For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ದರ್ಶನ್: ಸ್ನೇಹಿತರ ಜೊತೆ ಸಂಭ್ರಮಾಚರಣೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 24 ವರ್ಷಗಳು ಪೂರೈಸಿವೆ. ಇಂದು ಬಹುಬೇಡಿಕೆಯ ನಟನಾಗಿ, ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಬೆಳೆದು ನಿಂತಿರುವ ದರ್ಶನ್ ಪ್ರಾರಂಭದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ, ಶ್ರಮಿಸಿದ್ದಾರೆ. ಖ್ಯಾತ ಕಲಾವಿದನ ಮಗನಾಗಿದ್ದರೂ ಬಣ್ಣದ ಲೋಕ ಅವರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿಲ್ಲ. ಸಾಮಾನ್ಯ ಒಬ್ಬ ಲೈಟ್ ಬಾಯ್ ಆಗಿ ಕೆಲಸ ಪ್ರಾರಂಭಿಸಿದ ದರ್ಶನ್ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಾ ಇಂದು ಸ್ಟಾರ್ ಕಲಾವಿದನಾಗಿ ಬೆಳೆದು ನಿಂತಿದ್ದಾರೆ.

  ಅಭಿಮಾನಿಗಳ ಜೊತೆ ಭರ್ಜರಿ ಆಚರಣೆ ಮಾಡಿದ ಡಿ ಬಾಸ್

  ದರ್ಶನ್ ಬಣ್ಣದ ಲೋಕದ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಚಿತ್ರರಂಗದಲ್ಲಿ ಏನಾದರೂ ಸಾಧಿಬೇಕು ಎನ್ನುವ ಹಠ, ಛಲ ಅವರನ್ನು ಇಂದು ಈ ಸ್ಥಾನದಲ್ಲಿ ನಿಲ್ಲಿಸಿದೆ. 24 ವರ್ಷಗಳನ್ನು ಪೂರೈಸಿರುವ ಈ ಶುಭ ಸಂದರ್ಭದಲ್ಲಿ ದರ್ಶನ್ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಚಾಲೆಂಜಿಂಗ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಅಭಿಮಾನಿಗಳ ದಾಸ ದರ್ಶನ್ ಗೆ ಪ್ರೀತಿಯ ಅಭಿಮಾನಿಗಳು ಸನ್ಮಾನ ಮಾಡಿ ಸಂಭ್ರಮಿಸಿದ್ದಾರೆ.

  'ಖಳನಾಯಕ' ದರ್ಶನ್ ನಾಯಕನಾಗಿ ಬೆಳೆದ 'ಚಾಲೆಂಜಿಂಗ್' ಕಥೆ'ಖಳನಾಯಕ' ದರ್ಶನ್ ನಾಯಕನಾಗಿ ಬೆಳೆದ 'ಚಾಲೆಂಜಿಂಗ್' ಕಥೆ

  ಅಭಿಮಾನಿಗಳು ದರ್ಶನ್ ನಿವಾಸಕ್ಕೆ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗಿ ಸಲ್ಮಾನ್ ಮಾಡಿ, ಸಿಹಿ ತಿನಿಸಿ ಸಂತಸ ಪಟ್ಟಿದ್ದಾರೆ. ಅಭಿಮಾನಿಗಳ ಜೊತೆ 24 ವರ್ಷದದ ಸಂಭ್ರಮವನ್ನು ಆಚರಣೆ ಮಾಡಿರುವ ಫೋಟೋಗಳು ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಸ್ನೇಹಿತರ ಜೊತೆಯೂ 24ವರ್ಷದ ಸಂಭ್ರಮವನ್ನು ಆಚರಣೆ ಮಾಡಿದ್ದಾರೆ. ಮುಂದೆ ಓದಿ..

  ಸ್ನೇಹಿತರ ಜೊತೆ ದರ್ಶನ್ ಸಂಭ್ರಮಾಚರಣೆ

  ಸ್ನೇಹಿತರ ಜೊತೆ ದರ್ಶನ್ ಸಂಭ್ರಮಾಚರಣೆ

  ದರ್ಶನ್ 24 ವರ್ಷದ ಸಂಭ್ರಮವನ್ನು ಸ್ನೇಹಿತರ ಜೊತೆ ಆಚರಿಸಿದ್ದಾರೆ. ಡಿ ಬಾಸ್ 24 ವರ್ಷದ ಪಯಣವನ್ನು ಅವರ ಸ್ನೇಹಿತರು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಕೇಕ್ ಕತ್ತರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಸಂಭ್ರಮಾಚರಣೆಯಲ್ಲಿ ದರ್ಶನ್ ಆಪ್ತರು ಭಾಗಿಯಾಗಿದ್ದರು. ಸಂಭ್ರಮಾಚರಣೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

