Just In
Don't Miss!
- News
ಸಂಸತ್ ಮೇಲೆ ಮತ್ತೆ ದಾಳಿ ನಡೆಯಬಹುದು, 7 ಸುತ್ತಿನ ಕೋಟೆಯಾಯ್ತು ‘ಕ್ಯಾಪಿಟಲ್ ಹಿಲ್’
- Sports
ರಿವರ್ಸ್ ಸ್ವೀಪ್ ಮೂಲಕ ಆಂಗ್ಲರ ದಂಗುಡಿಸಿದ ರಿಷಭ್ ಪಂತ್: ವಿಡಿಯೋ
- Automobiles
2022ರ ಜೀಪ್ ಗ್ರ್ಯಾಂಡ್ ವ್ಯಾಗೊನೀರ್ ಎಸ್ಯುವಿಯ ಬಿಡುಗಡೆ ದಿನಾಂಕ ಬಹಿರಂಗ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Lifestyle
ಮಹಾಶಿವರಾತ್ರಿ 2021: ದಿನಾಂಕ, ಪೂಜಾಸಮಯ, ಮಹತ್ವ ಹಾಗೂ ವಿಧಿವಿಧಾನದ ಸಂಪೂರ್ಣ ಮಾಹಿತಿ ನಿಮಗಾಗಿ
- Education
CSG Recruitment 2021: 85 ಸಾಫ್ಟ್ವೇರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ 'ಮೆಜೆಸ್ಟಿಕ್' ಸಿನಿಮಾಗೆ 19 ವರ್ಷ: ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಡಿ ಬಾಸ್ ಸಂಭ್ರಮ
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಅಭಿಮಾನಿಗಳ ಪ್ರೀತಿಯ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಆಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡು 19 ವರ್ಷಗಳು ಕಳೆದಿವೆ. ಅಭಿಮಾನಿಗಳ ನೆಚ್ಚಿನ ಡಿ ಬಾಸ್ ದರ್ಶನ್ ಫೆಬ್ರವರಿ 8ರಂದು ಮೆಜೆಸ್ಟಿಕ್ ಸಿನಿಮಾ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಪಕ್ಕಾ ಮಾಸ್ ಹೀರೋ ಆಗಿದ್ದ ಮಿಂಚಿದ್ದ ದರ್ಶನ್ ಗೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದರು.
ಅಂದಹಾಗೆ ದರ್ಶನ್ ನಾಯಕನಾಗಿ ತೆರೆಮೇಲೆ ಮಿಂಚುವ ಮೊದಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ತಂತ್ರಜ್ಞನಾಗಿ ಬಣ್ಣದ ಲೋಕದಲ್ಲಿ ವೃತ್ತಿ ಜೀವನ ಪ್ರಾರಂಭಸಿದ್ದರು. ಆದರೆ ನಾಯಕನಾಗಿ ಮಿಂಚಿದ್ದು ಮೆಜೆಸ್ಟಿಕ್ ಸಿನಿಮಾ ಮೂಲಕ. ಇಂದುಸ್ಯಾಂಡಲ್ ವುಡ್ ನ ಸ್ಟಾರ್ ನಟನಾಗಿ ಬೆಳೆದು ನಿಂತಿರುವ ದರ್ಶನ್, ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಡಿ ಬಾಸ್ 19 ವರ್ಷದ ಸಂಭ್ರಮವನ್ನು ಅಭಿಮಾನಿಗಳು ಕೇಕ್ ಕತ್ತರಿಸಿ ಆಚರಣೆ ಮಾಡಿದ್ದಾರೆ.
ಡಿ ಬಾಸ್ ದರ್ಶನ್ ಹೀರೋ ಆಗಿ 19 ವರ್ಷ: ಅಂದು ಹೇಗಿತ್ತು 'ಮೆಜೆಸ್ಟಿಕ್' ದಾಸನ ಹವಾ?

