ಕಿಚ್ಚ ಸುದೀಪ್ ಬಳಿ ಕ್ಷಮೆಯಾಚಿಸಿದ ದರ್ಶನ್ ಅಭಿಮಾನಿ: ಯಾಕೆ?
ಕಿಚ್ಚ ಸುದೀಪ್ ಮತ್ತು ಡಿ ಬಾಸ್ ದರ್ಶನ್ ಅಭಿಮಾನಿಗು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೆ ಇಬ್ಬರ ಅಭಿಮಾನಿಗಳ ನಡುವಿನ ಜಗಳ ತಾರಕಕ್ಕೇರಿತ್ತು. ಇನ್ನೇನು ತಣ್ಣಗಾಯಿತು ಎನ್ನುವಷ್ಟೊತ್ತಿಗೆ ಮತ್ತೆ ಕಿತ್ತಾಟ ಪ್ರಾರಂಭಿಸುತ್ತಾರೆ. ದರ್ಶನ್ ಹೆಸರಿನ ಅಭಿಮಾನಿಯೊಬ್ಬ ಮಾಡಿರುವ ಕೆಲಸಕ್ಕೆ ಡಿ ಬಾಸ್ ನಿಜವಾದ ಅಭಿಮಾನಿಗಳು ತಲೆತಗ್ಗಿಸುವಂತಾಗಿದೆ.
Recommended Video
ಸುದೀಪ್ ಯಾವುದಾದರು ಪೋಸ್ಟ್ ಸಾಕು ಅಭಿಮಾನಿಗಳ ಹೆಸರಿನಲ್ಲಿ ಒಂದಿಷ್ಟು ಮಂದಿ ಕೆಟ್ಟದಾಗಿ ಕಾಮೆಂಟ್ ಮಾಡಿ ವಿಕೃತಿ ಮೆರೆಯುತ್ತಾರೆ. ಅದೂ ಡಿ ಬಾಸ್ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಕಾಮೆಂಟ್ ಮಾಡಿ, ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವೆ ತಂದಿಟ್ಟು ಮಜಾ ನೋಡುತ್ತಿರುತ್ತಾರೆ.
ಇತ್ತೀಚಿಗೆ ಸುದೀಪ್ ಟ್ವಿಟ್ಟರ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಗೆ ದರ್ಶನ್ ಅಭಿಮಾನಿಯ ಹೆಸರಿನಲ್ಲಿ ಬಾಯಿಗೆ ಬಂದ ಹಾಗೆ ಬೈದು ಸುದೀಪ್ ಗೆ ಕಾಮೆಂಟ್ ಮಾಡಿದ್ದರು. ಈ ಪೋಸ್ಟ್ ಅನ್ನು ಸುದೀಪ್ ರಿ ಟ್ವೀಟ್ ಮಾಡಿ ವ್ಯಕ್ತಿಯನ್ನು ಹುಡುಕಿಕೊಡುವಂತೆ ಹೇಳಿದ್ದರು. ಆ ನಂತರ ದರ್ಶನ್ ಅಭಿಮಾನಿಗಳು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಮುಂದೆ ಓದಿ...

ಸುದೀಪ್ ಪೋಸ್ಟ್ ಗೆ ಅಭಿಮಾನಿಯ ಕೆಟ್ಟ ಕಾಮೆಂಟ್
ಸುದೀಪ್ ಕೋಟಿಗೊಬ್ಬ-3 ಟೀಸರ್ ವಿಚಾರವಾಗಿ ಒಂದು ಪೋಸ್ಟ್ ಹಾಕಿದ್ದರು. ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ್ದನ್ನು ನೋಡಿ ಶಶಿ ಎನ್ನುವ ವ್ಯಕ್ತಿ ಅಶ್ಲೀಲ ಪದಗಳನ್ನು ಬಳಸಿ ಸುದೀಪ್ ಗೆ ಕಾಮೆಂಟ್ ಮಾಡಿದ್ದಾರೆ. ಸುದೀಪ್ 25 ವರ್ಷದ ಚಿತ್ರರಂಗದ ಜೀವನವನ್ನು ಬಕೆಟ್ ಜೀವನ ಎಂದು ಹೇಳಿ ಸುದೀಪ್ ಅನ್ನು ಅವಮಾನ ಮಾಡಿದ್ದಾರೆ.

