twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಮಾತ್ರವಲ್ಲ ಇನ್ನು ಹಲವು ನಟರು ರಾಜಕೀಯಕ್ಕೆ ಬರ್ತಾರಂತೆ.!

    By Bharath Kumar
    |

    ಕನ್ನಡ ಸಿನಿಮಾ ತಾರೆಯರು ರಾಜಕೀಯ ರಂಗದಲ್ಲಿ ತೊಡಗಿಕೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ರೆಬೆಲ್ ಸ್ಟಾರ್ ಅಂಬರೀಶ್, ನವರಸ ನಾಯಕ ಜಗ್ಗೇಶ್, ನಟಿ ಉಮಾಶ್ರೀ, ಜಯಮಾಲ, ತಾರಾ, ರಮ್ಯಾ, ಸೇರಿದಂತೆ ಹಲವು ನಟ-ನಟಿಯರು ರಾಜಕೀಯದಲ್ಲಿ ಇದ್ದಾರೆ.

    ಇತ್ತೀಚೆಗಷ್ಟೇ, ರಿಯಲ್ ಸ್ಟಾರ್ ಉಪೇಂದ್ರ 'ಪ್ರಜಾಕೀಯ' ಎಂಬ ಸ್ವತಂತ್ರ ಪಕ್ಷವನ್ನ ಸ್ಥಾಪಿಸಿ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. ಅದರ ಬೆನ್ನಲ್ಲೆ ಈಗ ಮತ್ತಷ್ಟು ಸ್ಟಾರ್ ನಟರು ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

    ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ರೆ, ದರ್ಶನ್ ಹಾಗೂ ಮತ್ಯಾವ ನಟರು ಹೆಸರುಗಳು ರಾಜಕೀಯದಲ್ಲಿ ಕೇಳಿ ಬರುತ್ತಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ....

    'ಕೈ' ಹಿಡಿಯುತ್ತಾರಾ ದರ್ಶನ್?

    'ಕೈ' ಹಿಡಿಯುತ್ತಾರಾ ದರ್ಶನ್?

    ಅವರು, ಇವರು ಹೇಳುತ್ತಿರುವ ಪ್ರಕಾರ ನಟ ದರ್ಶನ್ ಕಾಂಗ್ರೆಸ್ ಪಕ್ಷವನ್ನ ಸೇರಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಇದರ ಬಗ್ಗೆ ದರ್ಶನ್ ಆಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಮಾಹಿತಿ ನೀಡಿಲ್ಲ.

    ರಾಜಕೀಯಕ್ಕೆ ದರ್ಶನ್ 'ಸೈ' ಅಂತಾರ?

    ರಾಜಕೀಯಕ್ಕೆ ದರ್ಶನ್ 'ಸೈ' ಅಂತಾರ?

    ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಇದಕ್ಕು ಮುಂಚೆ ಅಂಬರೀಶ್, ಆನಂದ್ ಅಪ್ಪುಗೋಳ್ ಅವರ ಪರವಾಗಿ ದರ್ಶನ್ ಕ್ಯಾಂಪೈನ್ ಮಾಡಿದ್ದರು. ಹೀಗಾಗಿ, ದರ್ಶನ್ ರಾಜಕೀಯಕ್ಕೆ ಬರೋದು ಖಚಿತ ಎನ್ನಲಾಗುತ್ತಿದೆ. ಆದ್ರೆ, ಅಧಿಕೃತವಾಗಿ ಘೋಷಣೆ ಆಗುವವರೆಗೂ ಇದು ನಂಬಲು ಸಾಧ್ಯವಿಲ್ಲ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಂಥ ಗಾಸಿಪ್ ಗಳೂ ಕೇಳಿ ಬರ್ತಿವೆ.!ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಂಥ ಗಾಸಿಪ್ ಗಳೂ ಕೇಳಿ ಬರ್ತಿವೆ.!

    'ಕಮಲ'ಕ್ಕೆ ದೇವರಾಜ್.!

    'ಕಮಲ'ಕ್ಕೆ ದೇವರಾಜ್.!

