ಕ್ರಾಂತಿ 100 ಕೋಟಿ ಸುಳ್ಳು ಎಂದವರೆಲ್ಲಾ ಇಲ್ಲಿ ನೋಡಿ ದರ್ಶನ್ ಅವ್ರೇ ಕೊಟ್ರು ಪ್ರೂಫ್ ಎಂದ ಫ್ಯಾನ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಯಾಗಿ ಯಶಸ್ವಿ ಒಂದು ವಾರ ಪೂರೈಸುವ ಸನಿಹಕ್ಕೆ ಬಂದಿದೆ. ಹೌದು, ಕಳೆದ ಗುರುವಾರ ( ಜನವರಿ 26 ) ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿದ್ದ ಕ್ರಾಂತಿ ದೊಡ್ಡ ಓಪನಿಂಗ್ ಪಡೆದುಕೊಂಡಿತ್ತು. ಬಿಡುಗಡೆ ದಿನವೇ ಬರೋಬ್ಬರಿ 12.85 ಕೋಟಿ ಗಳಿಸಿದ್ದ ಕ್ರಾಂತಿ ಶುಭಾರಂಭ ಮಾಡಿತ್ತು.

ಬರೋಬ್ಬರಿ 22 ತಿಂಗಳುಗಳ ಬಳಿಕ ತೆರೆಕಂಡ ನೆಚ್ಚಿನ ನಟನ ಚಿತ್ರವನ್ನು ನೋಡಲು ದರ್ಶನ್ ಅಭಿಮಾನಿಗಳು ಕಾತರರಾಗಿ ಚಿತ್ರಮಂದಿರಗಳತ್ತ ಹೆಜ್ಜೆ ಇಟ್ಟಿದ್ದರು. ಸರ್ಕಾರಿ ಶಾಲೆಗಳ ಪ್ರಾಮುಖ್ಯತೆಯನ್ನು ಸಾರಿದ್ದ ಕ್ರಾಂತಿ ಚಿತ್ರದಲ್ಲಿ ಜನರು ನೋಡಿ ತಿಳಿದುಕೊಳ್ಳಬೇಕಾದ ಸಂದೇಶವಿದೆ ಎಂದು ದರ್ಶನ್ ಅಭಿಮಾನಿಗಳು ಚಿತ್ರವನ್ನು ಮನಸಾರೆ ಒಪ್ಪಿಕೊಂಡಿದ್ದು, ಚಿತ್ರ ಬಿಡುಗಡೆಯಾಗುವ ಮೊದಲು ಚಿತ್ರಕ್ಕೆ ಹೇಗೆ ಬೆಂಬಲ ನೀಡಿದ್ರೋ ಅದೇ ರೀತಿಯ ಪ್ರಚಾರವನ್ನು ಬಿಡುಗಡೆಯಾದ ನಂತರವೂ ಸಹ ಮುಂದುವರಿಸಿದ್ದಾರೆ.

ಒಂದೆಡೆ ಅಭಿಮಾನಿಗಳು ಚಿತ್ರಕ್ಕೆ ಪ್ರಚಾರವನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಚಿತ್ರದ ನಿರ್ಮಾಪಕರು ಚಿತ್ರದ ಕುರಿತು ಸಾಲು ಸಾಲು ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಚಿತ್ರ ಚೆನ್ನಾಗಿ ಪ್ರದರ್ಶನವಾಗ್ತಿದೆ ಎಂಬುದನ್ನು ತಿಳಿಸಿತ್ತು. ಹೀಗೆ ಚಿತ್ರತಂಡ ಹಾಗೂ ಅಭಿಮಾನಿಗಳು ಇಷ್ಟೆಲ್ಲಾ ಪ್ರಚಾರ ಹಾಗೂ ಬೆಂಬಲ ನೀಡುತ್ತಿದ್ದರೆ ಚಿತ್ರದ ನಟ ದರ್ಶನ್ ಮಾತ್ರ ಸೈಲೆಂಟ್ ಆಗಿಬಿಟ್ಟಿದ್ದರು. ಚಿತ್ರವನ್ನು ಅಭಿಮಾನಿಗಳು ಒಪ್ಪಿಕೊಂಡು ಪ್ರೀತಿಯ ಅಪ್ಪುಗೆಯನ್ನು ನೀಡಿದರೂ ಸಹ ದರ್ಶನ್ ಚಿತ್ರದ ಕುರಿತು ಯಾಕೆ ಏನು ಮಾತನಾಡಿಲ್ಲ ಎಂಬ ಪ್ರಶ್ನೆ ಮೂಡುವ ಬೆನ್ನಲ್ಲೇ ದರ್ಶನ್ ಅವರ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಭಿಮಾನಿಗಳಿಗೆ ಇದು ಖುಷಿ ತಂದಿದೆ.

ಕ್ರಾಂತಿ 109 ಕೋಟಿ ಸಂಭ್ರಮಾಚರಣೆ

ಕ್ರಾಂತಿ 109 ಕೋಟಿ ಸಂಭ್ರಮಾಚರಣೆ

ಹೌದು, ದರ್ಶನ್ ಕ್ರಾಂತಿ ಬಿಡುಗಡೆಯಾದ ಐದು ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ದರ್ಶನ ನೀಡಿದ್ದಾರೆ. ಅಭಿಮಾನಿಗಳು ಚಿತ್ರ 4 ದಿನಗಳಲ್ಲಿ 109 ಕೋಟಿ ಗಳಿಸಿದೆ ಎಂದು ಕೊಂಡೊಯ್ದಿದ್ದ ಕೇಕ್ ಅನ್ನು ದರ್ಶನ್ ಅವರು ಕತ್ತರಿಸಿ ಅಭಿಮಾನಿಗಳ ಜತೆ ಸಂಭ್ರಮಿಸಿದ್ದಾರೆ. ಹೌದು, ಥಿಯೇಟರ್ ಕಲೆಕ್ಷನ್ ಜತೆಗೆ ಬಿಡುಗಡೆಗೂ ಮುನ್ನ ಚಿತ್ರ ಟಿವಿ ರೈಟ್ಸ್ ಹಾಗೂ ಸ್ಯಾಟಲೈಟ್ ಹಕ್ಕಿನ ಮೂಲಕ ದುಡಿದಿದ್ದ ಹಣವೆಲ್ಲಾ ಸೇರಿ 100 ಕೋಟಿ ಕ್ಲಬ್ ಸೇರಿದೆ ಎಂದು ದರ್ಶನ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ಕೇಕ್ ಕಟ್ಟಿಂಗ್ ಸಮಾರಂಭದಲ್ಲಿ ದರ್ಶನ್ ಅವರಿಗೆ ಭಾರೀ ಗಾತ್ರದ ಹಾರವನ್ನು ಅಭಿಮಾನಿಗಳು ಹಾಕಿದ್ದು, ಸನ್ಮಾನಿಸಿ ಶುಭ ಕೋರಿದ್ದಾರೆ.

ಅಧಿಕೃತ ಘೋಷಣೆ ಇಲ್ಲ

ಅಧಿಕೃತ ಘೋಷಣೆ ಇಲ್ಲ

ಇನ್ನು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ನಾಲ್ಕೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತು ಎಂದು ಸುದ್ದಿ ಹರಿದಾಡಿದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆಯನ್ನೇನೋ ಮಾಡಿದ್ದಾರೆ. ಆದರೆ ಈ ಸಂಭ್ರಮಾಚರಣೆ ಇದೀಗ ಟ್ರೋಲ್‌ಗೂ ಸಹ ಒಳಗಾಗಿದೆ. ಇದಕ್ಕೆಲ್ಲಾ ಕಾರಣ ಚಿತ್ರ ನೂರು ಕೋಟಿ ಗಳಿಕೆಯನ್ನು ಮಾಡಿದೆ ಎಂದು ಚಿತ್ರತಂಡ ಅಧಿಕೃತ ಘೋಷಣೆಯನ್ನು ಮಾಡದೇ ಇರುವುದು. ಹೌದು, ಚಿತ್ರತಂಡ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ, ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದ ಪೋಸ್ಟ್ ಮಾಡುತ್ತಿದೆ ಹೊರತು ಅಧಿಕೃತವಾಗಿ ನೂರು ಕೋಟಿ ಸೇರಿದೆ ಎಂಬ ಯಾವ ಪೋಸ್ಟರ್ ಅನ್ನು ಬಿಡುಗಡೆ ಮಾಡಿಲ್ಲ. ಇದೇ ವಿಷಯವನ್ನು ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ಅಧಿಕೃತ ಘೋಷಣೆ ಮಾಡಿ ಎಂದು ಕಾಲೆಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ

ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಈ ವಿಷಯದ ಕುರಿತಾಗಿ ಪೋಸ್ಟ್ ಹಂಚಿಕೊಳ್ಳುತ್ತಿದ್ದು, ಚಿತ್ರ ನೂರು ಕೋಟಿ ಕಲೆಕ್ಷನ್ ಮಾಡದಿದ್ದರೆ ದರ್ಶನ್ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ರಾ ಎಂದು ವಿರೋಧಿಗಳಿಗೆ ಪ್ರಶ್ನೆ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದ ಸಕ್ಸಸ್ ಕುರಿತಾಗಿ ನಟ ದರ್ಶನ್, ನಿರ್ದೇಶಕ ವಿ ಹರಿಕೃಷ್ಣ, ನಟಿ ಸಂಯುಕ್ತಾ ಹೊರನಾಡು ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಸೇರಿದಂತೆ ಚಿತ್ರದ ಉಳಿದ ಸದಸ್ಯರು ಮತ್ತೊಂದು ಕೇಕ್ ಕತ್ತರಿಸಿ ಸಂಭ್ರಮಿಸಿದ ವಿಡಿಯೊವನ್ನೂ ಸಹ ದರ್ಶನ್ ಫ್ಯಾನ್ಸ್ ಹಂಚಿಕೊಂಡು ಚಿತ್ರ ಗೆದ್ದಿದೆ ಎಂದಿದ್ದಾರೆ. ಈ ವಿಡಿಯೊಗಳನ್ನು ಹಾಗೂ ಫೋಟೊಗಳನ್ನು ಹಂಚಿಕೊಂಡಿರುವ ದರ್ಶನ್ ಅಭಿಮಾನಿಗಳು ಕ್ರಾಂತಿ ನೂರು ಕೋಟಿ ಗಳಿಸಿದೆ ಎನ್ನುವುದಕ್ಕೆ ಪ್ರೂಫ್ ಕೇಳುತ್ತಿದ್ದವರೆಲ್ಲಾ ಇದನ್ನು ನೋಡಿ ಇದೇ ಸಾಕ್ಷಿ ಎಂದು ಟ್ವೀಟ್ ಮಾಡುತ್ತಿದ್ದಾರೆ.

More from Filmibeat

English summary
Darshan celebrated Kranti 100 crores collection by cutting cake with his fans . Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X