ಅಂಬರೀಶ್ ಕೇಳಿದ್ದ ಈ ವಸ್ತುವನ್ನ ಕೊನೆಗೂ ದರ್ಶನ್ ತಂದುಕೊಡಲು ಆಗಲಿಲ್ಲ

Recommended Video

Yajamana Movie : ಇವರ ಪಾಲಿಗೆ ರಿಯಲ್ ಯಜಮಾನ ಯಾರು ಎಂದು ಬಯಲು ಮಾಡಿದ ದರ್ಶನ್ | FILMIBEAT KANNADA

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ದರ್ಶನ್ ನಡುವೆ ಬಾಂಧವ್ಯ ಎಂತಹದ್ದು ಎಂಬುದು ಗೊತ್ತಿರುವ ವಿಚಾರ. ಯಜಮಾನ ಸಿನಿಮಾ ರಿಲೀಸ್ ಆಗ್ತಿರುವ ವೇಳೆಯಲ್ಲಿ ಅಂಬಿಯಿಲ್ಲ ಎಂಬ ಬೇಸರ ದರ್ಶನ್ ಅವರನ್ನ ಕಾಡಿದೆ.

ಯಜಮಾನ ಸುದ್ದಿಗೋಷ್ಠಿಯಲ್ಲಿ ಅಂಬಿ ಅಪ್ಪಾಜಿಯನ್ನ ನೆನಪಿಸಿಕೊಂಡು ದರ್ಶನ್, ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದರು. ಇದೇ ವೇಳೆ ಮಾತನಾಡಿದ ದಾಸ, ಅಂಬಿ ಕೊನೆಯದಾಗಿ ಒಂದು ವಸ್ತು ಕೇಳಿದ್ರು. ಅದನ್ನ ತಂದುಕೊಡೋದಕ್ಕೆ ಆಗಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ರು.

Darshan could not give last gift to ambarish

ಹೌದು, ಅಂಬರೀಶ್ ಅವರು ಸಾಯುವ ಮುನ್ನ ದರ್ಶನ್ ಯಜಮಾನ ಚಿತ್ರದ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಿದ್ದರು. ವಿದೇಶಕ್ಕೆ ಹೋಗುವುದಕ್ಕೆ ಮುಂಚೆ ಫೋನ್ ನಲ್ಲಿ ಮಾತನಾಡಿದ್ದ ಅಂಬಿ ''ನನಗೆ ಏನು ತರ್ತೀಯಾ ಎಂದು ಕೇಳಿದ್ದರಂತೆ, ಅದಕ್ಕೆ ದರ್ಶನ್ ಅವರು ನೀವು ಏನಾದರೂ ಬೇಕು ಕೇಳಿ ತಂದು ಕೊಡ್ತೀನಿ ಅಂದ್ರಂತೆ. ಅದಕ್ಕೆ ಮತ್ತೆ ಕೇಳಿದ ಅಂಬಿ 'ಸರಿ ಒಂದು ವಾಚ್ ತಗೊಂಡು ಬಾ' ಎಂದರಂತೆ. ಸರಿ, ಭಾರತಕ್ಕೆ ವಾಪಸ್ ಬಂದ್ಮೇಲೆ ನಿಮಗೆ ಯಾವ ವಾಚ್ ಬೇಕೋ ಅದನ್ನ ತಗೊಂಡು ಬರ್ತೀನಿ'' ಎಂದು ಹೇಳಿ ಹೋಗಿದ್ದರಂತೆ.

ದುರಾದೃಷ್ಟವಶಾತ್ ಅಂಬಿಯ ಕೊನೆಯ ಆಸೆಯೊಂದನ್ನ ದರ್ಶನ್ ಈಡೇರಿಸಲು ಸಾಧ್ಯವಾಗಲಿಲ್ಲ. ಪ್ರೀತಿಯಿಂದ ವಾಚ್ ತಂದುಕೊಡಬೇಕಿದ್ದ ದಾಸ, ಅಂಬಿ ಅಪ್ಪಾಯಿ ಸಾವಿನ ಸುದ್ದಿ ಕೇಳಿ ಓಡೋಡಿ ಬರಬೇಕಾಯಿತು.

ಮೊದಲನಿಂದಲೇ ದರ್ಶನ್ ಅಂದ್ರೆ ನನ್ನ ದೊಡ್ಮಗ ಎಂದು ಅಂಬಿ ಹೇಳುತ್ತಿದ್ದರು. ಸುಮಲತಾ ಕೂಡ ದರ್ಶನ್ ನಮ್ಮ ಮನೆ ಮಗ ಎಂದು ಹೇಳ್ತಾರೆ. ಅಭಿಷೇಕ್ ಕೂಡ ದರ್ಶನ್ ನಮ್ ಬ್ರದರ್ ಅಂತಾರೆ. ಹೀಗೆ, ಅಂಬರೀಶ್ ಕುಟುಂಬದ ಜೊತೆ ಮನೆಮಗ ಎಂಬ ಸಂಬಂಧ ಹೊಂದಿರುವ ದರ್ಶನ್ ಗೆ ''ಅಂಬರೀಶ್ ಅವರೇ ನಿಜವಾದ ಯಜಮಾನ'' ಆಗಿದ್ದರು ಎನ್ನುವುದು ಕೂಡ ವಿಶೇಷ.

More from Filmibeat

English summary
Kannada actor darshan could not give last gift to rebel star ambarish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X