ಅಭಿಮಾನಿಗಳ ಜೊತೆ ಡಿ ಬಾಸ್
ಇಂದು ದೊಡ್ಡ ನಟನಾಗಿ ಖ್ಯಾತಿಗಳಿಸಿರುವ ದರ್ಶನ್ 19 ವರ್ಷದ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ನಾಯಕನಾಗಿ ಮಿಂಚಿದ್ದ ಮೊದಲ ಸಿನಿಮಾದ ಸಂಭ್ರಮವನ್ನು ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಂಡಿದ್ದಾರೆ. ಹೌದು, ನೆಚ್ಚಿನ ನಟ ಡಿ ಬಾಸ್ ಹೀರೋ ಆಗಿ ಎಂಟ್ರಿ ಕೊಟ್ಟ ದಿನವನ್ನು ಕೇಕ್ ಕತ್ತರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಕ್ ಕತ್ತರಿಸಿ ಸಂಭ್ರಮಿಸಿದ ಡಿ ಬಾಸ್
ಮೆಜೆಸ್ಟಿಕ್ ಪೋಸ್ಟರ್ ನ ವಿಶೇಷ ಕೇಕ್ ತಯಾರಿಸಿ, ಅಭಿಮಾನಿಗಳು ದರ್ಶನ್ ನಿವಾಸಕ್ಕೆ ಭೇಟಿ ನೀಡಿದ್ದರು. ಅಭಿಮಾನಿಗಳು ಪ್ರೀತಿಯಿಂದ ತಂದಿದ್ದ ಕೇಕ್ ಅನ್ನು ಕತ್ತರಿಸಿ ಅಭಿಮಾನಿಗಳಿಗೆ ತಿನಿಸಿದ್ದಾರೆ. ಬಳಿಕ ಅಭಿಮಾನಿಗಳು ದರ್ಶನ್ ಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಸಂತಸ ಪಟ್ಟಿದ್ದಾರೆ.
ರಾಬರ್ಟ್ ಟೀಸರ್ ಆಯ್ತು, ಈಗ ತೆಲುಗಿನಲ್ಲಿ ಮೊದಲ ಹಾಡು ರಿಲೀಸ್

2002ರಲ್ಲಿ ಸಿನಿಮಾ ರಿಲೀಸ್
'ಮೆಜೆಸ್ಟಿಕ್' ಸಿನಿಮಾ 2002ರಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಪಿ.ಎನ್.ಸತ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಎಂ.ಜಿ.ರಾಮಮೂರ್ತಿ ಮತ್ತು ಬಾ.ಮಾ ಹರೀಶ್ ನಿರ್ಮಾಣ ಮಾಡಿದ್ದಾರೆ. ಸಾಧುಕೋಕಿಲಾ ಸಂಗೀತ ನೀಡಿದ್ದರು. ಅಣಜಿ ನಾಗರಾಜ್ ಛಾಯಗ್ರಹಣವಿತ್ತು. ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರೇಖಾ ಕಾಣಿಸಿಕೊಂಡಿದ್ದರು. ದರ್ಶನ್ ಜೊತೆ ನಾಯಕಿಯಾಗಿ ಮಿಂಚಿದ ಮೊದಲ ನಾಯಕಿ ಎನ್ನುವ ಖ್ಯಾತಿ ಕೂಡ ರೇಖಾ ಅವರಿಗಿದೆ.
ಶರಣ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಚಾಲೆಜಿಂಗ್ ಸ್ಟಾರ್ ದರ್ಶನ್

ಮಾಸ್ ಹೀರೋ ಆಗಿ ಖ್ಯಾತಿಗಳಿಸಿದ ದರ್ಶನ್
'ಮೆಜೆಸ್ಟಿಕ್' ಸಿನಿಮಾ ತೆರೆಕಾಣುವುದಕ್ಕಿಂತ ಮೊದಲು ದರ್ಶನ್ ಸುಮಾರು ಆರೇಳು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸಿದ್ದರು. ಆದ್ರೆ, 'ಮೆಜೆಸ್ಟಿಕ್' ನಂತರ ದರ್ಶನ್ ಖದರ್ ಸಂಪೂರ್ಣವಾಗಿ ಬದಲಾಯಿತು. ಮಾಸ್ ಹೀರೋ ಎನ್ನುವ ಪಟ್ಟ ಕೂಡ ಸಿಕ್ಕಿತು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಿದ್ದಾರೆ.