ಸುದೀಪ್ ಬಗ್ಗೆ ಕೇಳಿದ್ದಕ್ಕೆ ಫುಲ್ ಗರಂ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್

Recommended Video

Kurukshetra Movie: ಸುದೀಪ್ ಬಗ್ಗೆ ಕೇಳಿದ್ದಕ್ಕೆ ಫುಲ್ ಗರಂ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದು ಕಾಲದ ಕುಚುಕುಗಳು. ಸ್ಯಾಂಡಲ್ ವುಡ್ ನಲ್ಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಸ್ನೇಹ ಹೇಗಿತ್ತೊ, ಹಾಗೆ ದರ್ಶನ್ ಮತ್ತು ಸುದೀಪ್ ಎಂದು ಅಭಿಮಾನಿಗಳು ಹೇಳುತ್ತಿದ್ದರು.

ಅಭಿಮಾನಿಗಳ ಮಾತಿನಂತೆ ಅಂದು ಇಬ್ಬರ ಸ್ನೇಹ ಕೂಡ ಹಾಗೆ ಇತ್ತು. ಆದ್ರೆ ದರ್ಶನ್ ದಿಢೀರನೆ "ಸುದೀಪ್ ನಾನು ಸ್ನೇಹಿತರಲ್ಲ" ಎಂದು ಹೇಳಿ ಸುದೀಪ್ ಜೊತೆಗಿನ ಸ್ನೇಹವನ್ನು ಕಡಿದುಕೊಂಡಿದ್ದರು. ಆ ನಂತರ ದರ್ಶನ್ ಎಲ್ಲಿಯೂ ಸುದೀಪ್ ಬಗ್ಗೆ ಮಾತನಾಡಿರಲಿಲ್ಲ.

ಕಿಚ್ಚ ಮಾತ್ರ "ಆತ ನನ್ನ ಗೆಳೆಯನೆ, ನನ್ನ ಹೃದಯಲ್ಲೆ ಇರ್ತಾನೆ" ಅಂತ ಹೇಳಿಕೊಳ್ಳುತ್ತಾರೆ. ಈ ಬಗ್ಗೆ ಮಾಧ್ಯಮದವರು ದರ್ಶನ್ ಕೇಳಿದಾಗ ಫುಲ್ ಗರಂ ಆಗಿದ್ದಾರೆ.

ದರ್ಶನ್ ಗೆ ಮಾಧ್ಯಮದವರ ಪ್ರಶ್ನೆ

ದರ್ಶನ್ ಗೆ ಮಾಧ್ಯಮದವರ ಪ್ರಶ್ನೆ

ಸುದೀಪ್ ಜೊತೆಗಿನ ಸ್ನೇಹದ ಬಗ್ಗೆ ಮಾಧ್ಯಮದವರು ದರ್ಶನ್ ಬಳಿ ಪ್ರಶ್ನೆ ಕೇಳಿದ್ದಾರೆ. "ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಮತ್ತು ಸುದೀಪ್ ಇಬ್ಬರನ್ನು ಅಭಿಮಾನಿಗಳು ಅಂಬರೀಶ್ ಮತ್ತು ವಿಷ್ಣುವರ್ಧನ್ ಎಂದು ಹೇಳುತ್ತಾರೆ. ನಿಮ್ಮ ಬಗ್ಗೆ ಸುದೀಪ್ ಬಳಿ ಕೇಳಿದ್ರೆ ದರ್ಶನ್ ಯಾವಾಗಲು ನನ್ನ ಹೃದಯದಲ್ಲಿ ಇರ್ತಾರೆ ಎಂದು ಹೇಳುತ್ತಾರೆ. ಇದರಿಂದ ಅಭಿಮಾನಿಗಳು ಯಾವಾಗಲು ಸುದೀಪ್ ಅವರನ್ನು ಯಾಕೆ ಕೇಳುತ್ತೀರಾ? ದರ್ಶನ್ ಬಳಿಯೂ ಕೇಳಿ ಎಂದು ಹೇಳುತ್ತಾರೆ. ಸುದೀಪ್ ಸ್ನೇಹದ ಬಗ್ಗೆ ನೀವು ಏನು ಹೇಳ್ತೀರಾ?" ಎಂದು ದರ್ಶನ್ ಗೆ ಪ್ರಶ್ನೆ ಮಾಡಿದ್ದಾರೆ.