  ಲೈಟ್ ಬಾಯಾಗಿ ವೃತ್ತಿ ಜೀವನ ಆರಂಭ

  ಲೈಟ್ ಬಾಯಾಗಿ ವೃತ್ತಿ ಜೀವನ ಆರಂಭ

  ಲೈಟ್ ಬಾಯ್ ಆಗಿ ಕೆಲಸ ಪ್ರಾರಂಭ ಮಾಡಿದ್ದ ದರ್ಶನ್ ಬಳಿಕ ಕಿರುತೆರೆಯಲ್ಲಿ ಬಣ್ಣ ಹಚ್ಚಲು ಪ್ರಾರಂಭಿಸಿದರು. ಬಳಿಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಎಸ್ ನಾರಾಯಣ್ ಅವರ 'ಮಹಾಭಾರತ' ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ವಿನೋದ್ ರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದರು. ದರ್ಶನ್ ವಿಲನ್ ಆಗಿ ಬಣ್ಣ ಹಚ್ಚಿದ್ದರು. ಆನಂತರ ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್ 'ಮೆಜೆಸ್ಟಿಕ್' ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು.

  ಮೆಜೆಸ್ಟಿಕ್, ಕರಿಯಾ ಸಕ್ಸಸ್

  ಮೆಜೆಸ್ಟಿಕ್, ಕರಿಯಾ ಸಕ್ಸಸ್

  2002ರಲ್ಲಿ ತೆರೆಗೆ ಬಂದ ಮೆಜೆಸ್ಟಿಕ್ ಸಿನಿಮಾ ದರ್ಶನ್ ಸಿನಿ ಪಯಣವನ್ನೇ ಬದಲಾಯಿಸಿತು. ಲಾಂಗ್ ಹಿಡಿದು ಅಬ್ಬರಿಸಿದ್ದ ದರ್ಶನ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಬಳಿಕ ಪ್ರೇಮ್ ನಿರ್ದೇಶನದಲ್ಲಿ ಬಂದ ಕರಿಯಾ ಸಿನಿಮಾ ಮತ್ತೊಂದು ದೊಡ್ಡ ಸಕ್ಸಸ್ ತಂದು ಕೊಟ್ಟಿತು. ದರ್ಶನ್ ಜೀವನದಲ್ಲಿ ಅತಿ ಹೆಚ್ಚು ಬಾರಿ ರಿ-ರಿಲೀಸ್ ಆದ ಸಿನಿಮಾ ಅಂದರೆ ಕರಿಯಾ. ಸಾಕಷ್ಟು ಏಳು-ಬೀಳುಗಳ ನಡುವೆ ದರ್ಶನ್ ಇಂದು ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ.

  ರಾಬರ್ಟ್ ಸೂಪರ್ ಹಿಟ್, ಕೈಯಲ್ಲಿರುವ ಸಿನಿಮಾಗಳು

  ರಾಬರ್ಟ್ ಸೂಪರ್ ಹಿಟ್, ಕೈಯಲ್ಲಿರುವ ಸಿನಿಮಾಗಳು

  ದರ್ಶನ್ ಕೊನೆಯದಾಗಿ 'ರಾಬರ್ಟ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಕೂಡ ಬಾಕ್ಸ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ. ರಾಬರ್ಟ್ ಆದ್ಮೇಲೆ ದರ್ಶನ್ ಬಳಿ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ 'ರಾಜವೀರ ಮದಕರಿ ನಾಯಕ' ಸಿನಿಮಾ ಮಾಡುತ್ತಿದ್ದಾರೆ. ಶೈಲಜಾ ನಾಗ್ ನಿರ್ಮಾಣದಲ್ಲಿ ಹೊಸ ಸಿನಿಮಾಗೆ ಚಾಲನೆ ಕೊಟ್ಟಿದ್ದಾರೆ. ಮಿಲನ ಪ್ರಕಾಶ್ ಹಾಗೂ ಎಂ ಜೆ ರಾಮಮೂರ್ತಿ ಜೊತೆಯಲ್ಲೂ ಹೊಸ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.

  English summary
  Challenging Star Darshan celebrating his 24 years film journey with friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X