25 ವರ್ಷ ಪೂರೈಸಿದ ದರ್ಶನ್: ಶುಭಕೋರಿದ ತಾರೆಯರು!

ಆಗಸ್ಟ್ 11 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಬದುಕಿನಲ್ಲಿ ಮರೆಯಲಾರದ ದಿನ. ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ 'ಮಹಾಭಾರತ' ರಿಲೀಸ್ ಆಗಿದ್ದ ದಿನ. 1997 ಆಗಸ್ಟ್ 11ರಂದು ಎಸ್‌. ನಾರಾಯಣ್ ನಿರ್ದೇಶನದ 'ಮಹಾಭಾರತ' ಚಿತ್ರ ರಿಲೀಸ್ ಆಗಿತ್ತು. ಈ ಮೂಲಕ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ.

ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ ಚಿತ್ರರಂಗದಲ್ಲಿ ದರ್ಶನ್ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಲಿಲ್ಲ. ಮೊದಲಿಗೆ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದ ದರ್ಶನ್‌ ನಂತರ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದರು.

'ಮೆಜೆಸ್ಟಿಕ್' ಸಿನಿಮಾ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಚಿತ್ರರಂಗದಲ್ಲಿ ಛಾಪು ಮೂಡಿಸಿದರು. ದರ್ಶನ್ ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಸಂಭ್ರಮಿಸುವುದಕ್ಕಾಗಿ ಹೊಸ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ ಕಾಮನ್ ಡಿಪಿ ಸಖತ್ ಸದ್ದು ಮಾಡ್ತಿದ್ದು, ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

ದರ್ಶನ್‌ಗೆ ತಾರೆಯರ ಶುಭಾಶಯ!

ದರ್ಶನ್‌ಗೆ ತಾರೆಯರ ಶುಭಾಶಯ!

ನಟ ದರ್ಶನ್ ಸಿನಿಮಾರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ ಎನ್ನುವ ಸಂಭ್ರಮವನ್ನು ಸಿನಿಮಾ ಮಂದಿ ಕೂಡ ಆಚರಿಸುತ್ತಿದ್ದಾರೆ. ಹಲವು ಸಿನಿಮಾ ತಾರೆಯರು ದರ್ಶನ್‌ಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭಕೋರಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್, ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ದರ್ಶನ್ 25 ವರ್ಷಗಳನ್ನು ಪೂರೈಸಿದ್ದಕ್ಕೆ ಶುಭಕೋರಿದ್ದಾರೆ. ಜೊತೆಗೆ ನಟ ಧನ್ವೀರ್ ಮತ್ತು ಅಯ್ಯಂಗಾರ್ ಕೂಡ ವಿಶ್ ಮಾಡಿದ್ದಾರೆ.

ಅಭಿಮಾನಿಗಳ ಸಂಭ್ರಮ!

ಅಭಿಮಾನಿಗಳ ಸಂಭ್ರಮ!

ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ನಟ ದರ್ಶನ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಿನ್ಸ್ ಸಚಿನ್ ಎಂಬುವವರು ಡಿಸೈನ್ ಮಾಡಿರುವ ಕಾಮನ್ ಡಿಪಿ ಸಖತ್ ವೈರಲ್ ಆಗಿದೆ. ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾಗಳ ಪಾತ್ರಗಳ ಫೋಟೊಗಳನ್ನು ಸೇರಿಸಿ, ಕಾಮನ್ ಡಿಪಿ ಡಿಸೈನ್ ಮಾಡಿದ್ದಾರೆ. ಅಭಿಮಾನಿಗಳ ಫೇಸ್‌ ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ CDP ರಾರಾಜಿಸುತ್ತಿದೆ.

ಬಹುತೇಕ ಹಿಟ್‌ಗಳನ್ನೇ ಕೊಟ್ಟ ದರ್ಶನ್!

ಬಹುತೇಕ ಹಿಟ್‌ಗಳನ್ನೇ ಕೊಟ್ಟ ದರ್ಶನ್!

ಹಲವು ಹಿಟ್ ಸಿನಿಮಾ ನೀಡಿದ 'ಸಾರಥಿ' ಒಂದು ಕಾಲದಲ್ಲಿ ದರ್ಶನ್ ಹಸು ಕಟ್ಟಿ, ಹಾಲು ಮಾರಿ ಜೀವನ ನಡೆಸಿದ ದಿನಗಳು ಇದೆ. ನೀನಾಸಂನಲ್ಲಿ ಅಭಿನಯದ ಕಲಿತು ಬಂದ ದರ್ಶನ್ ನಟನಾಗಿ ಗೆದ್ದರು. ಇಂದು ಸೂಪರ್ ಸ್ಟಾರ್ ಆಗಿದ್ದಾರೆ. 'ಕರಿಯ', 'ದಾಸ', 'ಶಾಸ್ತ್ರಿ', 'ಕಲಾಸಿಪಾಳ್ಯ', 'ಮಂಡ್ಯ', 'ಗಜ', 'ನವಗ್ರಹ', 'ಸಾರಥಿ', 'ಸಂಗೊಳ್ಳಿ ರಾಯಣ್ಣ', 'ಬುಲ್‌ಬುಲ್', 'ಕುರುಕ್ಷೇತ್ರ', 'ಯಜಮಾನ' ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ದರ್ಶನ್ ನೀಡಿದ್ದಾರೆ.

ಬಾಕ್ಸಾಫೀಸ್ ಸುಲ್ತಾನ್ ದರ್ಶನ್!

ಬಾಕ್ಸಾಫೀಸ್ ಸುಲ್ತಾನ್ ದರ್ಶನ್!

ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಈಗಾಗಲೇ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಿ ಚಾಲೆಂಜಿಂಗ್ ಸ್ಟಾರ್ ಬಿರುದು ಪಡೆದುಕೊಂಡಿದ್ದಾರೆ. ದರ್ಶನ್ ನಟನೆಯ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿವೆ. ನಿರ್ಮಾಪಕರ ಪಾಲಿನ ಅದೃಷ್ಟ ಆಗಿ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ಮಾತ್ರವಲ್ಲದೇ ಐತಿಹಾಸಿಕ, ಪೌರಾಣಿಕ ಸಿನಿಮಾಗಳಲ್ಲೂ ನಟಿಸಿ ಯಶಸ್ವಿಯಾಗಿದ್ದಾರೆ.

More from Filmibeat

English summary
Darshan Completes 25 Years In Sandalwood, Celebrities Wishes To Darshan, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X