ಸುದೀಪ್ ಪ್ರತಿಕ್ರಿಯೆ
ಶಶಿ ಕೆಟ್ಟ ಪದಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದಂತೆ ಸುದೀಪ್ "ಯಾರಾದರು ಈ ವ್ಯಕ್ತಿಯನ್ನು ಹುಡುಕಿ ಕೊಡಿ" ಎಂದು ರಿ ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಕೇಳಿ ಕೊಂಡಿದ್ದಾರೆ. ಸುದೀಪ್ ಹುಡುಕಿ ಕೊಡಿ ಎನ್ನುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಹುಡುಕಲು ಪ್ರಾರಂಭಿಸಿದರು. ಅಂದ್ಹಾಗೆ ಶಶಿ ಎನ್ನುವ ವ್ಯಕ್ತಿಯ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ಡಿ ಬಾಸ್ ದರ್ಶನ್ ಅಭಿಮಾನಿ ಎಂದು ಇದೆ.

ಏನ್ ಬೆದರಿಕೆ ಹಾಕುತ್ತಿದ್ದೀರಾ?
ಸುದೀಪ್ ಈ ವ್ಯಕ್ತಿಯನ್ನು ಹುಡುಕಿ ಕೊಡಿ ಎಂದು ಟ್ವೀಟ್ ಮಾಡುತ್ತಿದ್ದಂತೆ ಮತ್ತೊಬ್ಬ ವ್ಯಕ್ತಿ ಏನ್ ಬೆದರಿಕಿ ಹಾಕುತ್ತಿದ್ದೀರಾ? ಎಂದು ಕಿಚ್ಚನಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ "ಈ ವ್ಯಕ್ತಿಯನ್ನು ಭೇಟಿಯಾಗಿ ಇನ್ನೊಬರ ಜೊತೆ ಹೇಗೆ ಮಾತನಾಡಬೇಕು ಎನ್ನುವುದನ್ನು ತಿಳಿಸಿಕೊಡಬೇಕಿದೆ" ಎಂದು ಹೇಳಿದ್ದಾರೆ.

ಕ್ಷಮೆಯಾಚಿಸಿದ ದರ್ಶನ್ ಅಭಿಮಾನಿ
ಡಿ ಬಾಸ್ ಅಭಿಮಾನಿಯ ಹೆಸರಿನಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದನ್ನು ನೋಡಿ ದರ್ಶನ್ ಅಭಿಮಾನಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. "ನಮ್ಮ ಕಡೆಯಿಂದ ಕ್ಷಮೆಯಾಚಿಸುತ್ತೇವೆ. ನಮ್ಮ ಅಭಿಮಾನಿ ಮಾಡಿರುವುದು ತಪ್ಪು. ನಾವು ನಿಮ್ಮ ಕೆಲಸವನ್ನು ಗೌರವಿಸುತ್ತೇವೆ. ನಿಮ್ಮ ಮತ್ತು ಡಿ ಬಾಸ್ ಸ್ನೇಹವನ್ನು ನಾವು ಎಂದಿಗೂ ಮರೆಯಲ್ಲ. ಮತ್ತೆ ಸ್ನೇಹಿತರಾಗಿ. ಇಂಥ ಕೊಳಕು ಅಭಿಮಾನಿಗಳಿಂದ ನೀವು ಬೇಸರ ಆಗುವುದಿಲ್ಲ ಎಂದು ಭಾವಿಸುತ್ತೇನೆ" ಎಂದು ಡಿ ಬಾಸ್ ಅಭಿಮಾನಿ ಕ್ಷಮೆಯಾಚಿಸಿದ್ದಾರೆ.

ನಾನು ಯಾವಾಗಲು ನಿಮ್ಮನ್ನು ಪ್ರೀತಿಸುತ್ತೇನೆ
ದರ್ಶನ್ ಅಭಿಮಾನಿಯೊಬ್ಬ ಕ್ಷಮೆ ಕೇಳಿ ಪೋಸ್ಟ್ ಮಾಡಿದ ನಂತರ ಸುದೀಪ್ ಆ ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಿಮ್ಮೆಲ್ಲರನ್ನು ನಾನು ತುಂಬ ಪ್ರೀತಿಸುತ್ತೇನೆ. ಇವತ್ತು ಮತ್ತು ಯಾವಾಗಲು" ಎಂದು ಹೇಳಿದ್ದಾರೆ. ಡಿ ಬಾಸ್ ಅಭಿಮಾನಿಯ ಪ್ರತಿಕ್ರಿಯೆಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಶಶಿ ಟ್ವಿಟ್ಟರ್ ಟ್ವೀಟ್ ಡಿಲೀಟ್ ಆಗಿದೆ. ಅಲ್ಲದೆ ಟ್ವಿಟ್ಟರ್ ನಿಂದನೆ ಹೊರನಡೆದಿದ್ದಾರೆ.


Click it and Unblock the Notifications











