For Quick Alerts
  ALLOW NOTIFICATIONS  
  For Daily Alerts

  ಉತ್ತರಾಖಂಡದ ಬೀದಿಯಲ್ಲಿ ಕುರುಕಲು ತಿಂಡಿ ಸವಿದ ದರ್ಶನ್.!

  |
  ಉತ್ತರಾಖಂಡದ ಬೀದಿಯಲ್ಲಿ ಕುರುಕಲು ತಿಂಡಿ ಸವಿದ ದರ್ಶನ್ | DARSHAN | JHARKHAND | FILMIBEAT KANNADA

  'ರಾಬರ್ಟ್' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗುತ್ತಿದ್ದ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರೇಕ್ ತೆಗೆದುಕೊಂಡಿದ್ದಾರೆ. ಹೇಳಿ ಕೇಳಿ ದರ್ಶನ್ ಗೆ ಪ್ರಾಣಿ-ಪಕ್ಷಿಗಳು ಅಂದ್ರೆ ಪ್ರಾಣ. ಹೀಗಾಗಿ, ವೈವಿಧ್ಯಮಯ ಪಕ್ಷಿಗಳ ಫೋಟೋಗಳನ್ನು ಸೆರೆಹಿಡಿಯಲು ನಟ ದರ್ಶನ್ ಉತ್ತರಾಖಂಡಕ್ಕೆ ತೆರಳಿದ್ದಾರೆ.

  ಬೆಟ್ಟ, ಗುಡ್ಡ, ನದಿ ಎನ್ನುವುದನ್ನು ಲೆಕ್ಕಿಸದೆ, ಕೊರೆಯುವ ಚಳಿಯಲ್ಲಿ ಉತ್ತರಾಖಂಡದ ಸಾತ್ ತಾಲ್ ಪ್ರಾಂತ್ಯದಲ್ಲಿ ದರ್ಶನ್ ಬೀಡುಬಿಟ್ಟಿದ್ದಾರೆ.

  ಏಳು ಸರೋವರಗಳ ನಾಡು ಸಾತ್ ತಾಲ್ ವಲಸೆ ಹಕ್ಕಿಗಳ ಪಾಲಿಗೆ ಸ್ವರ್ಗ. ಇಲ್ಲಿ ಪಕ್ಷಿಗಳಿಗಾಗಿ ತಾಳ್ಮೆಯಿಂದ ಕಾದು ಕುಳಿತು ಅದ್ಭುತ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ ನಟ ದರ್ಶನ್.

  ಮತ್ತೆ ಕ್ಯಾಮರಾ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿದ ದರ್ಶನ್: ಡಿ ಬಾಸ್ ಈಗ ಎಲ್ಲಿದ್ದಾರೆ?ಮತ್ತೆ ಕ್ಯಾಮರಾ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿದ ದರ್ಶನ್: ಡಿ ಬಾಸ್ ಈಗ ಎಲ್ಲಿದ್ದಾರೆ?

  ಫೋಟೋಗ್ರಾಫಿ ಜೊತೆಗೆ ಉತ್ತರಾಖಂಡವನ್ನು ಒಂದು ರೌಂಡ್ ಹಾಕುತ್ತಿದ್ದಾರೆ ನಟ ದರ್ಶನ್. ಫೋಟೋಗ್ರಾಫರ್ ರಾಹುಲ್ ಶರ್ಮಾ, ಬರ್ಡಿಂಗ್ ಕ್ಯಾಂಪ್ ಗೈಡ್ ಶುಭಂ ಕುಮಾರ್, ಸ್ನೇಹಿತರಾದ ಕಿರಣ್ ಶ್ರೀನಿವಾಸ್, ರಾಜೇಶ್, ಮನು ಅಯ್ಯಪ್ಪ, ಸುನೀಲ್ ಜೊತೆಗೆ ಸಾಮಾನ್ಯರಂತೆ ಉತ್ತರಾಖಂಡದ ಬೀದಿಗಳಲ್ಲಿ ನಟ ದರ್ಶನ್ ಕುರುಕಲು ತಿಂಡಿ ಸವಿದಿದ್ದಾರೆ. ಜೊತೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

  darshan-eating-snacks-in-the-streets-of-uttarakhand

  ಉತ್ತರಾಖಂಡದಲ್ಲಿ ದರ್ಶನ್ ಮತ್ತು ತಂಡದ ಫೋಟೋಗ್ರಫಿ ಅಡ್ವೆಂಚರ್ ಕುರಿತಾದ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

  Read more about: darshan ದರ್ಶನ್
  English summary
  Video of Challenging Star Darshan eating snacks in the streets of Uttarakhand goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X