ದರ್ಶನ್ ಮಾಜಿ ಮ್ಯಾನೇಜರ್ ಸಿನಿಮಾ ಬ್ಯಾನರ್ ಇನ್ನೂ ಆಕ್ಟಿವ್; ಆದರೂ 'ಮಲ್ಲಿ ಮಿಸ್ಸಿಂಗ್'!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗುತ್ತಿದ್ದಂತೆ ಸಿನಿಮಾರಂಗ ಹಾಗೂ ಜನರು ಬೆಚ್ಚಿಬಿದ್ದಿದ್ದಾರೆ. ಒಂದ್ಕಡೆ ರೇಣುಕಾಸ್ವಾಮಿ ಕೊಲೆ ಕೇಸ್ ದಿನದಿಂದ ದಿನಕ್ಕೆ ಮತ್ತಷ್ಟು ಸ್ಟ್ರಾಂಗ್ ಆಗುತ್ತಲೇ ಇದೆ. ಈ ಮಧ್ಯೆ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಪ್ರಕರಣ ದಿಢೀರನೇ ಆಕ್ಟಿವ್ ಆಗಿದೆ.
ಕಳೆದ ಏಳು ವರ್ಷಗಳಿಂದ ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ದಿಢೀರನೇ ಕಣ್ಮರೆಯಾಗಿದ್ದ. 10 ಕೋಟಿ ರೂಪಾಯಿ ಸಾಲದ ಹೊರೆ ಮಲ್ಲಿಕಾರ್ಜುನ್ ತಲೆ ಮೇಲಿತ್ತು ಅನ್ನೋ ಆರೋಪವಿದೆ. ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಕಣ್ಮರೆಯಾಗುವಾಗ ಸಂದರ್ಭದಲ್ಲಿ ದರ್ಶನ್‌ಗೂ ಯಾಮಾರಿಸಿದ್ದ ಅನ್ನೋ ಸುದ್ದಿನೂ ಹರಿದಾಡಿತ್ತು. ಈ ಕಾರಣಕ್ಕೆ ಮಲ್ಲಿ ನಾಪತ್ತೆಯಾಗಿದ್ದಾನಾ? ಎಲ್ಲಿದ್ದಾನೆ? ಅನ್ನೋ ಪ್ರಶ್ನೆ ಮೂಡಿದೆ.

ಮಲ್ಲಿಕಾರ್ಜುನ್ ಯಶ್ ನಟಿಸಿದ 'ಮೊದಲ ಸಲ' ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಈ ಬೆನ್ನಲ್ಲೇ ನಿರ್ಮಾಣಕ್ಕೆ ಗುಡ್‌ಬೈ ಹೇಳಿ ದರ್ಶನ್‌ಗೆ ಮ್ಯಾನೇಜರ್ ಆಗಿದ್ದರು. ಆಮೇಲೆ ವಿತರಕರಾಗಿ ಗುರುತಿಸಿಕೊಂಡರು. ಸಿನಿಮಾ ವಿತರಣೆ ಕೂಡ ಮಲ್ಲಿಕಾರ್ಜುನ್ ಕೈ ಹಿಡಿದಿರಲಿಲ್ಲ. ದಿಢೀರ್ ಅಂತ ಕಾಣಿಯಾದ ಮಲ್ಲಿಕಾರ್ಜುನ್ ಬಗ್ಗೆ ಒಂದೇ ಒಂದು ಸುಳಿವು ಇಲ್ಲ. ಹಾಗಿದ್ದರೂ ಮಲ್ಲಿ ಬ್ಯಾನರ್ ನಿರ್ಮಾಪಕರ ಸಂಘದಲ್ಲಿ ಮರುನೋಂದಣಿ ಆಗಿದ್ದೇಗೆ? ತಿಳಿಯಲು ಮುಂದೆ ಓದಿ.
'ಮೊದಲ ಸಲ' ಸಿನಿಮಾವನ್ನು ಮಲ್ಲಿಕಾರ್ಜುನ್ ಹಾಗೂ ಯೋಗೀಶ್ ನಾರಾಯಣ್ ಜಂಟಿಯಾಗಿ ನಿರ್ಮಿಸಿದ್ದರು. ಹೀಗಾಗಿ ಇಬ್ಬರ ಹೆಸರಿನಲ್ಲಿ 'ಕರ್ನಾಟಕ ಟಾಕೀಸ್' ಅನ್ನುವ ಬ್ಯಾನರ್ ನಿರ್ಮಾಪಕರ ಸಂಘದಲ್ಲಿ ರಿಜಿಸ್ಟರ್ ಆಗಿತ್ತು. ಅದು ಮಲ್ಲಿಕಾರ್ಜುನ್ ಅನುಪಸ್ಥಿತಿಯಲ್ಲಿಯೂ ಕಾಲ ಕಾಲಕ್ಕೆ ಮರುನೋಂದಣಿ ಆಗುತ್ತಾ ಬಂದಿದೆ. ಅದು ಹೇಗಾಯ್ತು? ಮಲ್ಲಿಕಾರ್ಜುನ್ ಅವರೇ ಮಾಡಿದ್ರಾ? ಎಲ್ಲಿಂದ ಮಾಡಿದ್ರು? ಅನ್ನೋ ಪ್ರಶ್ನೆ ಹುಟ್ಟುತ್ತೆ.
'ಕರ್ನಾಟಕ ಟಾಕೀಸ್' ಬ್ಯಾನರ್‌ಗೆ ಮಲ್ಲಿಕಾರ್ಜುನ್ ಜೊತೆ ಯೋಗೀಶ್ ನಾರಾಯಣ್ ಕೂಡ ಪಾರ್ಟ್ನರ್ ಆಗಿರುವುದರಿಂದ ಅವರೇ ಈ ಬ್ಯಾನರ್ ಅನ್ನು ಮರು ನೋಂದಣಿ ಮಾಡಿರುವ ಸಾಧ್ಯತೆಗಳಿವೆ. ಹೀಗಾಗಿ ಮಲ್ಲಿಕಾರ್ಜುನ್ ಈ ಮರುನೋಂದಣಿ ಮಾಡಿಲ್ಲ ಅನ್ನೋದು ಗೊತ್ತಾಗುತ್ತೆ. ಹೀಗಾಗಿ ಮಲ್ಲಿಕಾರ್ಜುನ್ ಮಿಸ್ಸಿಂಗ್ ಅಂತಲೇ ಅಂದುಕೊಳ್ಳಬಹುದು. ಈತನ ಬಗ್ಗೆ ಈಗ್ಯಾಕೆ ಇಷ್ಟು ಚರ್ಚೆ ಅಂದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಿರುವುದೇ ಇಷ್ಟೆಕ್ಕೆಲ್ಲ ಕಾರಣ.

