For Quick Alerts
  ALLOW NOTIFICATIONS  
  For Daily Alerts

  'ಗ್ರೀನ್ ಇಂಡಿಯಾ ಚಾಲೆಂಜ್' ಪೂರ್ಣಗೊಳಿಸಿದ ನಟ ದರ್ಶನ್

  |

  ಶೂಟಿಂಗ್ ಇಲ್ಲದ ಸಮಯದಲ್ಲಿ ನಟ ದರ್ಶನ್ ಗೆಳೆಯರ ಜೊತೆ ಜಾಲಿ ಟ್ರಿಪ್ ಹೋಗುವುದು ಸಾಮಾನ್ಯವಾಗಿದೆ. ಕಳೆದ ಸಲ ಮಡಿಕೇರಿಗೆ ಬೈಕ್ ರೈಡ್ ಹೋಗಿದ್ದ ಡಿ ಬಾಸ್ ಮತ್ತು ಗ್ಯಾಂಗ್ ಈ ಸಲ ಕೇರಳ ಕಡೆ ಪ್ರಯಾಣ ಮಾಡಿದ್ದಾರೆ.

  ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಹಾಸ್ಯ ನಟ ಚಿಕ್ಕಣ್ಣ, ಯಶಸ್ ಸೂರ್ಯ, ಪ್ರಜ್ವಲ್ ದೇವರಾಜ್, ಪನ್ನಗಾಭರಣ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ನೇಹಿತರ ಜೊತೆ ಬೈಕ್ ರೈಡ್ ಹೋಗಿರುವ ದರ್ಶನ್ ವೀಕೆಂಡ್ ಎಂಜಾಯ್ ಮಾಡ್ತಿದ್ದಾರೆ.

  ಮತ್ತೊಂದು ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಟೀಂ; 'ಸಾರಥಿ' ಪಯಣ ಯಾವ ಕಡೆಗೆ?ಮತ್ತೊಂದು ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಟೀಂ; 'ಸಾರಥಿ' ಪಯಣ ಯಾವ ಕಡೆಗೆ?

  ಈ ಮಧ್ಯೆ ಗಿಡಗಳನ್ನು ನೆಡುವ ಮೂಲಕ ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದಾರೆ. ದರ್ಶನ್ ಅವರು ಗ್ರೀನ್ ಇಂಡಿಯಾ ಚಾಲೆಂಜ್‌ ಪೂರ್ಣಗೊಳಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿ ಭಕ್ತರು ಖುಷಿಯಾಗಿದ್ದಾರೆ.

  'ರಾಬರ್ಟ್' ಸಿನಿಮಾವನ್ನು ಸಂಪೂರ್ಣವಾಗಿ ಮುಗಿಸಿರುವ ದರ್ಶನ್ 'ರಾಜವೀರ ಮದಕರಿ ನಾಯಕ' ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಮೊದಲ ಹಂತದ ಶೂಟಿಂಗ್ ಮುಗಿಸಿ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಮತ್ತು ತಂಡ ಲೋಕೇಶನ್ ನೋಡ್ಕೊಂಡು ಬಂದಿದೆ.

  ಶರಣ್ ಅಭಿನಯದ ಹೊಸ ಚಿತ್ರ ಘೋಷಣೆ | Saran | Tarun Sudhir | Filmibeat kannada

  ದರ್ಶನ್ ಅನುಭವಿಸಿದ ಕಷ್ಟಗಳ ಬಗ್ಗೆ ದರ್ಶನ್ ಗುರುಗಳ ಮಾತುದರ್ಶನ್ ಅನುಭವಿಸಿದ ಕಷ್ಟಗಳ ಬಗ್ಗೆ ದರ್ಶನ್ ಗುರುಗಳ ಮಾತು

  ರಾಕ್‌ಲೈನ್ ವೆಂಕಟೇಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸುಮಲತಾ ಅಂಬರೀಶ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಜನವರಿಯಿಂದ ದರ್ಶನ್ ವೀರ ಮದಕರಿನಾಯಕ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

  English summary
  Challenging star Darshan completes 'Green India Challenge' with friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X