For Quick Alerts
  ALLOW NOTIFICATIONS  
  For Daily Alerts

  ಮೆಚ್ಚಿನ ನಿರ್ಮಾಪಕರ ಹುಟ್ಟುಹಬ್ಬ ಆಚರಿಸಿದ ದರ್ಶನ್

  |

  ನಟ ದರ್ಶನ್ ಅವರು ತಮ್ಮ ನೆಚ್ಚಿನ ನಿರ್ಮಾಪಕರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಹುಟ್ಟುಹಬ್ಬ ಆಚರಿಸಲೆಂದು ಮೈಸೂರಿಗೆ ಬಂದಿದ್ದಾರೆ ದರ್ಶನ್.

  ಹೌದು, ನಿನ್ನೆ ಧಾರವಾಡಕ್ಕೆ ಭೇಟಿ ನೀಡಿದ್ದ ದರ್ಶನ್, ಇಂದು ಮೈಸೂರಿಗೆ ಬಂದಿದ್ದು, ತಮ್ಮ ಆತ್ಮೀಯ, ನೆಚ್ಚಿನ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

  ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬ ಇಂದು. ಅದಕ್ಕಾಗಿಯೇ ಮೈಸೂರಿಗೆ ಆಗಮಿಸಿರುವ ದರ್ಶನ್ ಹಿರಿಯ ನಿರ್ಮಾಪಕರಿಗೆ ಹಾರ ಹಾಕಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

  ಪ್ರತಿಹುಟ್ಟುಹಬ್ಬಕ್ಕೂ ಮೈಸೂರಿಗೆ ಬರುತ್ತಾರೆ

  ಪ್ರತಿಹುಟ್ಟುಹಬ್ಬಕ್ಕೂ ಮೈಸೂರಿಗೆ ಬರುತ್ತಾರೆ

  ಸಂದೇಶ್ ನಾಗರಾಜ್ ಅವರ ಪ್ರತಿ ಹುಟ್ಟುಹಬ್ಬಕ್ಕೆ ದರ್ಶನ್ ಮೈಸೂರಿಗೆ ಬಂದು ಸಂದೇಶ್ ಅವರಿಗೆ ವಿಶ್ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಬಾರಿಯೂ ಮೈಸೂರಿಗೆ ಬಂದು ವಿಶ್ ಮಾಡಿದ್ದಾರೆ ದರ್ಶನ್.

  ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ

  ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ

  ಸಂದೇಶ್ ನಾಗರಾಜ್ ಅವರು ದರ್ಶನ್ ಅವರ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಪ್ರಮಖವಾಗಿ ಪ್ರಿನ್ಸ್, ವಿರಾಟ್, ಅಂಬರೀಶ, ಐರಾವತ ಇನ್ನೂ ಕೆಲವು ದರ್ಶನ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ ಸಂದೇಶ್ ನಾಗರಾಜ್.

  ಆಪ್ತ ನಿರ್ಮಾಪಕ ಸಂದೇಶ್ ನಾಗರಾಜ್

  ಆಪ್ತ ನಿರ್ಮಾಪಕ ಸಂದೇಶ್ ನಾಗರಾಜ್

  ಸಂದೇಶ್ ನಾಗರಾಜ್ ದರ್ಶನ್‌ ಗೆ ಅತ್ಯಾಪ್ತ ನಿರ್ಮಾಪಕರಾಗಿದ್ದಾರೆ. ದರ್ಶನ್ ಅವರು ಬೆಳೆವ ಹಂತದಲ್ಲಿ ಸಂದೇಶ್ ನಾಗರಾಜ್ ಹಲವು ವಿಧದಲ್ಲಿ ನೆರವಾಗಿದ್ದಾರೆ ಎನ್ನಲಾಗಿದೆ.

  ದರ್ಶನ್ ಎತ್ತಿನ ಬಂಡಿ ಸವಾರಿ

  ದರ್ಶನ್ ಎತ್ತಿನ ಬಂಡಿ ಸವಾರಿ

  ದರ್ಶನ್ ನಿನ್ನೆಯಷ್ಟೆ ಧಾರವಾಡಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಡೈರಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ. ಜೊತೆಗೆ ವಿನಯ್ ಕುಲಕರ್ಣಿ ಅವರೊಟ್ಟಿಗೆ ಸೇರಿ ಎತ್ತಿನ ಬಂಡಿ ಸವಾರಿ ಸಹ ಮಾಡಿದ್ದಾರೆ.

  English summary
  Actor Darshan celebrates producer Sandesh Nagaraj's birthday in Mysuru on August 16.
  Monday, August 17, 2020, 9:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X