For Quick Alerts
  ALLOW NOTIFICATIONS  
  For Daily Alerts

  ಬಾಗಲಕೋಟೆಯಲ್ಲಿ ದರ್ಶನ್ ಗೆ ನೆನಪಾದರು ಬಿ ಸಿ ಪಾಟೀಲ್

  By Pavithra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣ ಮುಗಿಸಿ ಕೊಂಚ ಬಿಡುವಾಗಿದ್ದಾರೆ. ಹೊಸ ಚಿತ್ರದ ಮಹೂರ್ತ ಇತ್ತೀಚಿಗಷ್ಟೇ ನಡದಿದ್ದು ಸಿನಿಮಾತಂಡ ಶೂಟಿಂಗ್ ಗಾಗಿ ಲೊಕೇಷನ್ ಹುಡುಕಾಟದಲ್ಲಿ ಬ್ಯುಸಿ ಆಗಿದೆ.

  ಬಿಡುವಿನ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರು ಹಾಗೂ ಅವರ ಫಾರ್ಮ್ ಹೌಸ್ ನಲ್ಲಿ ಕೆಲ ಸಮಯ ಕಾಲ ಕಳೆದಿದ್ದಾರೆ. ಅದಲ್ಲದೆ ಇತ್ತಿಚಿಗಷ್ಟೇ ನಡೆದ ಬಾಗಲಕೋಟೆಯಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವದಲ್ಲಿ ಭಾಗಿ ಆಗಿದ್ದಾರೆ.

  'ಡಿ ಉತ್ಸವ'ಕ್ಕೆ ಅಭಿಮಾನಿಗಳಿಂದ ಶುರುವಾಯ್ತು ದಿನಗಣನೆ'ಡಿ ಉತ್ಸವ'ಕ್ಕೆ ಅಭಿಮಾನಿಗಳಿಂದ ಶುರುವಾಯ್ತು ದಿನಗಣನೆ

  ಬಾಗಲಕೋಟೆಯ ಇಳಕಲ್ಲಿನ ಸಮಾರಂಭದಲ್ಲಿ ಮುಖ್ಯಅಥಿತಿಯಾಗಿ ಭೇಟಿ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮದ ವೇದಿಕೆಯ ಮೇಲೆ ನಟ ಬಿಸಿ ಪಾಟೀಲ್ ಅವರನ್ನ ನೆನಪು ಮಾಡಿಕೊಂಡಿದ್ದಾರೆ. ಬಿ ಸಿ ಪಾಟೀಲ್ ಅವರನ್ನ ದರ್ಶನ್ ನೆನಪಿಸಿಕೊಳ್ಳು ಕಾರಣವೇನು? ಡಿ ಬಾಸ್ ಹಾಗೂ ಬಿ ಸಿ ಪಾಟೀಲ್ ಅವರಿಗೆ ಏನು ಸಂಬಂಧ ಇವೆಲ್ಲವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

  ಯುವಕರ ಉತ್ಸವದಲ್ಲಿ ಡಿ ಬಾಸ್

  ಯುವಕರ ಉತ್ಸವದಲ್ಲಿ ಡಿ ಬಾಸ್

  ನಟ ದರ್ಶನ್ ಇತ್ತಿಚಿಗಷ್ಟೇ ಬಾಗಲಕೋಟೆಯ ಇಳಕಲ್ಲಿನ ರಾಷ್ಟ್ರೀಯ ಯುವ ಉತ್ಸವದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಇಂದಿನ ಯುವಕರ ಬಗ್ಗೆ ಮತ್ತು ಸಾಧನೆಗಳ ಬಗ್ಗೆ ಮಾತನಾಡಿದ್ದರು.

  ಬಿ ಸಿ ಪಾಟೀಲ್ ನೆನಪಿಸಿದ ದರ್ಶನ್

  ಬಿ ಸಿ ಪಾಟೀಲ್ ನೆನಪಿಸಿದ ದರ್ಶನ್

  ಸಮಾರಂಭದ ವೇದಿಕೆಯ ಮೇಲೆ ಹೋಗುತ್ತಿದ್ದಂತೆ ನಟ ದರ್ಶನ್ ನಟ ಬಿ ಸಿ ಪಾಟೀಲ್ ಅವರನ್ನ ನೆನಪು ಮಾಡಿಕೊಂಡರು. ಬಿ ಸಿ ಪಾಟೀಲ್ ಅವರ ಸಿನಿಮಾದಲ್ಲಿ ಇಳಕಲ್ ಸೀರೆ ಬಗ್ಗೆ ಹಾಡಿದೆ. ಇಲ್ಲಿ ನಿಮ್ಮನ್ನೆಲ್ಲಾ ನೋಡಿದಾಗ ನನಗೆ ಅವರು ನೆನಪಾಗುತ್ತಾರೆ ಎಂದರು.

  ಸಮಾರಂಭದಲ್ಲಿ ತಾರಾ ಮೆರುಗು

  ಸಮಾರಂಭದಲ್ಲಿ ತಾರಾ ಮೆರುಗು

  ರಾಷ್ಟ್ರೀಯ ಯುವ ಉತ್ಸವದಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆಯಲ್ಲಿ ನಟ ಧನಂಜಯ್ ಹಾಗೂ ಯಶಸ್ ಸೂರ್ಯ ಕೂಡ ಭಾಗಿ ಆಗಿದ್ದರು. ಸಾಕಷ್ಟು ದಿನಗಳ ನಂತರ ದರ್ಶನ್ ಹಾಗೂ ಧನಂಜಯ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

  ಅಭಿಮಾನಿಗಳನ್ನ ಭೇಟಿ ಮಾಡಿದ ದರ್ಶನ್

  ಅಭಿಮಾನಿಗಳನ್ನ ಭೇಟಿ ಮಾಡಿದ ದರ್ಶನ್

  ಬಾಗಲಕೋಟೆಯಿಂದ ಬೆಂಗಳೂರಿಗೆ ಬರುವ ದಾರಿ ಮದ್ಯೆದಲ್ಲಿ ದರ್ಶನ್ ,ಧನಂಜಯ ಹಾಗೂ ಯಶಸ್ ಸೂರ್ಯ ಅನೇಕ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ. ನೆಚ್ಚಿನ ಸ್ಟಾರ್ ಕಂಡು ಅಭಿಮಾನಿಗಳು ಜೊತೆಯಲ್ಲಿ ನಿಂತು ಫೋಟೋ ತೆಗೆದುಕೊಂಡಿದ್ದಾರೆ.

  English summary
  Kannada actor Darshan, Dhananjaya and Yashas Surya was attend National Youth Festival held in Bagalkot. Darshan remembered actor B Patil in the program

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X