ದರ್ಶನ್ ಪ್ರತಿಕ್ರಿಯೆ

ದರ್ಶನ್ ಪ್ರತಿಕ್ರಿಯೆ

ಸುದೀಪ್ ಬಗ್ಗೆ ಕೇಳಿದ್ದಕ್ಕೆ ದರ್ಶನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನೋಡಿ ಒಂದು ಹೇಳ್ತೀನಿ, ಅಂತಾನೆ ಮಾತು ಆರಂಭಿಸಿದ ದರ್ಶನ್, "ಇನ್ಮೇಲೆ ದರ್ಶನ್ ಬೆಳಗ್ಗೆ ಎಷ್ಟೊತ್ತಿಗೆ ಎದ್ದೇಳಬೇಕು, ಏನೇನು ತಿನ್ನಬೇಕು, ಯಾರ ಫೋನ್ ಎತ್ತಬೇಕು, ಯಾರ ಫೋನ್ ಎತ್ತಬಾರದು, ಯಾರ ಜೊತೆ ಫ್ರೆಂಡ್ ಶಿಫ್ ಮಾಡಬೇಕು ಮಾಡಬಾರದು. ರಾತ್ರಿ ಅವನ ಹೆಂಡತಿ ಜೊತೆ ಮಲಗಬೇಕಾ? ಮಲಗಬಾರ್ದ ಎನ್ನುವುದನ್ನು ಮಾಧ್ಯಮದವರು ಡಿಸೈಡ್ ಮಾಡ್ತೀರಾ? ಅದು ನನ್ನ ವೈಯಕ್ತಿಕ, ನನಗೆ ಗೊತ್ತು" ಎಂದು ಪ್ರತಿಕ್ರಿಯೆ ನೀಡಿ ಹೊರಟುಹೋಗಿದ್ದಾರೆ.

ಕುರುಕ್ಷೇತ್ರ ಮಾಧ್ಯಮಗೋಷ್ಠಿ

ಕುರುಕ್ಷೇತ್ರ ಮಾಧ್ಯಮಗೋಷ್ಠಿ

ಬಹು ನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಮಾಧ್ಯಮದ ಮುಂದೆ ಹಾಜರಾಗಿತ್ತು. ಚಿತ್ರ ಬಿಡುಗಡೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದೆ ಚಿತ್ರತಂಡ. ಇದೆ ಪ್ರೆಸ್ ಮೀಟ್ ನಲ್ಲಿ ಮಾಧ್ಯಮದವರು ಸುದೀಪ್ ಬಗ್ಗೆ ಕೇಳಿದ್ದಕ್ಕೆ ದರ್ಶನ್ ಕೆಂಡಾಮಂಡಲ ಆಗಿದ್ದಾರೆ.

ದರ್ಶನ್ ಬಗ್ಗೆ ಸುದೀಪ್ ಹೇಳೋದೇನು?

ದರ್ಶನ್ ಬಗ್ಗೆ ಸುದೀಪ್ ಹೇಳೋದೇನು?

ಸುದೀಪ್ ಮನೆಯಲ್ಲಿ ಇವತ್ತು ಸಹ ದರ್ಶನ್ ಮತ್ತು ಸುದೀಪ್ ಇಬ್ಬರು ಹೆಗಲ ಮೇಲೆ ಕೈಹಾಕಿಕೊಂಡಿರುವ ಪೋಟೋ ಇದೆ. ಇತ್ತೀಚಿಗೆ ದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್ "ಇದು ನಾನು. ಯಾರಿಗಾದ್ರು ಒಂದು ಸ್ಥಾನ ನೀಡಿದ ಮೇಲೆ ಅದನ್ನು ಅಷ್ಟು ಬೇಗ ಕಿತ್ತಾಕಲಿಕ್ಕೆ ಬರಲ್ಲ. ಆ ಜಾಗವನ್ನು ಸಾಯೊವರೆಗೂ ಕೊಟ್ಟಿರುತ್ತೇನೆ. ನನ್ನ ಬಾಯಲ್ಲಿ ಅವರ ಹೆಸರು ಬರುತ್ತೆ. ಆದ್ರೆ ಅಲ್ಲಿಂದ ನನ್ನ ಹೆಸರು ಕೇಳಲಿಕ್ಕೆ ಸಾಧ್ಯನೆ ಇಲ್ಲ. ಸ್ನೇಹ ಎನ್ನುವುದು ಒನ್ ವೇ ಅಲ್ಲ. ಅವರು ಯಾವಾಗಲು ನನ್ನ ಹೃದಯದಲ್ಲೆ ಇರ್ತಾರೆ ಎಂದು ಹೇಳಿದ್ದರು. ಸ್ನೇಹಿತ ದರ್ಶನ ಬಗ್ಗೆ ಯಾವಾಗಲು ಪ್ರೀತಿಯಿಂದ ಮಾತನಾಡುತ್ತಾರೆ ಸುದೀಪ್.

More from Filmibeat

English summary
Kannada actor Darshan Darshan was angry about questioned about his friendship with Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X