For Quick Alerts
  ALLOW NOTIFICATIONS  
  For Daily Alerts

  'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ

  |
  ದರ್ಶನ್ ಹೇಳಿದ ಮಾತು ಕೇಳಿ ಕಣ್ಣೀರು ಹಾಕಿದ ಸಂಚಾರಿ ವಿಜಯ್ | Darshan | Sanchari Vijay | Gentleman

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್ ಮ್ಯಾನ್' ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಮೊದಲಿನಿಂದಲೂ ಜೊತೆಯಾಗಿ ನಿಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲೂ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

  ಮುಂಬೈನಲ್ಲೊಬ್ಬ ರಿಯಲ್ 'ಜಂಟಲ್ ಮ್ಯಾನ್': ದಿನಕ್ಕೆ 20 ಗಂಟೆ ನಿದ್ದೆ!ಮುಂಬೈನಲ್ಲೊಬ್ಬ ರಿಯಲ್ 'ಜಂಟಲ್ ಮ್ಯಾನ್': ದಿನಕ್ಕೆ 20 ಗಂಟೆ ನಿದ್ದೆ!

  ಈ ವೇಳೆ ವೇದಿಕೆ ಮೇಲೆ ಮಾತನಾಡುತ್ತಿದ್ದ ಡಿ-ಬಾಸ್ ಕೆಲವು ವಿಚಾರಕ್ಕೆ ಬೇಸರ ಮಾಡಿಕೊಂಡರು. ಕನ್ನಡ ಇಂಡಸ್ಟ್ರಿಯಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಅಸಹ್ಯ ವ್ಯಕ್ತಪಡಿಸಿದರು.

  ಅಷ್ಟಕ್ಕೂ, ದರ್ಶನ್ ಬೇಸರವಾಗಲು ಕಾರಣವೇನು? ಯಾವ ವಿಷಯ ವಿರುದ್ಧ ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ ಕೊಟ್ಟಿದ್ದು? ಮುಂದೆ ಓದಿ....

  ಸಂಚಾರಿ ವಿಜಯ್ ಬಹಳ ದೊಡ್ಡ ನಟ

  ಸಂಚಾರಿ ವಿಜಯ್ ಬಹಳ ದೊಡ್ಡ ನಟ

  ಜಂಟಲ್ ಮ್ಯಾನ್ ಸಿನಿಮಾ ಹಾಡು, ಟ್ರೈಲರ್ ಮೆಚ್ಚಿಕೊಂಡು ದರ್ಶನ್ ಇಂಡಸ್ಟ್ರಿಯಲ್ಲಿನ ಬೆಳವಣಿಗೆ ಕುರಿತು ಬೇಸರ ವ್ಯಕ್ತಡಿಸಿದ್ದಾರೆ. ''ದಯವಿಟ್ಟು ಕನ್ನಡಿಗರು ಸ್ವಲ್ಪ ಎದ್ದೇಳಿ ಎಂದು ಕೇಳಿಕೊಳ್ಳುತ್ತೇನೆ. ಸಂಚಾರಿ ವಿಜಯ್ ಅವರು ಬಹಳ ದೊಡ್ಡ ನಟರು. ನಾನು ಅವನಲ್ಲ ಅವಳು ನೋಡಿದೆ, ಅವರ ಮೇಲೆ ಫಿದಾ ಆಗ್ಬಿಟ್ಟೆ. ಒಳ್ಳೆಯ ಪ್ರಯತ್ನ ಇತ್ತು. ಅದೇ ಬೇರೆ ಭಾಷೆಯಲ್ಲಿ ಆಗಿದ್ರೆ ಚಪ್ಪಾಳೆ ಹೊಡೆದು, ದುಡ್ಡು ಕೊಟ್ಟು ಕಳುಹಿಸುತ್ತಿದ್ವಿ'' ಎಂದು ಬೇಸರದ ಮಾತನ್ನಾಡಿದರು.

  ಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆ

  ಇದು ನಿಜವಾಗಲೂ ಅಸಹ್ಯ

  ಇದು ನಿಜವಾಗಲೂ ಅಸಹ್ಯ

  ''ಇದು ನಿಜವಾಗಲು ಅಸಹ್ಯ ಅನಿಸುತ್ತೆ. ನಾವು ಕನ್ನಡಿಗರು ಎಂದು ಹೇಳಲು ಹೆಮ್ಮೆ ಆಗುತ್ತೆ. ಆದರೆ, ಆ ಕಡೆ ಈ ಕಡೆ ನೋಡ್ಕೊಂಡು ನಮ್ಮವರನ್ನು ಬಿಟ್ಟು ಬಿಡ್ತೀವಿ'' ಎಂದು ಹೇಳುವ ಮೂಲಕ ನೆರೆದಿದ್ದವರು ಯೋಚಿಸುವಂತೆ ಮಾಡಿದರು.

  ಅಂದು ರಸ್ತೆಯಲ್ಲಿ ನಿಂತು ದರ್ಶನ್ ಸನ್ಮಾನ ನೋಡಿದ ಬಾಲಕ ಈಗ ಸ್ಟಾರ್ಅಂದು ರಸ್ತೆಯಲ್ಲಿ ನಿಂತು ದರ್ಶನ್ ಸನ್ಮಾನ ನೋಡಿದ ಬಾಲಕ ಈಗ ಸ್ಟಾರ್

  ತಂತ್ರಜ್ಞ ಸಿನಿಮಾ ನಿರ್ಮಿಸುವುದು ಗ್ರೇಟ್

  ತಂತ್ರಜ್ಞ ಸಿನಿಮಾ ನಿರ್ಮಿಸುವುದು ಗ್ರೇಟ್

  ''ಒಬ್ಬ ತಂತ್ರಜ್ಞ ಒಂದು ಸಿನಿಮಾ ನಿರ್ಮಾಣ ಮಾಡ್ತಾರೆ ಅಂದ್ರೆ ನಿಜಕ್ಕೂ ಗ್ರೇಟ್. ಒಬ್ಬ ನಿರ್ದೇಶಕ ಆಗಿದ್ದವರು ನಿರ್ಮಾಪಕರಾಗಿ ಬೇರೆ ತಂತ್ರಜ್ಞರ ಜೊತೆ ಸಿನಿಮಾ ಮಾಡುವುದು ಉತ್ತಮ ಬೆಳವಣಿಗೆ. ಯಾಕಂದ್ರೆ ನಾನು ಒಬ್ಬ ತಂತ್ರಜ್ಞ. ಕನ್ನಡಿಗರು ಇಂತಹ ಸಿನಿಮಾಗಳನ್ನ ಬೆಂಬಲಿಸಿ'' ಎಂದು ಮನವಿ ಮಾಡಿದರು.

  ಅಂಡ ಬಗ್ಗಿಸಿಕೊಂಡು ಚಿತ್ರ ನೋಡಿ

  ಅಂಡ ಬಗ್ಗಿಸಿಕೊಂಡು ಚಿತ್ರ ನೋಡಿ

  ''ಬೇರೆ ಭಾಷೆ ಚಿತ್ರ ನೋಡಿರ್ತಾರೆ...ನಮ್ಮ ಸಿನಿಮಾಗಳನ್ನು ನೋಡಲ್ಲ, ಸಿಕ್ಕಾಗ 'ಏನ್ ದರ್ಶನ್ ನಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಬರಲ್ಲ' ಅಂತಾರೆ...'ಸ್ವಲ್ಪ ಅಂಡ ಬಗ್ಗಿಸಿ ಕೂತ್ಕೊಂಡು ಇಂತಹ ಸಿನಿಮಾ ನೋಡ್ರಯ್ಯಾ...ಗೊತ್ತಾಗುತ್ತೆ...'' ಎಂದು ಡಿ ಬಾಸ್ ಕನ್ನಡ ಚಿತ್ರಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

  English summary
  Kannada actor challenging star darshan expressed displeasure against some kannada film audience and critics In Gentleman Press Meet

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X