100 ಕೋಟಿ ಕ್ಲಬ್ ಸೇರಿದ 'ಕುರುಕ್ಷೇತ್ರ': ಸಂಭ್ರಮಿಸಿದ ಸುಯೋಧನ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರ ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾವಾಗಿದೆ. ಮೊದಲ ಮೂರು ದಿನದಲ್ಲಿ 30 ಕೋಟಿ ಗಳಿಸಿದ್ದ ಈ ಚಿತ್ರ ಈಗ ನೂರು ಕೋಟಿ ಮಾಡಿದೆ ಎನ್ನಲಾಗಿದೆ.
ಈ ಬಗ್ಗೆ ನಿರ್ಮಾಪಕ ನಿರ್ದೇಶಕರಾಗಲಿ ಅಥವಾ ಚಿತ್ರತಂಡವಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಅಭಿಮಾನಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ 'ಕುರುಕ್ಷೇತ್ರ 100cr' ಎಂದು ಸಂಭ್ರಮ ಆರಂಭಿಸಿದ್ದರು.
ಅಭಿಮಾನಿಗಳ ಈ ಸಂಭ್ರಮಕ್ಕೆ ಸ್ವತಃ ದುರ್ಯೋಧನ ಸಾಥ್ ಕೊಟ್ಟಿದ್ದಾರೆ. ಕುರುಕ್ಷೇತ್ರ ನೂರು ಕೋಟಿ ಗಳಿಸಿದ ವಿಶೇಷವಾಗಿ ಅಭಿಮಾನಿಗಳು ತಂದ ಕೇಕ್ ಕತ್ತರಿಸಿ ಖುಷಿ ಪಟ್ಟಿದ್ದಾರೆ.

ಮತ್ತೊಂದೆಡೆ ಕುರುಕ್ಷೇತ್ರ ಚಿತ್ರವೂ ನಾಲ್ಕನೇ ವಾರಾಂತ್ಯಕ್ಕೆ ಎಲ್ಲ ಭಾಷೆಯಲ್ಲೂ ಚೆನ್ನಾಗಿ ಪ್ರದರ್ಶನವಾಗ್ತಿದೆ. ಎಲ್ಲ ಕಡೆಯೂ ಹೌಸ್ ಫುಲ್ ಆಗಿದೆ ಎಂದು ಸಂತಸ ಹಂಚಿಕೊಳ್ಳುವ ರಾಕ್ ಲೈನ್ ವೆಂಕಟೇಶ್ 'ಕಲೆಕ್ಷನ್ ಬಗ್ಗೆ ಮಾತಾಡಲ್ಲ' ಎಂದಿದ್ದಾರೆ.
ಆಗಸ್ಟ್ 9 ರಂದು ಕುರುಕ್ಷೇತ್ರ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿತ್ತು. ಆಗಸ್ಟ್ 15 ರಂದು ತಮಿಳಿನಲ್ಲಿ ತೆರೆಕಂಡಿತ್ತು. ಕಳೆದ ವಾರ ಮಲಯಾಳಂ ಭಾಷೆಯಲ್ಲೂ ಬಿಡುಗಡೆಯಾಗಿದ್ದು, ಹಿಂದಿಯಲ್ಲಿ ಇನ್ನು ರಿಲೀಸ್ ಆಗಿಲ್ಲ.

ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಬಾಷೆಯೊಂದರಲ್ಲಿ ನೂರು ಕೋಟಿ ಗಳಿಸಿ ದಾಖಲೆ ಬರೆದಿತ್ತು ಎನ್ನಲಾಯಿತು. ಕೆಜಿಎಫ್ ತಂಡವೂ ಅಧಿಕೃತವಾಗಿ ಹೇಳಿಲ್ಲ. ಈಗ ಕುರುಕ್ಷೇತ್ರವೂ ಅದೇ ಸಾಲಿಗೆ ಸೇರಿದೆಯಂತೆ.
ಇನ್ನುಳಿದಂತೆ ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ರಾಜಕುಮಾರ, ಯಜಮಾನ, ಕಿರಿಕ್ ಪಾರ್ಟಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮುಂಗಾರು ಮಳೆ, ಸಂಗೊಳ್ಳಿ ರಾಯಣ್ಣ ಅಂತಹ ಚಿತ್ರಗಳಿವೆ.


Click it and Unblock the Notifications











