'ಗಜ’ ಚಿತ್ರದಲ್ಲಿ ಅಭಿನಯಿಸಿದ ನೆನಪು ಸದಾ ನನ್ನೊಂದಿಗೆ: ನಟ ದರ್ಶನ್ ಸಂತಾಪ
Recommended Video
ಹಿರಿಯ ರಂಗಕರ್ಮಿ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಗುರುವಾರ(ಮೇ-2) ಬೆಳಗ್ಗೆ ವಿಧಿವಶರಾಗಿದ್ದಾರೆ. 'ಲಂಚಾವತಾರ' ಬಯಲು ಮಾಡಿದ್ದ ಹಿರಿಯ ರಂಗಭೂಮಿ ಕಲಾವಿದನ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ನಾಟಕಗಳ ಜೊತೆಗೆ ಸಿನಿಮಾ ರಂಗಲ್ಲೂ ಖ್ಯಾತಿ ಗಳಿಸಿದ್ದ ಹಿರಣ್ಣಯ್ಯ 30ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಿರಿಯ ರಂಗ ಕರ್ಮಿಯ ಅಗಲಿಕೆಗೆ ಚಾಲೆಂಗ್ ಸ್ಟಾರ್ ದರ್ಶನ್ ಸಂತಾಪ ಸೂಚಿಸಿದ್ದಾರೆ. ಹಿರಣ್ಣಯ್ಯ ದರ್ಶನ್ ಅಭಿನಯದ ಬ್ಲಾಕ್ ಬಸ್ಟರ್ 'ಗಜ' ಚಿತ್ರದಲ್ಲಿ ಅಭಿನಯಿಸಿದ್ದರು. ದರ್ಶನ್ ತಾತನ ಪಾತ್ರದಲ್ಲಿ ಹಿರಣ್ಣಯ್ಯ ಮಿಂಚಿದ್ದರು. ಚಿತ್ರದಲ್ಲಿ ಹಿರಣ್ಣಯ್ಯ ಮತ್ತು ದರ್ಶನ್ ಅವರ ತಾತ-ಮೊಮ್ಮಗನ ಕಾಂಬಿನೇಶನ್ ಚಿತ್ರರಸಿಕರ ಮನಗೆದ್ದಿದ್ದು.

ಹಿರಣ್ಣಯ್ಯ ಜೊತೆಗಿನ 'ಗಜ' ಚಿತ್ರದ ನೆನಪನ್ನು ಹಂಚಿಕೊಳ್ಳುವ ಮೂಲಕ ದರ್ಶನ್ ಹಿರಣ್ಣಯ್ಯ ಅವರ ಜೊತೆಗಿನ ನೆನಪು ಸದಾ ನನ್ನೊಂದಿಗೆ ಇರುತ್ತೆ ಎಂದು ಹೇಳಿದ್ದಾರೆ. "ಕನ್ನಡ ರಂಗಭೂಮಿಯ ಹಿರಿಯ, ಪ್ರಸಿದ್ಧ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ರವರು ಇಂದು ವಿಧಿವಶರಾಗಿದ್ದಾರೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರೊಡನೆ 'ಗಜ' ಚಿತ್ರದಲ್ಲಿ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗಿರುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಚಿತ್ರರಂಗದ ಅನೇಕ ಗಣ್ಯರು ಹಿರಿಯ ರಂಗಕರ್ಮಿಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಕಿಚ್ಚ ಸುದೀಪ್, ಜಗ್ಗೇಶ್ ಸೇರಿದಂತೆ ಅನೇಕರು ನಟರು ಸಂತಾಪ ಸೂಚಿಸಿದ್ದಾರೆ. ಹಿರಣ್ಣಯ್ಯ ಅವರು ಲಂಚ ಸಾಮ್ರಾಜ್ಯ, ನಂ.73 ಶಾಂತಿನಿವಾಸ, ಗಜ ಸೇರಿದಂತೆ 30ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