ಆದರೆ, ಮಲ್ಲಿಕಾರ್ಜುನ್ ಕುಟುಂಬ ಇದೂವರೆಗೂ ದೂರನ್ನು ದಾಖಲು ಮಾಡಿಲ್ಲ. ಹಾಗೇ ಕೆಲವು ವರ್ಷಗಳ ಹಿಂದಷ್ಟೇ ಕ್ಷೇಮವಾಗಿರುವುದಾಗಿ ಲೆಟರ್ ಬರೆದಿದ್ದಾರೆ ಎಂದು ಅವರ ಕುಟುಂಬ ಹೇಳಿಕೊಂಡಿದೆ ಎನ್ನಲಾಗಿದೆ. ಫೋನ್‌ಗಳಿರುವ ಈ ಕಾಲದಲ್ಲಿ ಮಲ್ಲಿಕಾರ್ಜುನ್ ಪತ್ರ ಬರೆಯುವಂತಹ ಪ್ರಸಂಗ ಯಾಕೆ ಬಂತು? ಕರೆ ಮಾಡಿ ಯಾಕೆ ಮಾತಾಡಿಲ್ಲ ಅನ್ನೋ ಪ್ರಶ್ನೆ ಮೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೊತೆಗೆ ಮಲ್ಲಿಕಾರ್ಜುನ್ ನಾಪತ್ತೆಯಾಗಿರುವುದನ್ನು ತನಿಖೆ ಮಾಡಿದರೆ, ಒಂದು ಮಲ್ಲಿಕಾರ್ಜುನ್ ಮರಳಿ ಸಿಗಬಹುದು. ಇಲ್ಲ ಎಲ್ಲಿದ್ದಾರೆ ಅನ್ನೋದು ಗೊತ್ತಾಗಬಹುದು. ಆದರೆ, ಕುಟುಂಬಸ್ಥರೇ ಸೈಲೆಂಟ್ ಆಗಿದ್ದರಿಂದ ಸದ್ಯಕ್ಕೆ ಇದು ಅಸಾಧ್ಯ ಅನಿಸುತ್ತಿದೆ. ಇನ್ನೇನಿದ್ದರೂ ಮಲ್ಲಿಕಾರ್ಜುನ್ ಮುಂದೆ ಬಂದು ನನಗೆ ಏನೂ ಆಗಿಲ್ಲ ಅಂತ ಹೇಳಿಕೆ ಕೊಡಬೇಕು. ಅಲ್ಲಿವರೆಗೂ 'ಮಲ್ಲಿ ಮಿಸ್ಸಿಂಗ್' ಅಂತಲೇ ಹೇಳಬೇಕಾಗುತ್ತೆ.


Click it and Unblock the Notifications











