For Quick Alerts
  ALLOW NOTIFICATIONS  
  For Daily Alerts

  ಬೈಕ್ ರೈಡ್ ಆಯ್ತು...ಈಗ ಕ್ರಿಕೆಟ್: ಸ್ನೇಹಿತರ ಜೊತೆ ಡಿ-ಬಾಸ್ ಟೈಂ ಪಾಸ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರೀಕರಣ ಬ್ರೇಕ್ ಹಾಕಿದ್ದಾರೆ. ರಾಬರ್ಟ್ ಸಿನಿಮಾ ಸಂಪೂರ್ಣವಾಗಿ ಮುಗಿಸಿರುವ ದಾಸ ಈಗ ಗಂಡುಗಲಿ ಮದಕರಿ ನಾಯಕ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಕೇರಳದಲ್ಲಿ ಒಂದು ಹಂತದ ಚಿತ್ರೀಕರಣ ಮುಗಿದಿದೆ.

  ಲಾಕ್‌ಡೌನ್‌ನಿಂದಾಗಿ ಶೂಟಿಂಗ್‌ಗೆ ಬ್ರೇಕ್ ಹಾಕಲಾಗಿತ್ತು. ಮದಕರಿ ನಾಯಕ ಚಿತ್ರೀಕರಣಕ್ಕೆ ಮತ್ತೆ ಡಿ ಬಾಸ್ ಸಜ್ಜಾಗಿದ್ದು, ಈ ನಡುವೆ ಸ್ನೇಹಿತರ ಜೊತೆ ಒಂದು ಬೈಕ್ ರೈಡ್ ಹೊರಟಿದ್ದಾರೆ.

  ನಿನ್ನೆ ಬೆಂಗಳೂರಿನಿಂದ ಮಡಿಕೇರಿಗೆ ಬೈಕ್ ರೈಡ್ ಹೊರಟ ದರ್ಶನ್, ಇಂದು ರೆಸಾರ್ಟ್‌ವೊಂದರಲ್ಲಿ ಸ್ನೇಹಿತರ ಜೊತೆ ಸೇರಿ ಕ್ರಿಕೆಟ್ ಆಡುವ ಮೂಲಕ ಟೈಂ ಪಾಸ್ ಮಾಡುತ್ತಿದ್ದಾರೆ.

  ದರ್ಶನ್ ಹಾಗೂ ಗೆಳೆಯರು ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ದರ್ಶನ್ ಅವರ ಜೊತೆ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಹಾಸ್ಯ ನಟ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಪ್ರಣಾಮ್ ದೇವರಾಜ್, ಪನ್ನಾಗಭರಣ, ಯಶಸ್ ಸೂರ್ಯ ಸೇರಿದಂತೆ ಗಜಪಡೆ ಸ್ನೇಹಿತರ ಬಳಗ ಸಾಥ್ ನೀಡಿದೆ.

  ಸಿನಿಮಾದಲ್ಲಿ ಇರುವುದು ಎಲ್ಲವೂ ಸತ್ಯ ಅಲ್ಲ ಅಂದ್ರು ರಿಯಲ್ ಲೈಫ್ ಹೀರೊ ಗೋಪಿನಾಥ್ | Filmibeat Kannada

  ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಗಂಡುಗಲಿ ಮದಕರಿ ನಾಯಕ ಸಿನಿಮಾವನ್ನು ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ದರ್ಶನ್ ಜೊತೆ ದೊಡ್ಡಣ್ಣ, ಸುಮಲತಾ ಸಹ ನಟಿಸುತ್ತಿದ್ದಾರೆ. ಸ್ನೇಹಿತರ ಜೊತೆ ಬೈಕ್ ರೈಡ್ ಹೊರಟ ಚಾಲೆಂಜಿಂಗ್ ಸ್ಟಾರ್

  English summary
  Challening star Darshan played cricket with friends at madikeri. Prajwal devaraj, chaikkann, yashas surya and robert producer umapathy also there with D Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X