ತಮ್ಮ ಸಿನಿಮಾ ಮಾಡಲು ಬರುವ ನಿರ್ಮಾಪಕರಿಗೆ ಷರತ್ತು ಹಾಕಿದ ದರ್ಶನ್

'ರಾಬರ್ಟ್' ಸಿನಿಮಾದ ಗೆಲುವನ್ನು ಸಂಭ್ರಮಿಸಲು ಚಿತ್ರತಂಡ ಇಂದು (ಮಾರ್ಚ್ 16) ಒಟ್ಟಾಗಿತ್ತು. ಸಿನಿಮಾದ ಗೆಲುವಿನ ಹಿಂದೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.

Recommended Video

ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟು ಸಿನಿಮಾ ವಿತರಕರ ವಿರುದ್ಧ ಗರಂ ಆದ ದರ್ಶನ್ | Filmibeat Kannada

ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ನಟರಾದ ವಿನೋದ್ ರಾಜ್‌ಕುಮಾರ್, ಆಶಾ ಭಟ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಇನ್ನೂ ಹಲವರು ಸಿನಿಮಾ ಪಯಣದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಮಾತನಾಡಿದ ನಟ ದರ್ಶನ್ ಎಂದಿನಂತೆ ಮನಬಿಚ್ಚಿ ಮಾತನಾಡಿದರು. 'ನನ್ನ ಸಿನಿಮಾ ಮಲ್ಟಿಫ್ಲೆಕ್ಸ್‌ಗಳಲ್ಲಿ ಓಡಲ್ಲ ಅಂತಿದ್ರು. ಆದರೆ ನಾಲ್ಕು ದಿನದಲ್ಲಿ 55 ಲಕ್ಷ ಹಣವನ್ನು ನಮ್ಮ ಸಿನಿಮಾ ಗಳಿಸಿದೆ' ಎಂದರು ದರ್ಶನ್.

Darshan Condition For Producer Who Wants To Make Movie With Him

'ರಾಬರ್ಟ್' ಸಿನಿಮಾವನ್ನು ಚೆನ್ನಾಗಿ ವಿತರಣೆ ಮಾಡಿದೆವು. ಹಲವು ಚಿತ್ರಮಂದಿರಗಳ ಜೊತೆ ಎದುರು ಕೂತು ಮಾತನಾಡಿ ಹಂಚಿಕೆ ಮಾಡಲಾಗಿದೆ. ಚೆನ್ನಾಗಿ ಯೋಜನೆ ಹಾಕಿ ವಿತರಣೆ ಮಾಡಿದ್ದರಿಂದ ನಮ್ಮ ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡುತ್ತಿದೆ ಎಂದರು ದರ್ಶನ್.

'ನನ್ನ ಸಿನಿಮಾ ನಿರ್ಮಾಣ ಮಾಡಲು ಬರುವ ನಿರ್ಮಾಪಕರು ಮೊದಲು ವಿತರಣೆ ಮಾಡುವುದು ಹೇಗೆ ಎಂದು ಚೆನ್ನಾಗಿ ಕಲಿತುಕೊಂಡು ಬನ್ನಿ. ಇಲ್ಲದಿದ್ದರೆ ಬರಬೇಡಿ. ಸುಮ್ಮನೆ ಹಣ ಹಾಕಿ ನಂತರ ವಿತರಕರಿಗೆ ಮಾತ್ರ ಲಾಭ ಕೊಟ್ಟು, ನಿರ್ಮಾಪಕರು ಕೈಸುಟ್ಟುಕೊಳ್ಳುವಂತಾಗುವುದು ಬೇಡ' ಎಂದರು ದರ್ಶನ್.

'ಯಜಮಾನ, ಒಡೆಯ ಇನ್ನೂ ಕೆಲವು ಸಿನಿಮಾಗಳಿಂದ ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಸಿನಿಮಾ ವ್ಯವಹಾರ ನನಗೆ ಈಗ ಅರ್ಥವಾಗುತ್ತಿದೆ. ಲೈಟ್‌ ಬಾಯ್‌ಗೆ 500 ಕೊಡಲು ಒದ್ದಾಡುತ್ತೇವೆ. ಆದರೆ ಕೆಲವು ವಿತರಕರು ಮಾತ್ರ ಕೋಟ್ಯಂತರ ಹಣ ಮಾಡಿಕೊಳ್ಳುತ್ತಾರೆ' ಎಂದರು ದರ್ಶನ್.

More from Filmibeat

English summary
Darshan said producers who wants to make movie with him should learn how to distribute movies correctly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X