ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಅಗಲಿ 2 ವರ್ಷಗಳು ಕಳೆದಿವೆ; ದರ್ಶನ್ ಭಾವನಾತ್ಮಕ ಪೋಸ್ಟ್

ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ನಿಧನ ಹೊಂದಿ ಇಂದಿಗೆ (ನವೆಂಬರ್ 24) ಎರಡು ವರ್ಷ ಕಳೆದಿವೆ. ಇಂದು ಅಂಬರೀಶ್ ಅವರ 2ನೇ ವರ್ಷದ ಪುಣ್ಯಸ್ಮರಣೆ. ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ ನವೆಂಬರ್ 24, 2018ರಲ್ಲಿ ನಟ ರೆಬಲ್ ಸ್ಟಾರ್ ಅಂಬರೀಶ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.

Recommended Video

ಅಂಬಿ ಅಪ್ಪಾಜಿಯನ್ನು ನೆನೆದು ಭಾವುಕರಾದ ದರ್ಶನ್ | Ambareesh | Darshan | Filmibeat Kannada

2ನೇ ವರ್ಷದ ಪುಣ್ಯಸ್ಮರಣೆ ದಿನ ಚಿತ್ರರಂಗದ ಗಣ್ಯರು ಅಂಬರೀಶ್ ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದಾರೆ. ಅಂಬರೀಶ್ ಹಿರಿಯಮಗನ ಹಾಗೆ ಇದ್ದ ಪ್ರೀತಿಯ ದರ್ಶನ್, 2ನೇ ವರ್ಷದ ಪುಣ್ಯಸ್ಮರಣೆ ದಿನ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ದರ್ಶನ್, 'ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ ೨ ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ.' ಎಂದು ಬರೆದುಕೊಂಡಿದ್ದಾರೆ.

Darshan Emotional Post on Ambareesh for second year death anniversary

ಜೊತೆಗೆ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿ ದರ್ಶನ್, ಅಂಬರೀಶ ಕೈ ಹಿಡಿದು ಕುಳಿತಿರುವ ಫೋಟೋವನ್ನು ಹೊಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಸಹ ಪ್ರೀತಿಯ ಪತಿಯ ಬಗ್ಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. '2 ವರ್ಷಗಳು. ಮತ್ತೆ ನಿಮ್ಮನ್ನು ನೋಡಬೇಕೆಂಬ ಹಂಬಲದಿಂದ ನಾನು ಕಣ್ಣು ಮುಚ್ಚುತ್ತೇನೆ. ನಾನು ಮತ್ತೆ ನಿಮ್ಮ ಮಾತುಗಳನ್ನು ಕೇಳುವಂತೆ ಕಿವಿ ಮುಚ್ಚುತ್ತೇನೆ. ಆದರೆ ನನ್ನ ಹೃದಯ ಮುಚ್ಚಲು ಸಾಧ್ಯವಿಲ್ಲ'

Darshan Emotional Post on Ambareesh for second year death anniversary

'ನೀವು ಬಿಟ್ಟು ಹೋದ ಪ್ರೀತಿ, ಪರಂಪರೆ, ನನ್ನ ಜೀವನದ ಉಳಿದ ಭಾಗಗಳಲ್ಲಿ ನನ್ನು ಕರೆದೊಯ್ಯುತ್ತದೆೆ. ನಿಮ್ಮ ಒಳ್ಳೆಯತನದ ಹೊಳೆಯುವ ಬೆಳಕು, ಜೀವನದ ಕಷ್ಟದ ಸಮಯದಿಂದ, ನನ್ನ ಕೊನೆಯ ಉಸಿರಿರುವ ವರೆಗೂ ನನ್ನನ್ನು ರಕ್ಷಿಸುತ್ತದೆ. ನಾನು ತೆಗೆದುಕೊಳ್ಳುವ ಪ್ರತಿ ಉಸಿರಿನಲ್ಲಿ ನೀವು ಇರುತ್ತೀರಿ. ನಾನು ನಕ್ಕಾಗ, ಅತ್ತಾಗ, ಎಡವಿ ಬಿದ್ದರೆ ನಿಮ್ಮ ಶಕ್ತಿ ನನ್ನನ್ನು ನೇರವಾಗಿ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಶಾಶ್ವತವಾಗಿ ನನ್ನನ್ನು ರಕ್ಷಿಸುತ್ತದೆ. ಈ ನಾನು ಇರುವುದು ನಾನಲ್ಲ. ನನ್ನ ಮೂಲಕ ನೀವು ಜೀವಿಸುತ್ತಿದ್ದೀರಿ.' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

More from Filmibeat

English summary
Actor Darshan Emotional post on Ambareesh for second year death anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X