»   » ಅದ್ಧೂರಿ ಸೆಟ್ ನಲ್ಲಿ 'ಜಗ್ಗುದಾದಾ' ದರ್ಶನ್ ಭರ್ಜರಿ ಸ್ಟೆಪ್

ಅದ್ಧೂರಿ ಸೆಟ್ ನಲ್ಲಿ 'ಜಗ್ಗುದಾದಾ' ದರ್ಶನ್ ಭರ್ಜರಿ ಸ್ಟೆಪ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ 'ಜಗ್ಗುದಾದಾ' ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ದರ್ಶನ್ ಅವರ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಅವರು ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ಇತ್ತೀಚೆಗೆ 'ಜಗ್ಗುದಾದಾ' ಚಿತ್ರದ ಟೈಟಲ್ ಸಾಂಗ್ ಅನ್ನು ಬೆಂಗಳೂರಿನ ಯಶವಂತಪುರದ ಆರ್.ಎಂ.ಸಿ ಯಾರ್ಡ್ ನಲ್ಲಿ ಶೂಟಿಂಗ್ ನಡೆಸಲಾಯಿತು. ಬಿಗ್ ಬಜೆಟ್ ನ ಸಿನಿಮಾ ಆಗಿರುವ 'ಜಗ್ಗುದಾದಾ' ಚಿತ್ರದ ಹಾಡಿಗೂ ಕೂಡ ಅಷ್ಟೇ ದೊಡ್ಡ ಮಟ್ಟದ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ.[ವಿವಾದಗಳಿಗೆ ಕುಗ್ಗದೆ ಇಟಲಿಯತ್ತ ಪಯಣ ಬೆಳೆಸಿದ ದರ್ಶನ್]

Darshan during a song sequence for Kannada movie 'Jaggu Dada'

ಟೈಟಲ್ ಸಾಂಗ್ ನ ಸಾಹಿತ್ಯ ಕೂಡ ಖಡಕ್ಕಾಗಿದ್ದು, ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಇಮೇಜ್ ಗೆ ತಕ್ಕಂತೆ ರಚಿಸಲಾಗಿದೆ. 'ದೇ ಕಾಲ್ ಹಿಮ್ ಮಾಸ್, ವಿ ಕಾಲ್ ಹಿಮ್ ಬಾಸ್' ಅನ್ನೋ ಸಾಹಿತ್ಯ ಇರೋ ಹಾಡಿನಲ್ಲಿ ದರ್ಶನ್ ಅವರು ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ಜೋಶ್ ನಲ್ಲಿ ಕುಣಿದಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶಾಲ ಹೃದಯವುಳ್ಳವರಂತೆ]

Darshan during a song sequence for Kannada movie 'Jaggu Dada'

ಇನ್ನೇನು ಚಿತ್ರದ ಹಾಡುಗಳು ಮತ್ತು ಕ್ಲೈಮ್ಯಾಕ್ಸ್ ಮಾತ್ರ ಬಾಕಿ ಉಳಿದಿದ್ದು, ಅವುಗಳನ್ನು ಆದಷ್ಟು ಬೇಗನೇ ಮುಗಿಸಿ ಶೀಘ್ರದಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

English summary
Kannada Actor Challenging Star Darshan during a song sequence for Kannada movie 'Jaggu Dada'. The movie is directed by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada