ಡಿ ಬಾಸ್ ಜೊತೆ ಶಿವರಾಜ್ ಕೆ ಆರ್ ಪೇಟೆ ಪುತ್ರನ ಹುಟ್ಟುಹಬ್ಬ ಆಚರಣೆ: ವಿಶೇಷ ಗಿಫ್ಟ್ ನೀಡಿದ ದರ್ಶನ್
ಡಿ ಬಾಸ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ವೃದ್ಧರಿಗೂ ಚಾಲೆಂಜಿಂಗ್ ಸ್ಟಾರ್ ಅಂದರೆ ಅಚ್ಚು ಮೆಚ್ಚು. ದರ್ಶನ್ ಅವರನ್ನು ಪ್ರೀತಿಸುವ, ಆರಾಧಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಸ್ಯಾಂಡಲ್ ವುಡ್ ನ ಕಾಮಿಡಿ ಸ್ಟಾರ್ ಶಿವರಾಜ್ ಕೆ.ಆರ್ ಪೇಟೆ ಪುತ್ರ ಕೂಡ ಒಬ್ಬ.
ಹೌದು, ಶಿವರಾಜ್ ಕೆ.ಆರ್ ಪುತ್ರ ವಂಕಿಶ್, ದರ್ಶನ್ ಅವರ ಅಪ್ಪಟ ಅಭಿಮಾನಿ. ಅಭಿಮಾನಿಗಳೆಂದರೆ ದೇವರು ಎನ್ನುವ ದರ್ಶನ್ ಅಭಿಮಾನಿಗಳನ್ನು ಅಷ್ಟೆ ಪ್ರೀತಿಯಿಂದ ಕಾಣುತ್ತಾರೆ. ಪುಟ್ಟ ಅಭಿಮಾನಿ ವಂಶಿಕ್ ಹುಟ್ಟುಹಬ್ಬವನ್ನು ದರ್ಶನ್ ಆಚರಣೆ ಮಾಡಿದ್ದಾರೆ. ವಂಕಿಶ್ ಗೆ ದರ್ಶನ್ ಎಂದರೆ ತುಂಬಾ ಇಷ್ಟವಂತೆ. ಹುಟ್ಟುಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ಭೇಟಿ ಮಾಡಿಸುವ ಮೂಲಕ ಮಗನ ಆಸೆಯನ್ನು ಈಡೇರಿಸಿದ್ದಾರೆ ಶಿವರಾಜ್ ಕೆ.ಆರ್ ಪೇಟೆ.

ದರ್ಶನ್ ಅಭಿಮಾನಿ ಶಿವರಾಜ್ ಕೆ ಆರ್ ಪೇಟೆ ಪುತ್ರ
ಶಿವರಾಜ್ ಕೆ.ಆರ್ ಪೇಟೆ ದಂಪತಿ ಮತ್ತು ಮಕ್ಕಳು ಇಂದು ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಹುಟ್ಟುಹಬ್ಬದ ದಿನ ನೆಚ್ಚಿನ ನಟನನ್ನು ನೋಡಲು ಹೋದ ವಂಶಿಕ್ ಗೆ ದರ್ಶನ್ ಸರ್ಪ್ರೈಸ್ ನೀಡುವ ಮೂಲಕ ಸಂತಸವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಡಿ ಬಾಸ್ ಕೇಕ್ ಕತ್ತರಿಸುವ ಮೂಲಕ ವಂಶಿಕ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ವಂಶಿಕ್ ಗೆ ವಿಶೇಷ ಗಿಫ್ಟ್ ನೀಡಿದ ದರ್ಶನ್
ವಂಶಿಕ್ ಗೆ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ತಾವೆ ಕ್ಕಿಕ್ಕಿಸಿದ ವನ್ಯ ಜೀವಿ ಚಿತ್ರಪಟಕ್ಕೆ ಫ್ರೇಮ್ ಹಾಕಿಸಿ ಗಿಫ್ಟ್ ಆಗಿ ನೀಡಿದ್ದಾರೆ. ದರ್ಶನ್ ಪ್ರೀತಿಗೆ ಶಿವರಾಜ್ ಕೇ.ಆರ್ ಪೇಟೆ ಕುಟುಂಬ ಫುಲ್ ಸಂತಸಪಟ್ಟಿದೆ. ಈ ಬಗ್ಗೆ ಶಿವರಾಜ್ ಕೆ ಆರ್ ಪೇಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್ ಪ್ರೀತಿಯ ಬಗ್ಗೆ ಶಿವರಾಜ್ ಕೆ.ಆರ್ ಪೇಟೆ ಮಾತು
'ಇವತ್ತು ಮೊದಲ ಮಗ ವಂಶಿಕ್ ನ ಹುಟ್ಟಿದ ದಿನ. ನಮಗೆ ಅದು ಹಬ್ಬ. ಆದ್ರೆ ಈ ವರ್ಷ ಅವನಿಗೆ ಹುಟ್ಟಿದ ಹಬ್ಬಕ್ಕೆ ಸಂಭ್ರಮ ದುಪ್ಪಟ್ಟು ಖುಷಿ. ಅವನಿಗೆ ಮಾತ್ರ ಅಲ್ಲ ನಮಗೂ ಕೂಡ. ಹೆಚ್ಚು ಕಡಿಮೆ ಮೂರು ವರ್ಷ ಮಗುವಿದ್ದಾಗಿನಿಂದ ಅವನಿಗೆ ಬಾಸ್ ದರ್ಶನ್ ಅಂದರೆ ಅಚ್ಚು ಮೆಚ್ಚು. ಅದಕ್ಕೆ ಅವನ ಆಸೆಯಂತೆ ಇವತ್ತು ದರ್ಶನ್ ಸರ್ ಅವರನ್ನ ಮೀಟ್ ಮಾಡಿ, ಅವರ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮ ಪಟ್ಟೆವು.'
Recommended Video

ನನ್ನ ಕುಟುಂಬ ಋಣಿ
'ನನ್ನ ಮಗನನ್ನ ಪ್ರೀತಿಯಿಂದ ಮಾತಾಡಿಸಿ, ಅವನಿಗೆ ತಾವೇ ತೆಗೆದ ವನ್ಯಜೀವಿಯ ಫೋಟೊವನ್ನು ಕೂಡ ಗಿಫ್ಟ್ ಆಗಿ ಕೊಟ್ಟರು. ಕಿರಿಯರ ಮೇಲಿನ ಅವರ ಪ್ರೀತಿಗೆ ನಾನು ನನ್ನ ಕುಟುಂಬ ಋಣಿ. ಥ್ಯಾಂಕ್ಯು ಡಿ ಬಾಸ್ ಹಾಗೇಯೇ ನನ್ನ ಮಗನಿಗೆ ನಿಮ್ಮ ಹಾರೈಕೆಗಳು ಇರಲಿ. ಹುಟ್ಟುಹಬ್ಬದ ಶುಭಾಶಯಗಳು ಮಗನೆ' ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