    ಕಳೆದ ಕೆಲ ದಿನಗಳಿಂದ ಡೈನಾಮಿಕ್ ಹೀರೋ ದೇವರಾಜ್ ಅವರು ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ನಟಿ ಹಾಗೂ ಪರಿಷತ್ ಸದಸ್ಯೆ ತಾರಾ ಅವರು ದೇವರಾಜ್ ಅವರನ್ನ ಪಕ್ಷಕ್ಕೆ ಕರೆತರುವ ಹಾಡಿಯಲ್ಲಿದ್ದಾರೆ ಎನ್ನಲಾಗಿದೆ. ಇದು ಕೂಡ ಅಧಿಕೃತವಾಗಬೇಕಿದೆ.

    ಯಶ್ ಮೇಲು ಇದೆ ಕಣ್ಣು

    ಯಶ್ ಮೇಲು ಇದೆ ಕಣ್ಣು

    ಇನ್ನು ನಟನೆ ಜೊತೆ ಸ್ವತಂತ್ರವಾಗಿ ಜನಪರ ಕೆಲಸ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮೇಲೆ ಕೂಡ ರಾಜಕಾರಣಿಗಳ ಕಣ್ಣು ಬಿದ್ದಿದೆ. ಯಶ್ ಅವರನ್ನ ಕೂಡ ರಾಜಕೀಯಕ್ಕೆ ಕರೆ ತರುವ ಯೋಚನೆ ಮಾಡುತ್ತಿದ್ದಾರೆ.

    ರಾಜಕೀಯಕ್ಕೆ ಬರ್ತಾರಾ ದರ್ಶನ್: ತಾಯಿ ಮೀನಾ ತೂಗುದೀಪ ಹೇಳಿದ್ದೇನು.?ರಾಜಕೀಯಕ್ಕೆ ಬರ್ತಾರಾ ದರ್ಶನ್: ತಾಯಿ ಮೀನಾ ತೂಗುದೀಪ ಹೇಳಿದ್ದೇನು.?

    'ಪ್ರಜಾಕೀಯ' ಕಟ್ಟಿದ ಉಪೇಂದ್ರ

    'ಪ್ರಜಾಕೀಯ' ಕಟ್ಟಿದ ಉಪೇಂದ್ರ

    ಸಿನಿಮಾಗಳಲ್ಲಿ ಸದಾ ಡಿಫ್ರೆಂಟ್ ಎನಿಸಿಕೊಂಡಿದ್ದ ಉಪೇಂದ್ರ ಅವರು ಪ್ರಜಾನೀತಿ, ಪ್ರಜಾಕೀಯ, ಪ್ರಜಾಕಾರಣ ಎಂದು ಹೊಸ ಪಕ್ಷವನ್ನ ಕಟ್ಟಿದ್ದಾರೆ. ಈ ಪಕ್ಷಕ್ಕೆ ಹಲವು ಸಿನಿಮಾ ತಾರೆಯರು ಸೇರಿದಂತೆ ರಾಜಕೀಯ ಗಣ್ಯರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

    'ರಾಜಕೀಯ'ದಲ್ಲಿ ಶಿವಣ್ಣ, ಚೇತನ್ ಹೆಸರು ಇದೆ

    'ರಾಜಕೀಯ'ದಲ್ಲಿ ಶಿವಣ್ಣ, ಚೇತನ್ ಹೆಸರು ಇದೆ

    ಇನ್ನುಳಿದಂತೆ ಶಿವರಾಜ್ ಕುಮಾರ್, ಆ ದಿನಗಳು ಖ್ಯಾತಿಯ ಚೇತನ್, ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೆಸರುಗಳು ಕೂಡ ರಾಜಕೀಯ ರಂಗದಲ್ಲಿ ಚರ್ಚೆ ಆಗುತ್ತಿದೆ. ಆದ್ರೆ, ಯಾವ ಯಾವ ನಟರು ಸಿನಿಮಾ ಕ್ಷೇತ್ರದಿಂದ ಬಣ್ಣದ ಲೋಕಕ್ಕೆ ಜಿಗಿಯುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    ಮಾಧ್ಯಮದವರು 'ರಾಜಕೀಯ'ದ ಪ್ರಶ್ನೆ ಕೇಳುವ ಮುನ್ನವೇ ಹೊರಟು ಹೋದ ದರ್ಶನ್ಮಾಧ್ಯಮದವರು 'ರಾಜಕೀಯ'ದ ಪ್ರಶ್ನೆ ಕೇಳುವ ಮುನ್ನವೇ ಹೊರಟು ಹೋದ ದರ್ಶನ್

    English summary
    According to grapevine, Darshan, Devraj and Yash also to enter politics.
    Thursday, August 31, 2017, 15:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X