Darshan: ಬ್ರಿಟನ್‌ನಿಂದ ಬೆಂಗಳೂರಿಗೆ ದರ್ಶನ್ ವಾಪಸ್: ಅಭಿಮಾನಿಯ ವಿಡಿಯೋ ವೈರಲ್
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಇತ್ತೀಚೆಗೆ ಯೂರೋಪ್ ಪ್ರವಾಸ ಕೈಗೊಂಡಿದ್ದರು. ಸ್ನೇಹಿತರ ಜೊತೆ ಬಹಳ ಆರಾಮಾಗಿ ಬ್ರಿಟನ್ನಿನ ಸುಂದರ ತಾಣಗಳಲ್ಲಿ ಸುತ್ತಾಡಿದ್ದರು. ಅದರ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇನ್ನು ಅಲ್ಲಿ ಸಿಕ್ಕ ಅಭಿಮಾನಿಗಳ ಜೊತೆಗೂ ದರ್ಶನ್ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಇನ್ನು ದಾಸನ ಬಗ್ಗೆ ಮಹಿಳಾ ಅಭಿಮಾನಿಯೊಬ್ಬರ ವಿಡಿಯೋ ಈಗ ಗಮನ ಸೆಳೆಯುತ್ತಿದೆ.
ಬ್ರಿಟನ್ ಪ್ರವಾಸ ಕೈಗೊಂಡಿದ್ದ ದರ್ಶನ್ ದುಬೈ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆ ದರ್ಶನ್ ದುಬೈನಲ್ಲಿ ಅಭಿಮಾನಿಯೊಬ್ಬರ ಹೊಸ ಕಾರ್ ಏರಿರುವ ವೀಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಆಕೆಯೇ ಮಾತನಾಡಿದ್ದು ದರ್ಶನ್ ಸರಳ, ಸಜ್ಜನಿಕೆ ಹಾಗೂ ಅಭಿಮಾನಿಗಳ ಮೇಲಿನ ದರ್ಶನ್ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ತಾವು ಕೇಳಿದ ಕೂಡಲೇ ದರ್ಶನ್ ನಮ್ಮ ಕಾರ್ ಏರಿದರು ಎಂದು ಆಕೆ ಹೇಳಿದ್ದಾರೆ. ಆಟೋಗ್ರಾಫ್, ಫೋಟೊಗ್ರಾಫ್ ಕೂಡ ಕೊಟ್ಟಿದ್ದಾರೆ.

ಕಳೆದ ಮಂಗಳವಾರ ದರ್ಶನ್ ಯುಕೆ ಫ್ಲೈಟ್ ಏರಿದ್ದರು. ಸಚ್ಚಿದಾನಂದ ಸೇರಿದಂತೆ ಮತ್ತಿಬ್ಬರು ಸ್ನೇಹಿತರು ಸಾಥ್ ನೀಡಿದ್ದರು. ಯುಕೆ ಟವರ್ ಬ್ರಿಡ್ಜ್, ಕಾರ್ನಬಿ ಸೇರಿದಂತೆ ನಾನಾ ಭಾಗದಲ್ಲಿ ಅಡ್ಡಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. 3 ದಿನಗಳ ಹಿಂದೆ ದರ್ಶನ್ ಮರಳಿ ಬಂದಿರುವ ಚಾಲೆಂಜಿಂಗ್ ಸ್ಟಾರ್ ಶೀಘ್ರದಲ್ಲೇ 'ಕಾಟೇರ' ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ಕಳೆದ ವಾರ ದರ್ಶನ್ ಕಾಲಿಗೆ ಪೆಟ್ಟಾಗಿತ್ತು. ನೋವಿನಲ್ಲೇ ಕುಂಟುತ್ತಾ ಆಸ್ಪತ್ರೆಗೆ ಬಂದು ದರ್ಶನ್ ಚಿಕಿತ್ಸೆ ಪಡೆದಿದ್ದರು. ಬಳಿಕ ಚಿತ್ರೀಕರಣಕ್ಕೆ ಸಮಸ್ಯೆ ಆಗಬಾರದು ಎಂದು ಕಾಲು ನೋವಿನ ನಡುವೆಯೂ ಶೆಡ್ಯೂಲ್ ಪೂರ್ಣಗೊಳಿಸಿದ್ದರು. ಬಳಿಕ ಸ್ನೇಹಿತರ ಜೊತೆ ಯುಕೆ ಪ್ರವಾಸ ಕೈಗೊಂಡಿದ್ದರು. ಈ ವರ್ಷ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಇತ್ತೀಚೆಗೆ ಕಿರುತೆರೆಯಲ್ಲಿ ಪ್ರಸಾರವಾಗಿದ್ದ ಸಿನಿಮಾ ಟಿಆರ್‌ಪಿ ರೇಟಿಂಗ್‌ನಲ್ಲಿ 10.24 ಟಿವಿಆರ್ ಸಾಧಿಸಿ ಸದ್ದು ಮಾಡಿತ್ತು. ಅಭಿಮಾನಿಗಳೇ ಈ ಸಿನಿಮಾ ಪ್ರಚಾರ ಮಾಡಿದ್ದರು.

ಇದೀಗ ಮತ್ತೆ ಅಭಿಮಾನಿಗಳು 'ಕಾಟೇರ' ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು ದಸರಾ ವೇಳೆಗೆ ಸಿನಿಮಾ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಕುಮಾರ್ ಗೋವಿಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿ. ಮಾಲಾಶ್ರೀ ಪುತ್ರಿ ರಾಧನಾ ರಾಮ್ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸುತ್ತಿದ್ದಾರೆ.
ಇದೊಂದು ಐತಿಹಾಸಿಕ ಕಥಾಹಂದರದ ಸಿನಿಮಾ ಆಗಿದ್ದು 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕಿದೆ. ಬಹಳ ವಿಭಿನ್ನ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. 'ಕಾಟೇರ' ಚಿತ್ರಕ್ಕೂ ಮುನ್ನ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











