೊಂದಿದ್ದು, ತಮ್ಮ ಗ್ರಾಮಸ್ಥರ ಜೊತೆ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ್ದಾರೆ.

  English summary
  Kannada actor darshan family, arjun sarja family, upendra family, ganesh and dhananjay are cast their votes in lok sabha election 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X