''ದರ್ಶನ್ ಕೈ ಮಾಡಿಲ್ಲ, ನಾನು ಎದುರಿಗೇ ಕೂತಿದ್ದೆ'' ಅಂತಾರೆ ನಿರ್ಮಾಪಕಿ ಶೈಲಜಾ ನಾಗ್.!

By Harshitha

'ದಾಸ' ಅಂತ ಪ್ರೀತಿಯಿಂದ ತಮ್ಮ ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ದರ್ಶನ್ ಮೇಲೆ ಇಂದು ಗಂಭೀರ ಆರೋಪ ಕೇಳಿಬಂದಿದೆ. ಜ್ಯೂನಿಯರ್ ಆರ್ಟಿಸ್ಟ್ ಶಿವಶಂಕರ್ ಕಪಾಳಕ್ಕೆ ನಟ ದರ್ಶನ್ ಹೊಡೆದಿದ್ದಾರೆ ಎನ್ನಲಾಗಿದೆ. ಹಾಗಂತ ಸ್ವತಃ ಶಿವಶಂಕರ್ ಮಾಧ್ಯಮಗಳ ಮುಂದೆ ನೇರ ಆರೋಪ ಮಾಡಿದ್ದಾರೆ.

ಶಿವಶಂಕರ್ ಪರವಾಗಿ ನಿಂತ ನೂರಾರು ಸಹ ಕಲಾವಿದರು 'ಯಜಮಾನ' ಚಿತ್ರದ ಚಿತ್ರೀಕರಣ ಸ್ಥಳದಿಂದ ಹೊರಬಂದು ತಾವರೆಕೆರೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ದರ್ಶನ್ ವಿರುದ್ಧ ದೂರು ದಾಖಲಿಸಲು ಸಹ ಕಲಾವಿದರು ಮುಂದಾಗಿದ್ದಾರೆ.

ದರ್ಶನ್ ಬಗ್ಗೆ ಕೇಳಿಬರುತ್ತಿರುವ ಆರೋಪ ನಿಜವೇ ಅಂತ ನಿರ್ಮಾಪಕಿ ಶೈಲಜಾ ನಾಗ್ ಅವರನ್ನ ಕೇಳಿದರೆ... ಅವರು ಬೇರೆಯದ್ದೇ ಕಥೆ ಹೇಳ್ತಾರೆ. ಮಾಧ್ಯಮಗಳಿಗೆ ನಿರ್ಮಾಪಕಿ ಶೈಲಜಾ ನಾಗ್ ನೀಡಿರುವ ಸ್ಪಷ್ಟನೆ ಇಲ್ಲಿದೆ, ಓದಿರಿ...

ಗಲಾಟೆ ನಡೆದಿಲ್ಲ.!

ಗಲಾಟೆ ನಡೆದಿಲ್ಲ.!

''ಗಲಾಟೆ ನಡೆದಿಲ್ಲ. ನಾವು ಖಾಸಗಿ ಸ್ಟುಡಿಯೋದಲ್ಲಿ 'ಯಜಮಾನ' ಚಿತ್ರದ ಶೂಟಿಂಗ್ ಮಾಡುತ್ತಿದ್ದೀವಿ. ಸಾಂಗ್ ಶೂಟಿಂಗ್ ನಡೆಯುತ್ತಿದೆ. ಜೂನಿಯರ್ ಆರ್ಟಿಸ್ಟ್ ಒಬ್ಬರು ಮೊಬೈಲ್ ನಲ್ಲಿ ಎರಡು ಬಾರಿ ಶೂಟ್ ಮಾಡಿದ್ದಾರೆ. ''ನಿಮ್ಮನ್ನ ದುಡ್ಡು ಕೊಟ್ಟು ಕರೆಯಿಸಿಕೊಂಡಿದ್ದೀವಿ. ಹೀಗೆಲ್ಲಾ ಮಾಡಬೇಡಿ'' ಅಂತ ಎರಡು ಬಾರಿ ಆ ಸಹ ಕಲಾವಿದನಿಗೆ ಹೇಳಿದ್ವಿ. ಜೂನಿಯರ್ ಆರ್ಟಿಸ್ಟ್ ಸಪ್ಲೈಯರ್ ಗೂ ವಿಷಯ ತಿಳಿಸಬೇಕಿತ್ತು. ತಿಳಿಸಿದ್ವಿ... ಮತ್ತೆ ಮತ್ತೆ ಅದೇ ಆಗಿದ್ರಿಂದ ಆಬ್ಜೆಕ್ಟ್ ಮಾಡಬೇಕಾಯ್ತು. ಮಾಡಿದ್ವಿ ಅಷ್ಟೇ'' ಅಂತಾರೆ ನಿರ್ಮಾಪಕಿ ಶೈಲಜಾ ನಾಗ್.

ದರ್ಶನ್ ಹೊಡೆದಿಲ್ಲ.!

ದರ್ಶನ್ ಹೊಡೆದಿಲ್ಲ.!

''ದರ್ಶನ್ ಹಾಗೆಲ್ಲ ಖಂಡಿತ ಮಾಡಿಲ್ಲ. ದರ್ಶನ್ ಹೊಡೆದಿಲ್ಲ. ''ಮೊಬೈಲ್ ನ ಇಳಿಸು.. ಎರಡು ಬಾರಿ ಈಗಾಗಲೇ ಹೇಳಿದ್ದೇವೆ'' ಅಂತ ಹೇಳಿದ್ರು ಅಷ್ಟೇ. ಅವರ ಮೇಲೆ ದರ್ಶನ್ ಕೈ ಮಾಡಿಲ್ಲ. ನಾನು ನಿರ್ಮಾಪಕಿ ಆಗಿ ಎದುರಿಗೇ ಕೂತಿದ್ದೆ'' - ಶೈಲಜಾ ನಾಗ್, 'ಯಜಮಾನ' ನಿರ್ಮಾಪಕಿ

ಪ್ರಶ್ನಿಸುವುದೇ ತಪ್ಪಾ.?

ಪ್ರಶ್ನಿಸುವುದೇ ತಪ್ಪಾ.?

''ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ಮಾಡುತ್ತೇವೆ. ಈಗಲೇ ಎಲ್ಲರೂ ವಾಟ್ಸ್ ಆಪ್ ನಲ್ಲಿ ನೋಡಿಕೊಂಡು ಬಿಟ್ಟರೆ ಹೇಗೆ.? ನಾವು ಸಿನಿಮಾಗಾಗಿ ಕೋಟ್ಯಾಂತರ ರೂಪಾಯಿ ಸುರಿದಿದ್ದೇವೆ. ಪ್ರಶ್ನೆಸುವುದೇ ತಪ್ಪು ಅಂದ್ರೆ ತಪ್ಪಾಗುತ್ತೆ'' - ಶೈಲಜಾ ನಾಗ್, 'ಯಜಮಾನ' ನಿರ್ಮಾಪಕಿ

ನಾವೆಲ್ಲರೂ ಪ್ರಶ್ನೆ ಮಾಡಿದ್ವಿ

ನಾವೆಲ್ಲರೂ ಪ್ರಶ್ನೆ ಮಾಡಿದ್ವಿ

''ಈಗಲೂ ಶೂಟಿಂಗ್ ಮಾಡುತ್ತಿದ್ದೇವೆ. ಎಲ್ಲವೂ ಸಮಾಧಾನವಾಗಿದೆ. ನಾವು ಪಬ್ಲಿಕ್ ಪ್ಲೇಸ್ ನಲ್ಲಿ ಚಿತ್ರೀಕರಣ ಮಾಡುತ್ತಿಲ್ಲ. ಸ್ಟುಡಿಯೋ ಬಾಡಿಗೆ ತಗೊಂಡು, ಸೆಟ್ ಹಾಕಿ, ನಾಲ್ಕು ಗೋಡೆ ಮಧ್ಯೆ ಶೂಟಿಂಗ್ ಮಾಡ್ತಿದ್ದೀವಿ. ಹೀಗಿರುವಾಗ ಮೊಬೈಲ್ ನಲ್ಲಿ ಸೆರೆ ಹಿಡಿದರೆ ಹೇಗೆ.? ಹೀಗಾಗಿ ನಾವೆಲ್ಲರೂ ಪ್ರಶ್ನೆ ಮಾಡಿದ್ವಿ'' - ಶೈಲಜಾ ನಾಗ್, 'ಯಜಮಾನ' ನಿರ್ಮಾಪಕಿ

More from Filmibeat

English summary
''Darshan din't slap Junior Artist'' says 'Yajamana' Producer Shylaja Nag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X